ಬಿಕ್ಸ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ನಾಯಕರು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಈ ಶೃಂಗದ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಜುಗರಕ್ಕೀಡಾದ ಘಟನೆಯೊಂದು ನಡೆದಿದೆ.
ಜೋಹಾನ್ಸ್‌ಬರ್ಗ್: ಬಿಕ್ಸ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ನಾಯಕರು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಈ ಶೃಂಗದ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಜುಗರಕ್ಕೀಡಾದ ಘಟನೆಯೊಂದು ನಡೆದಿದೆ. ಕ್ಸಿ ಜಿನ್‌ಪಿಂಗ್ ಸಹಾಯಕ ಸಿಬ್ಬಂದಿಯನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಒಳಗೆ ಹೋಗಲು ಬಿಡದೇ ತಡೆದ ಘಟನೆ ನಡೆದಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 5 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ.
ವೀಡಿಯೋದಲ್ಲಿ ಚೀನಾದ ನಾಯಕನ ಬಾಡಿಗಾರ್ಡ್‌ನನ್ನು ಹಿಂದಿನಿಂದ ಎಳೆದು ಹಾಕಿ ಆತ ಒಳಗೆ ಹೋಗದಂತೆ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಕೂಡಲೇ ಭಾರಿ ಭದ್ರತೆ ಇದ್ದ ಸಂಕೀರ್ಣದ ಬಾಗಿಲು ಮುಚ್ಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ (Johannesburg) ನಡೆಯುತ್ತಿರುವ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (15th BRICS summit) ಈ ಘಟನೆ ನಡೆದಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಜೊತೆಯೇ ಓಡೋಡಿ ಬಂದ ಆತನ ಬಾಡಿಗಾರ್ಡ್‌ನನ್ನು ಏಕೆ ತಡೆಯಲಾಯಿತು ಎಂದು ತಿಳಿದು ಬಂದಿಲ್ಲ,
ವಿದೇಶದಲ್ಲಿ ನೆಲದ ಮೇಲಿದ್ದ ರಾಷ್ಟ್ರಧ್ವಜ ಎತ್ತಿ ಜೇಬಿನಲ್ಲಿರಿಸಿ ಗೌರವ ಸೂಚಿಸಿದ ಪ್ರಧಾನಿ: ವಿಡಿಯೋ ವೈರಲ್
ಆದರೆ ಕ್ಸಿ ಜಿನ್‌ಪಿಂಗ್ (Chinese President) ಇದನ್ನು ತಿಳಿದು ಕೂಡ ಮುಂದೆ ಸಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಕ್ಸಿ ಜಿನ್‌ಪಿಂಗ್ (Xi Jinping) ಶೃಂಗಸಭೆ ನಡೆಯಬೇಕಿದ್ದ ಹಾಲ್‌ಗೆ ಎಂಟ್ರಿ ನೀಡುತ್ತಿದ್ದಂತೆ ಆತನ ಜೊತೆಯೇ ಈ ಬಾಡಿಗಾರ್ಡ್ ಬಂದಿದ್ದಾರೆ. ಆದರೆ ಆತನನ್ನು ಅಲ್ಲೇ ತಡೆ ಹಿಡಿದು ಕೆಳಗೆ ಬೀಳಿಸಲಾಗಿದ್ದು, ಕೂಡಲೇ ಬಾಗಿಲು ಬಂದ್ ಆಗುತ್ತದೆ. ಕ್ಸಿಜಿನ್‌ಪಿಂಗ್ ತಿರುಗಿ ನೋಡುವಷ್ಟರಲ್ಲಿ ಬಾಗಿಲು ಕ್ಲೋಸ್ ಆಗಿದ್ದು, ಏನಾಗಿದೆ ಎಂಬುದು ಚೀನಾ ಅಧ್ಯಕ್ಷರು ತಿರುಗಿ ನೋಡುವ ಮೊದಲೇ ಬಾಗಿಲು ಬಂದ್ ಆಗಿದೆ. ಸೆಕ್ಯೂರಿಟಿ ಗಾರ್ಡ್‌ಗಳ ಈ ವರ್ತನೆ ಸಂಶಯಕ್ಕೆ ಕಾರಣವಾಗಿದೆ.
ಅಲ್ಲದೇ ಇದರಿಂದ ಕ್ಸಿ ಜಿನ್‌ಪಿಂಗ್ (Chinese leader) ಕೂಡ ಗೊಂದಲಕ್ಕೊಳಗಾಗಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಅವರು ಹಲವು ಬಾರಿ ಏನಾಗಿದೆ ಎಂದು ತಿಳಿಯಲು ತಿರುಗಿ ತಿರುಗಿ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಷ್ಯಾ ಸರ್ಕಾರ ನಡೆಸುವ ಚಾನೆಲ್ ರಷ್ಯಾ ಮಾಧ್ಯಮವೂ ಈ ಬಗ್ಗೆ ವರದಿ ಮಾಡಿದ್ದು, ಚೈನೀಸ್ ಅಧಿಕಾರಿಯನ್ನು ಬ್ರಿಕ್ಸ್ ಶೃಂಗಸಭೆಯಲ್ಲಿ ತಡೆಯಲಾಯಿತು ಎಂದು ವರದಿ ಮಾಡಿದೆ.
ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ: ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
Xi Jinping's bodyguard was detained at the BRICS summit in South Africa
The bodyguard of the Chinese leader lagged behind him and tried to catch up. But the security service pinned down him and closed the door. pic.twitter.com/WGKyBBFU86