chinese xian city lockdown: ಚೀನಾದ ಕ್ಸಿಯಾನ್‌ ನಗರ ಸಂಪೂರ್ಣ ಬಂದ್, ವೈರಸ್ ಹಬ್ಬಲು ಕಾರಣ ಪಾಕಿಸ್ತಾನ!

By Suvarna NewsFirst Published Jan 2, 2022, 10:15 PM IST
Highlights
  • ಕೋವಿಡ್‌ ಬಳಿಕ ಚೀನಾದಲ್ಲಿನ ಅತಿದೊಡ್ಡ ಲಾಕ್ಡೌನ್‌ ಇದು
  • 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್‌ ನಗರ ಪೂರ್ಣ ಲಾಕ್ಡೌನ್‌
  • ಕೊರೊನಾ ಹಬ್ಬಲು ಕಾರಣವಾಯ್ತು ಪಾಕಿಸ್ತಾನ

ಕ್ಸಿಯಾನ್‌: ಚೀನಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ.  ಸದ್ಯ ಅಲ್ಲಿನ ಸ್ಥಿತಿ ಹೇಳತೀರದಾಗಿದೆ. ಜನರಿಗೆ ಆಹಾರದ ಕೊರತೆಯಾಗಿದೆ ಎಂದು ವರದಿ ತಿಳಿಸಿದೆ. ಯುರೋಪ್ ಮತ್ತು ಅಮೆರಿಕ ಮಾದರಿಯಲ್ಲಿ ಬಿಗಿ ಲಾಕ್ ಡೌನ್ ಮಾಡಲಾಗಿದೆ.  2019 ರಲ್ಲಿ ಕೊರೋನವೈರಸ್ ಸಾಂಕ್ರಾಮಿಕ ಪ್ರಾರಂಭವಾದ ನಂತರದ ದಿನಗಳಲ್ಲಿ ಒಂದು ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಕ್ಸಿಯಾನ್‌ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ಭಾಗದಲ್ಲಿ 10 ದಿನಗಳ ವರೆಗೆ ಲಾಕ್ ಡೌನ್ ಹೇರಲಾಗಿತ್ತು.  2019 ರಲ್ಲಿ ಕೊರೊನಾ ಬಂದಾಗ ವುಹಾನ್ ನಗರ ನಾಗರಿಕರೂ ಸೇರಿ ಸಂಪೂರ್ಣ ಎಲ್ಲಾ ರೀತಿಯಲ್ಲೂ ಸಂಪರ್ಕದಿಂದ ಕಡಿತಗೊಂಡಿತ್ತು ಸದ್ಯ ಕ್ಸಿಯಾನ್‌ ನಗರದ ಪರಿಸ್ಥಿತಿ ಕೂಡ ಇದೇ ರೀತಿಯಾಗಿದೆ.

ಕ್ಸಿಯಾನ್‌ ನಗರದಲ್ಲಿ ಪ್ರಕರಣ ಹೆಚ್ಚಾಗಲು ಪಾಕಿಸ್ತಾನ ಕಾರಣ!
ಕ್ಸಿಯಾನ್‌ ನಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣವೆಂದರೆ ಪಾಕಿಸ್ತಾನ! ಹೌದು ಅಚ್ಚರಿಯಾದರೂ ಸತ್ಯ! ಪಾಕಿಸ್ತಾನದಿಂದ ಆಗಮಿಸಿದ ಪ್ರಯಾಣಿಕ ವಿಮಾನವೊಂದರಿಂದ ಕ್ಸಿಯಾನ್‌ ನಲ್ಲಿ ಮೊದಲ ಕೋವಿಡ್-19 ಪ್ರಕರಣ ವರದಿಯಾಗುವುದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದ್ದು ಪಾಕಿಸ್ತಾನದಿಂದ ಬಂದ ವಿಮಾನದಲ್ಲಿದ್ದ ಮಂದಿಯಿಂದಲೇ ಕೋವಿಡ್-19 ಸೋಂಕು ಸ್ಥಳೀಯವಾಗಿ ಹರಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಸಿಯಾನ್‌ ನಗರದಲ್ಲಿನ ಕೋವಿಡ್-19 ಪ್ರಕರಣಗಳ ಏರಿಕೆ ದೇಶಾದ್ಯಂತ ಹರಡುವ ಆತಂಕ ಉಂಟುಮಾಡಿದ್ದು, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಚೀನಾದಲ್ಲಿ ಸೂಚನೆ ನೀಡಲಾಗಿದೆ. ಇದಲ್ಲದೆ ಜನರ ವಾಹನ ಚಾಲನೆಯನ್ನೂ ಸಹ ನಿಷೇಧ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಚೀನಾದಲ್ಲಿ ಕೈಗೊಳ್ಳಲಾಗುತ್ತಿದೆ.

ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!

ಇನ್ನು ಸುಮಾರು 1.3 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದ ಉತ್ತರದ ಭಾಗದ ಬೃಹತ್‌ ನಗರ ಕ್ಸಿಯಾನ್‌ ನಗರವನ್ನು ಕಳೆದ  ಒಂದು ವಾರದ ಹಿಂದೆ  ಸಂಪೂರ್ಣ ಲಾಕ್ಡೌನ್‌ ಮಾಡಲಾಗಿದೆ. ರಾಜಧಾನಿ ಬೀಜಿಂಗ್‌ನಲ್ಲಿ ಶೀಘ್ರವೇ ಚಳಿಗಾಲದ ಒಲಿಂಪಿಕ್ಸ್‌ ಆರಂಭವಾಗಲಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ದೇಶದಲ್ಲಿ ಮತ್ತೆ ಸೋಂಕು ವ್ಯಾಪಿಸಬಾರದು ಎನ್ನುವ ಕಾರಣಕ್ಕಾಗಿ ರಾಜಧಾನಿಯಿಂದ 1000 ಕಿ.ಮೀ ದೂರದ ನಗರವನ್ನು ಪೂರ್ಣ ಲಾಕ್ಡೌನ್‌ ಮಾಡಲಾಗಿದೆ. ಮೊದಲ ವೈರಸ್‌ ಕಾಣಿಸಿಕೊಂಡ ಬಳಿಕ 2020ರಲ್ಲಿ ವುಹಾನ್‌ನಲ್ಲಿ ಜಾರಿ ಮಾಡಲಾದ ಲಾಕ್ಡೌನ್‌ ನಂತರ ದೇಶದಲ್ಲಿ ಅತಿದೊಡ್ಡ ಪ್ರದೇಶವೊಂದರಲ್ಲಿ ಮಾಡಿದ ಲಾಕ್ಡೌನ್‌ ಇದಾಗಿದೆ.  

ಚೀನಾದ ಹಲವು ಪ್ರಾಂತ್ಯದಲ್ಲಿ ಜನ ತಮ್ಮ ಮನೆಯ ಕಾಂಪೌಂಡ್‌ನಿಂದ ಹೊರಹೋಗಲೂ ಸ್ಥಳೀಯ ಸಮಿತಿಗಳ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ಮನೆಯ ಒಬ್ಬ ಸದಸ್ಯನಿಗೆ 3 ದಿನಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗೆ ಹೋಗಬಹುದಾಗಿದೆ.

ಒಂದೇ ದಿನ 16 ಲಕ್ಷ ಕೋವಿಡ್‌ ಕೇಸ್‌, ಪುಷ್ಪಾ ಡಿಲೀಟ್ ಸೀನ್ ನೋಡಲು ಮುಗಿಬಿದ್ದ ಫ್ಯಾನ್ಸ್ , ಜ.2ರ Top 10 News!

ಭಾರತದಲ್ಲಿ ಏರಿಕೆಯತ್ತ ಕೊರೊನಾ!: ದೇಶದಲ್ಲಿ ಕೊರೋನಾ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಸಮಯದಲ್ಲಿ, ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನ ವಿಷಯದಲ್ಲಿಯೂ ಜಿಗಿತ ಕಂಡುಬಂದಿದೆ, ಇದು ಅಪಾಯಕಾರಿ. ಈಗಾಗಲೇ ಕೊರೋನಾ ವೈರಸ್‌ನ ಎರಡು ಅಲೆಗಳನ್ನು ಎದುರಿಸುತ್ತಿರುವ ನಂತರ, ಮೂರನೇ ಅಲೆಯ ಅಬ್ಬರವೂ ಜನರನ್ನು ಹೆದರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಮತ್ತು ಓಮಿಕ್ರಾನ್ ಬಗ್ಗೆ ತುಂಬಾ ಸಕ್ರಿಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನೂ ವಿಧಿಸಲಾಗಿದೆ. ಇದರಲ್ಲಿ ರಾತ್ರಿ ಕರ್ಫ್ಯೂ ಮತ್ತು ಸೆಕ್ಷನ್ 144 ನಂತಹ ನಿಯಮಗಳಿವೆ.

ಏತನ್ಮಧ್ಯೆ, ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಕೊರೋನಾ ಮತ್ತು ಓಮಿಕ್ರಾನ್ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳದಿಂದಾಗಿ, ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆಗಳಲ್ಲಿ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆದ್ದರಿಂದ ಕ್ಷೇತ್ರ ಮಟ್ಟದಲ್ಲಿ ಪಾಳಿ ಆಸ್ಪತ್ರೆಗಳನ್ನು ಮಾಡಲು ಸಚಿವಾಲಯ ಸೂಚನೆ ನೀಡಿದೆ. ಇದರೊಂದಿಗೆ ಜಿಲ್ಲಾ ಮಟ್ಟದಲ್ಲೂ ಕಣ್ಗಾವಲು ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ.

click me!