ಶಾಂಘೈ: ಕೆಲವೊಮ್ಮೆ ಸಿಟ್ಟಿನ ಕೈಗೆ ಬುದ್ದಿ ಕೊಟ್ಟರೆ ಆಗುವ ಅನಾಹುತ ಅಷ್ಟಿಷ್ಟಲ್ಲ, ಕ್ಷಣದ ಸಿಟ್ಟು ಬದುಕಿನಲ್ಲಿ ದೊಡ್ಡ ಅನಾಹುತವನ್ನೇ ತರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಹೊಟೇಲ್ ಸಿಬ್ಬಂದಿ ಮೇಲೆ ಸಿಟ್ಟುಗೊಂಡ ಕಾರು ಮಾಲೀಕನೋರ್ವ ಹೊಟೇಲ್‌ಗೆ ಕಾರು ನುಗ್ಗಿಸಿದ್ದು, ಇದರಿಂದ ಹೊಟೇಲ್‌ನ ಮುಂಭಾಗದ ಗ್ಲಾಸ್‌ಗಳೆಲ್ಲ ಒಡೆದು ಹೋಗಿದೆ. ಕಾರು ಚಾಲಕ ವೇಗವಾಗಿ ಬಂದು ಹೊಟೇಲ್ ಒಳಗೆ ಕಾರು ನುಗ್ಗಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೀನಾದ (China) ಶಾಂಘೈನಲ್ಲಿರುವ (Shanghai) ಐಷಾರಾಮಿ ಹೊಟೇಲ್ ಇದಾಗಿದ್ದು, ಕಾರು (Car) ನುಗ್ಗಿಸಿದ ರಭಸಕ್ಕೆ ಹೊಟೇಲ್‌ನ ಮುಂಭಾಗದ ಗಾಜಿನ ಗ್ಲಾಸ್‌ಗಳೆಲ್ಲವೂ ಒಡೆದು ಬಿದ್ದಿದೆ. ಹೀಗೆ ಹೊಟೇಲ್ ಒಳಗೆ ಕಾರು ನುಗ್ಗಿಸಿದ ವ್ಯಕ್ತಿಯನ್ನು ಛೇನ್ ಎಂದು ಗುರುತಿಸಲಾಗಿದೆ. ಈತ ಹೋಟೇಲ್‌ನಲ್ಲಿ ಉಳಿಯಲು ಆಗಮಿಸಿದ್ದು, ಈ ಸಮಯದಲ್ಲಿ ಹೊಟೇಲ್‌ನಲ್ಲಿ ಈತನ ಲ್ಯಾಪ್‌ಟಾಪ್ (Laptop) ಕಳ್ಳತನವಾಗಿದೆ. ಹೀಗಾಗಿ ಈತ ಹೊಟೇಲ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಇದೇ ಕಾರಣಕ್ಕೆ ರೊಚ್ಚಿಗೆದ್ದ ಆತ ಹೊಟೇಲ್‌ನಿಂದ ಹೊರಗೆ ಬಂದವನೇ ತನ್ನ ಕಾರನ್ನು ತೆಗೆದುಕೊಂಡು ಬಂದು ಹೊಟೇಲ್ ಮುಂಭಾಗದ ಪಾರದರ್ಶಕ ಗಾಜುಗಳಿಗೆ ಡಿಕ್ಕಿ ಹೊಡೆಸಿ ಕಾರನ್ನು ಹೊಟೇಲ್ ಒಳಗೆ ನುಗ್ಗಿಸಿ ಹೊಟೇಲ್ ಒಳಗೆಲ್ಲಾ ಕಾರನ್ನು ಓಡಿಸಿದ್ದಾನೆ. ಇದರಿಂದ ಕಾರಿಗೆ ಎದುರು ಸಿಕ್ಕಿದ ವಸ್ತುಗಳೆಲ್ಲವೂ ನಜ್ಜುಗುಜ್ಜಾಗಿದೆ. ಆದರೆ ಈ ಘಟನೆಯಲ್ಲಿ ಹೊಟೇಲ್ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.
ಸ್ವೀಟ್ ತಿನ್ನೇ ಎಂದು ಒತ್ತಾಯಿಸಿದ ವರ, ಸಿಟ್ಟಿಗೆದ್ದು ಹೊಡ್ದೇಬಿಟ್ಲು ಭಾವಿ ಹೆಂಡ್ತಿ !
ಬಿಳಿ ಬಣ್ಣದ ಕಾರು ಹೀಗೆ ಹೋಟೇಲ್‌ಗೆ ನುಗ್ಗುತ್ತಿರುವುದನ್ನು ನೋಡಿ ಅಲ್ಲಿದ್ದ ಗ್ರಾಹಕರು ಸಿಬ್ಬಂದಿ ಏನಾಯ್ತು ಎಂದು ಒಬ್ಬರನ್ನೊಬ್ಬರು ಕೇಳಿಕೊಂಡು ಅತ್ತ ನೋಡುವಷ್ಟರಲ್ಲಿ ಕಾರು ಹೊಟೇಲ್ ಒಳಗೆಲ್ಲಾ ಓಡಾಡಿದೆ. ನಿನ್ನೆ ಮುಂಜಾನೆ ಈ ಘಟನೆ ನಡೆದಿದ್ದು, ಹೀಗೆ ಹೊಟೇಲ್ ಒಳಗೆ ಕಾರು ನುಗ್ಗಿಸಿದವನನ್ನು 28 ವರ್ಷದ ಛೇನ್ ಎಂದು ಗುರುತಿಸಲಾಗಿದೆ. ಆದರೆ ಈ ಅನಾಹುತದಲ್ಲಿ ಯಾರು ಗಾಯಗೊಂಡಿಲ್ಲ ಎಂದು ಸೋಶೀಯಲ್ ಮೀಡಿಯಾದಲ್ಲಿ (social Media) ಪೋಸ್ಟ್ ಮಾಡಲಾಗಿದೆ. ಘಟನೆಯ ಬಳಿಕ ಯುವಕ ಚೇನ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೆಲ್ಮೆಟ್ ಧರಿಸದ್ದಕ್ಕೆ ದಂಡ: ಸಿಟ್ಟಿಗೆದ್ದು ಬಿಲ್ ಕಟ್ಟದ ಪೊಲೀಸ್ ಠಾಣೆಯ ಪವರ್ ಕಟ್ ಮಾಡಿದ ಲೈನ್‌ಮ್ಯಾನ್
ಆದರೆ ಈತನ ನಾಪತ್ತೆಯಾದ ಲ್ಯಾಪ್‌ಟಾಪ್ ಹೊಟೇಲ್ ಹೊರಗೆ ಸಿಕ್ಕಿದೆ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ ಎಂದು ವರದಿ ಆಗಿದೆ. ಅಲ್ಲದೇ ಹೊಟೇಲ್‌ಗೆ ಕಾರು ನುಗ್ಗಿಸಿದ್ದರಿಂದ ಹೊಟೇಲ್‌ನ ಗಾಜಿನ ಬಾಗಿಲುಗಳ ಮತ್ತೊಂದು ಸೆಟ್ ಕೂಡ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಹೊಟೇಲ್ (Hotel) ಸಿಬ್ಬಂದಿ ಹಾಗೂ ನೋಡುಗರು ಜೋರಾಗಿ ಗಾಬರಿಯಿಂದ ಬೊಬ್ಬೆ ಹಾಕುವುದನ್ನು ಕಾಣಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ