ಟರ್ಕಿಶ್ ಐಸ್‌ಕ್ರೀಂ ವೆಂಡರ್‌ಗೆ ಬುದ್ದಿ ಕಲಿಸಿದ ವ್ಯಕ್ತಿ: ನೋಡಿ ವೈರಲ್ ವಿಡಿಯೋ

Published : Jan 11, 2023, 04:43 PM IST
ಟರ್ಕಿಶ್ ಐಸ್‌ಕ್ರೀಂ ವೆಂಡರ್‌ಗೆ ಬುದ್ದಿ ಕಲಿಸಿದ  ವ್ಯಕ್ತಿ: ನೋಡಿ ವೈರಲ್ ವಿಡಿಯೋ

ಸಾರಾಂಶ

ಟರ್ಕಿಶ್ ಐಸ್‌ಕ್ರೀಂ ವ್ಯಾಪಾರಿಯ ತುಂಟಾಟವನ್ನು ನೀವು ಅನೇಕ  ವಿಡಿಯೋಗಳಲ್ಲಿ ನೋಡಿರಬಹುದು.  ಅದೇ ರೀತಿ ಇಲ್ಲಿ ಐಸ್‌ಕ್ರೀಂ ತಿನ್ನಲು ಬಂದ ಗ್ರಾಹಕರೊಬ್ಬರಿಗೆ ಇದೇ ರೀತಿಯ ಕಿತಾಪತಿ ಮಾಡಲು ಐಸ್‌ಕ್ರೀಂ ವೆಂಡರ್ ಮುಂದಾಗಿದ್ದು, ಈ ವೇಳೆ ಗ್ರಾಹಕ ತಾಳ್ಮೆ ಕಳೆದುಕೊಂಡಿದ್ದಾನೆ. 

ಟರ್ಕಿಶ್ ಐಸ್‌ಕ್ರೀಂ ವ್ಯಾಪಾರಿಯ ತುಂಟಾಟವನ್ನು ನೀವು ಅನೇಕ  ವಿಡಿಯೋಗಳಲ್ಲಿ ನೋಡಿರಬಹುದು.  ಐಸ್‌ಕ್ರೀಂ ತಿನ್ನಲು ತನ್ನ ಬಳಿ ಬರುವ ಗ್ರಾಹಕರಿಗೆ ಸಾಕಷ್ಟು ಕಾಡಿಸಿ ಕಾಡಿಸಿ ಕೊನೆಗೆ ಇವರೇನು ಐಸ್‌ಕ್ರೀಂ ಕೊಡ್ತಾರೋ ಇಲ್ವೋ ಎಂದು ಸಂಶಯ ಬರುವವರೆಗೂ ಕೊಡದೇ ಕಾಡುವ ಐಸ್‌ಕ್ರೀಂ ವ್ಯಾಪಾರಿಯ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು.  ಅದೇ ರೀತಿ ಇಲ್ಲಿ ಐಸ್‌ಕ್ರೀಂ ತಿನ್ನಲು ಬಂದ ಗ್ರಾಹಕರೊಬ್ಬರಿಗೆ ಇದೇ ರೀತಿಯ ಕಿತಾಪತಿ ಮಾಡಲು ಐಸ್‌ಕ್ರೀಂ ವೆಂಡರ್ ಮುಂದಾಗಿದ್ದು, ಈ ವೇಳೆ ಗ್ರಾಹಕ ತಾಳ್ಮೆ ಕಳೆದುಕೊಂಡಿದ್ದಾನೆ. 

ಐಸ್‌ಕ್ರೀಂ ವ್ಯಾಪಾರಿಗೆ (Ice cream Vendor) ಬುದ್ದಿ ಕಲಿಸಬೇಕು ಎಂದು ನೆನೆಸಿಕೊಂಡು ಬಂದಂತೆ ಕಾಣುವ ಈ ಐಸ್‌ಕ್ರೀಂ ಗ್ರಾಹಕ ಟರ್ಕಿಶ್ ಐಸ್‌ಕ್ರೀಂ ವ್ಯಾಪಾರಿ ಆಟವಾಡಲು ಮುಂದಾದಾಗ ಅವರಿಗೆ ತಕ್ಕ ಪಾಠ ಕಲಿಸಲು ನೋಡಿದ್ದಾನೆ. ಐಸ್‌ಕ್ರೀಂ ನೀಡುವ ಸ್ಟಿಕ್ ಅನ್ನು ಗಟ್ಟಿಯಾಗಿ ಗ್ರಾಹಕ ಹಿಡಿದುಕೊಂಡಿದ್ದೇನೆ. ಈ ವೇಳೆ ವ್ಯಾಪಾರಿ ಈ ಸ್ಟಿಕ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಗ್ರಾಹಕ ಮಾತ್ರ ಐಸ್‌ಕ್ರೀಂ ಕೋನ್ ಅನ್ನು ಪಡೆದೇ ತಿರುವೆ ಎಂಬ ಹಠಕ್ಕೆ ಬಿದ್ದಿದ್ದು, ಸ್ಟಿಕ್‌ನಲ್ಲಿರುವ ಕೋನ್ ಕಿತ್ತು ಬಾಯಿಗೆ ಹಾಕಿ ಕಚ ಕಚ ಜಗಿದ್ದು,  ತಿಂದು ಆತ್ಮ ಸಂತೃಪ್ತಿ ಪಡಿಸಿಕೊಂಡಿದ್ದಾನೆ.  ಈ ವಿಡಿಯೋ ನೋಡುಗರ ಮೊಗದಲ್ಲಿ ನಗು ತರಿಸುತ್ತಿದೆ. 

ಐಸ್‌ಕ್ರೀಂ ನೀಡಲು ಕಾಡಿಸಿದ ಮಾರಾಟಗಾರ... ಕೋಪದಿಂದ ಕುದ್ದೋದ ಪುಟಾಣಿ

ಟರ್ಕಿಶ್ ಐಸ್‌ಕ್ರೀಂ ವೆಂಡರ್‌ಗಳು ತಮ್ಮ ಈ ರೀತಿಯ ಹಾಸ್ಯಭರಿತ ತುಂಟಾಟಕ್ಕೆ ಪ್ರಪಂಚದಾದ್ಯಂತ ಫೇಮಸ್ ಆಗಿದ್ದಾರೆ.  ಗ್ರಾಹಕರಿಗೆ ಐಸ್‌ಕ್ರೀಂ ಇಲ್ಲದ ಖಾಲಿ ಕೋನ್ ನೀಡಿ ಕಾಡಿಸುವುದರಿಂದ ಶುರು ಮಾಡಿ ಅವರಿಗೆ ಐಸ್‌ಕ್ರೀಂ ನೀಡುವಲ್ಲಿಯವರೆಗೆ ಹಲವು ಬಾರಿ ಅವರನ್ನು ಮೇಲೆ ಕೆಳಗೆ ಮಾಡುತ್ತಾರೆ.  ಈ ಕಲೆಯಲ್ಲಿ ಬಹಳ ಚತುರರಾಗಿರುವ ಟರ್ಕಿಶ್ ಐಸ್‌ಕ್ರೀಂ ವೆಂಡರ್‌ಗಳು  ಈ ಕಿತಾಪತಿಯಲ್ಲಿ ಸದಾ ಯಶಸ್ವಿಯಾಗಿರುತ್ತಾರೆ. ಆದರೆ ಕೆಲವೊಮ್ಮೆ ಅವರು ಕೂಡ ಇದರಲ್ಲಿ ವಿಫಲರಾಗುತ್ತಾರೆ. ಅದೇ ರೀತಿ ಈ ವಿಡಿಯೋದಲ್ಲಿ ಐಸ್‌ಕ್ರೀಂ ಕೋನ್ ನೀಡುವ ಸ್ಟಿಕ್ ಅನ್ನೇ ಗ್ರಾಹಕ ಗಟ್ಟಿಯಾಗಿ ಹಿಡಿದು ಎಳೆದಾಡಿ ಅದರಲ್ಲಿದ್ದ ಖಾಲಿ ಕೋನ್ ತಿನ್ನುವವರೆಗೆ ಬಿಡದೇ ಐಸ್‌ಕ್ರೀಂ ವೆಂಡರ್‌ಗೆ  ಕಾಡಿಸಿದ್ದಾನೆ. 

ಈ ವಿಡಿಯೋವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.  ಈ ರೀತಿ ಐಸ್‌ಕ್ರೀಂ ಕೋನ್ ಕಿತ್ತುಕೊಂಡ ಗ್ರಾಹಕ ಏನೋ ಸಾಧಿಸಿದಂತೆ ಬಹಳ ಹೆಮ್ಮೆ ಪಡುತ್ತಿದ್ದಾನೆ. ಅವನ ಮೊಗದಲ್ಲಿ ಹೆಮ್ಮೆ ಎದ್ದು ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಆವರು ಯುದ್ಧ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನನಗೆ ನಕ್ಕು ನಕ್ಕು ಕಣ್ಣಲ್ಲಿ ನೀರು ತರುವಂತೆ ಮಾಡಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡುಗರ ಮೊಗದಲ್ಲಿ ನಗು ತರಿಸುತ್ತಿದೆ.

ಕೆಲ ದಿನಗಳ ಹಿಂದೆ ಇದೇ ರೀತಿ ಐಸ್‌ಕ್ರೀಂ ನೀಡದೇ ಕಾಡಿಸಿ ಆಟವಾಡಿದ್ದ  ಐಸ್‌ಕ್ರೀಂ ವೆಂಡರ್ ವಿರುದ್ಧ ಬಾಲಕಿಯೊಬ್ಬಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಳು.  ತನ್ನ ಎಲ್ಲಾ ಗ್ರಾಹಕರಿಗೂ (customers) ಮಾಡುವಂತೆ ಈ ಬಾಲಕಿಗೂ ಐಸ್‌ಕ್ರೀಂ ಮಾರಾಟಗಾರ ಸಾಕಷ್ಟು ಕಾಡಿಸಿದ್ದಾನೆ. ಮೊದಲಿಗೆ ಬಾಲಕಿಗೆ ಐಸ್‌ಕ್ರೀಂನ ಖಾಲಿ ಕೋನ್ (ice cream cone) ನೀಡಿದ್ದು, ಇದರಿಂದ ಸಿಟ್ಟಿಗೆದ್ದ ಬಾಲಕಿ ಅದನ್ನು ತೆಗೆದು ಆತನ ಮುಖಕ್ಕೆ ಬಿಸಾಕಿದ್ದಾಳೆ. ಆದರೂ ಐಸ್‌ಕ್ರೀಂ ನೀಡುವವ ಮಾತ್ರ ಬಾಲಕಿಯ ಸಿಟ್ಟಿಗೆ ಕರಗಿಲ್ಲ. ಮತ್ತಷ್ಟು ಕಾಡಿಸುತ್ತಲೇ ಆಕೆಗೆ ಹಲವು ಬಾರಿ ಐಸ್‌ಕ್ರೀಂ ಇಲ್ಲದ ಖಾಲಿ ಖಾಲಿ ಕೋನ್‌ಗಳನ್ನು ಹಲವು ಬಾರಿ ನೀಡಿದ್ದಾನೆ. ಕೊನೆಗೆ ಮಗು ಐಸ್‌ಕ್ರೀಂ ಸಿಗದ ಸಿಟ್ಟಿಗೆ ಅತ್ತು ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ. ಬಳಿಕ ಬಾಲಕಿಯನ್ನು ಆಕೆಯ ಪೋಷಕರು (parents) ಎತ್ತಿಕೊಂಡಿದ್ದು, ಕೊನೆಗೂ ಐಸ್‌ಕ್ರೀಂ ಕಿತ್ತುಕೊಳ್ಳುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ. 

Weight Loss Tips: ಐಸ್ ಕ್ರೀಮ್, ಪಾಸ್ತಾ, ಚಾಕೊಲೇಟ್ ತಿಂದೂ ತೂಕ ಇಳಿಸಬಹುದು

ತಿನ್ನುವ ವಿಚಾರದಲ್ಲಿ ಯಾರಿಗೂ ಹೆಚ್ಚು ಹೊತ್ತು ತಾಳ್ಮೆಯಿಂದ ಕಾಯಲು ಸಾಧ್ಯವಿಲ್ಲ. ಕಣ್ಣಿದುರು ತಮ್ಮ ಇಷ್ಟದ ತಿನಿಸು ಕಾಣಿಸುತ್ತಿದ್ದರೆ ಸುಮ್ಮನೆ ಕೂರಲು ಯಾರಿಗೆ ಸಾಧ್ಯವಿದೆ. ಇಲ್ಲಿ ಅದೂ ಐಸ್‌ಕ್ರೀಂ, ಐಸ್‌ಕ್ರೀಂ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಬಹುತೇಕರು ಐಸ್‌ಕ್ರೀಂಗಾಗಿ ಬಾಯಿ ಬಾಯಿ ಬಿಟ್ಟು ನೋಡುತ್ತಿರುತ್ತಾರೆ. ಮಕ್ಕಳಂತೂ ಮನೆಗೆ ಐಸ್‌ಕ್ರೀಂ ತಂದರೆ ಕೊಡುವವರೆಗೂ ಸುಮ್ಮನಿರುವುದಿಲ್ಲ. ಹಾಗೆಯೇ ಇಲ್ಲಿ ಪುಟ್ಟ ಬಾಲಕಿಗೆ ಕಣ್ಣೆದುರು ಇರುವ ಐಸ್‌ಕ್ರೀಂ ಅನ್ನು ತಿನ್ನಲು ಕೊಡದೇ ಕಾಡಿಸಿದ ಆತನ ಬಗ್ಗೆ ಇನ್ನಿಲ್ಲದ ಕೋಪ ಬಂದಿದ್ದು, ಪುಟ್ಟ ಬಾಲಕಿ ಸಿಟ್ಟು ತೋರಿಸಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್