
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವಿಫಲ ದಂಗೆಯ ನೇತೃತ್ವ ವಹಿಸಿದ್ದ ವ್ಯಾಗ್ನರ್ ಬಂಡುಕೋರ ಸೇನಾ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೆಲವು ರಷ್ಯಾ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಮಾಸ್ಕೋದಿಂದ ಸೇಂಟ್ ಪೀಟರ್ಸ್‌ಬಗ್‌ರ್‍ಗೆ ತೆರಳುತ್ತಿದ್ದ ವಿಮಾನ ಮಾಸ್ಕೋ ಸನಿಹ ಪತನಗೊಂಡಿದೆ ಎಂದು ವರದಿಗಳು ಹೇಳಿವೆ. ಈ ಅಪಘಾತದಲ್ಲಿ ಮೂವರು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 10 ಜನರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ಯೆವ್ಗೆನಿ ಪ್ರಿಗೊಜಿನ್ ಹೆಸರು ಕೂಡ ಇತ್ತು. ಆದರೆ ನಿಜವಾಗಿಯೂ ಅವರು ವಿಮಾನ ಹತ್ತಿದ್ದರೆ ಎಂಬುದು ದೃಢಪಟ್ಟಿಲ್ಲ ಎಂದು ವರದಿಗಳು ಹೇಳಿವೆ. ಈ ಕುಖ್ಯಾತ ಸೇನಾಧಿಕಾರಿ ಜೂನ್‌ನಲ್ಲಿ ಪುಟಿನ್ ವಿರುದ್ಧ ವಿಫಲ ದಂಗೆಯನ್ನು ಪ್ರಾರಂಭಿಸಿದ್ದರು. ಇದೇ ವೇಳೆ, ಇನ್ನು ಕೆಲವು ಮಾಧ್ಯಮ ವರದಿಗಳು, ವಿಮಾನವನ್ನು ರಷ್ಯಾ ಸೇನೆ ಹೊಡೆದುರುಳಿಸಿದೆ. ಪುಟಿನ್ ಈ ಮೂಲಕ ಪ್ರಿಗೋಜಿನ್ ಮೇಲೆ ಸೇಡು ತೀರಿಸಿಕೊಂಡಿರಬಹುದು ಎಂದು ಹೇಳಿವೆ.
ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್ ಮೇಲುಗೈ ಸಾಧಿಸೋಕೆ ಇದೇ ಕಾರಣ..!
ರಷ್ಯಾ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದ ಪ್ರಿಗೋಝಿನ್ ಸಾವು? ವ್ಯಾಗ್ನರ್‌ಗೆ ಹೊಸ ಬಾಸ್ ಆಯ್ಕೆ ಮಾಡಿದ ಪುಟಿನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ