
ನ್ಯೂಜಿಲೆಂಡ್(ಸೆ. 22) ಕೊರೋನಾ ನಿಯಂತ್ರಣದಲ್ಲಿ ನ್ಯೂಜಿಲೆಂಡ್ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಅಕ್ಲೆಂಡ್ ನಲ್ಲಿ ಲಾಕ್ ಡೌನ್ ನಿಯಮ ಸಡಿಲ ಮಾಡಿದ ನಂತರದ ಕಾರ್ಯಕ್ರಮವೊಂದರಲ್ಲಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡನ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ವೇಳೆ ಕೊರೋನಾ ಸಾಮಾಜಿಕ ಅಂತರ ಮೀರಿದ್ದರು.
ಆದರೆ ಈ ವಿಚಾರ ಚರ್ಚೆಗೆ ಬರುತ್ತರಲೇ ಜಸಿಂಡಾ ಅರ್ಡನ್ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿ ತಮ್ಮ ದೊಡ್ಡತನ ಮೆರೆದಿದ್ದಾರೆ.
ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನ್ಯೂಜಿಲೆಂಡ್ ಪ್ರಧಾನಿ
ಪಾಲ್ ಮೋರ್ಸಟನ್ ಉತ್ತರದ ಪ್ರವಾಸಲ್ಲಿ ಪ್ರಧಾನಿ ಇದ್ದರು. ಈ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದು ಕೊರೋನಾದ 1.5 ಮೀಟರ್ ಅಂತರ ಮೀರಿದ್ದರು . ಈ ಕಾರಣಕ್ಕೆ ದೇಶದ ಪ್ರಧಾನಿಯೇ ಕ್ಷಮೆ ಕೇಳಿದ್ದಾರೆ.
ಇಂಥ ಬೆಳವಣಿಗೆ ನಮ್ಮ ದೇಶದಲ್ಲಿ ಎಲ್ಲ ನೋಡಲು ಅಸಾಧ್ಯ. ಪ್ರಮುಖ ನಾಯಕರು, ಸಚಿವರು ಸಾಮಾಜಿಕ ಅಂತರ ಮರೆತ ಅದೆಷ್ಟೋ ಘಟನೆಗಳು ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ