
ಬೀಜಿಂಗ್(ಸೆ. 22) ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅರರನ್ನು ಟೀಕೆ ಮಾಡಿದ್ದ ಉದ್ಯಮಿ, ವಿಮರ್ಶಕನಿಗೆ 18 ವರ್ಷದ ಜೈಲು ಶಿಕ್ಷೆ ಘೋಷಣೆ ಮಾಡಲಾಗಿದೆ. ಭ್ರಷ್ಟಾಚಾರ, ವಂಚನೆ, ಸಾರ್ವಜನಿಕರ ಹಣ ದುರುಪಯೋಗ ಆರೋಪ ಹೊರೆಸಿ ಶಿಕ್ಷೆ ನೀಡಲಾಗಿದೆ. ರೆನ್ ಜಿಕ್ವಾಂಗ್ ಶಿಕ್ಷಗೆ ಗುರಿಯಾಗಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿಯ ಜತೆಯಲ್ಲೇ ಗುರುತಿಸಿಕೊಂಡಿದ್ದ ಉದ್ಯಮಿ ರೆನ್ ಜಿಕ್ವಾಂಗ್ ಕೊರೋನಾ ಅಬ್ಬರದ ವೇಳೆ ಕಳೆದ ಮಾರ್ಚ್ ಮಾನಲ್ಲಿ ಸಾಮಾಜಿಕ ಕ್ಷೇತ್ರದಿಂದ ಕಣ್ಮರೆಯಾಗಿದ್ದರು.
ಭಾರತದ ವಿರುದ್ದ ಯಾವೆಲ್ಲ ಮಸಲತ್ತು ಮಾಡಿದ್ದ ಜಿನ್ ಪಿಂಗ್
ನಂತರ ಬೇರೆ ಹೆಸರಿನಲ್ಲಿ ಚೀನಾ ಅಧ್ಯಕ್ಷರನ್ನು ಟೀಕೆ ಮಾಡುತ್ತಿದ್ದರು. ಚೀನಾದಲ್ಲಿನ ಇಂಟರ್ ನೆಟ್ ಬಳಕೆ, ಕೊರೋನಾ ವೇಳೆ ತೆಗೆದುಕೊಂಡ ಕ್ರಮ ಎಲ್ಲವನ್ನು ಟೀಕೆ ಮಾಡಿದ್ದರು.
ರಾಜಕಾರಣಿಗಳೊಂದಿಗೆ ತಮಗೆ ಇದ್ದ ಸಂಬಂಧ, ಅವರ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದರು. ಇದೀಗ ಹೇಳಿಕೆ ನೀಡಿ ಚೀನಾ ಅಧ್ಯಕ್ಷರನ್ನು ಟೀಕೆ ಮಾಡಿದವರಿಗೆ 18 ವರ್ಷ ಶಿಕ್ಷೆ ನೀಡಲಾಗಿದೆ.
ಚೀನಾದಲ್ಲಿ ಕಮ್ಯೂನಿಸ್ಟ್ ಆಡಳಿತ ಜಾರಿಯಲ್ಲಿ ಇರುವುದು ಎಲ್ಲರಿಗೂ ಗೊತ್ತು. ಚೀನಾದ ವುಹಾನ್ ಮಾರುಕಟ್ಟೆಯಿಂದಲೇ ಕೊರೋನಾ ಜಗತ್ತಿಗೆ ವ್ಯಾಪಸಿದ್ದಕ್ಕೆ ಅನೇಕ ಸಾಕ್ಟ್ಯಗಳು ಲಭ್ಯವಾಗಿವೆ. ಕೊರೋನಾ ಕಾರಣಕ್ಕೆ ಇಡೀ ಜಗತ್ತೆ ಚೀನಾವನ್ನು ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ