ಮಕ್ಕಳ ಆಹಾರದಲ್ಲಿ ನಿಷೇಧಿತ ಡ್ರಗ್‌... ಪ್ಯಾಕ್‌ ತೆರೆದ ಅಮ್ಮನಿಗೆ ಶಾಕ್‌

Suvarna News   | Asianet News
Published : Jan 02, 2022, 02:13 PM IST
ಮಕ್ಕಳ ಆಹಾರದಲ್ಲಿ ನಿಷೇಧಿತ ಡ್ರಗ್‌... ಪ್ಯಾಕ್‌ ತೆರೆದ ಅಮ್ಮನಿಗೆ ಶಾಕ್‌

ಸಾರಾಂಶ

ಮಕ್ಕಳ ಆಹಾರದಲ್ಲಿ ನಿಷೇಧಿತ ಡ್ರಗ್‌ ಮಕ್ಕಳಿಗೆ ಧಾನ್ಯ ನೀಡಲು ಪ್ಯಾಕ್‌ ತೆರೆದ ಅಮ್ಮನಿಗೆ ಶಾಕ್‌ ಮೆಥಾಂಫೆಟಮೈನ್ ಪ್ಯಾಕ್‌ ಪತ್ತೆ

ಇಂಗ್ಲೆಂಡ್‌(ಡಿ.2): ಬೆಳೆಯುವ ಮಕ್ಕಳಿಗೆ ದವಸ ಧಾನ್ಯಗಳ ಆಹಾರವನ್ನು ನೀಡುವುದು ಸಾಮಾನ್ಯ. ಹೀಗೆ ಮಕ್ಕಳಿಗೆ ನೀಡುವ ಧಾನ್ಯಗಳ ಪೊಟ್ಟಣವನ್ನು ತೆರೆದ ಬ್ರಿಟನ್‌ ಮೂಲದ ತಾಯಿಯೊಬ್ಬರು ಶಾಕ್‌ಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು,  ಪೊಟ್ಟಣದೊಳಗಿದ್ದ ನಿಷೇಧಿತ ಡ್ರಗ್‌ ಪ್ಯಾಕ್. 25ರ ವರ್ಷದ ಹೈಸಮ್ ನಾಸಿರ್ (Haisam Nassir) ತನ್ನ ನಾಲ್ಕು ಮಕ್ಕಳಿಗೆ ಎಂದಿನಂತೆ ಅಂದು ಕೂಡ ಗೋಲ್ಡನ್ ಮಾರ್ನ್ ಸಿರಿಧಾನ್ಯವನ್ನು ನೀಡಲು ಮುಂದಾಗಿದ್ದಾರೆ. ಈ ವೇಳೆ ಸಿರಿಧಾನ್ಯವಿದ್ದ ಪ್ಯಾಕ್‌ನಲ್ಲಿ ಬೇರೇನೋ ಇರುವುದು ಕಂಡು ಬಂದಿದೆ. ಬಿಳಿಹರಳುಗಳಿಂದ ಪಾರದರ್ಶಕವಾದ ಸಣ್ಣ ಪ್ಲಾಸ್ಟಿಕ್‌ ಪೊಟ್ಟಣ ಅಲ್ಲಿ ಕಾಣಿಸಿದೆ. ಕೂಡಲೇ ಇದೇನು ಎಂಬ ಕುತೂಹಲದಿಂದ ಅವರು ಅದನ್ನು ತೆರೆದು ನೋಡಿದ್ದು, ನಂತರ ಅದರ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. 

ಈ ವೇಳೆ ಅದು ಮೆಥಾಂಫೆಟಮೈನ್ (methamphetamine) ಅಥವಾ ಸಾಮಾನ್ಯವಾಗಿ ಕ್ರಿಸ್ಟಲ್ ಮೆಥ್ ಎಂದು ಕರೆಯಲ್ಪಡುವ ಡ್ರಗ್‌ ಎಂಬುದು ಗೊತ್ತಾಗಿದೆ.  ಇದರಿಂದ ಅವರು ಅಘಾತಕ್ಕೊಳಗಾಗಿದ್ದಾರೆ. ಸ್ಥಳೀಯ ಎಸೆಕ್ಸ್ ಲೈವ್ (Essex Live) ವರದಿ ಪ್ರಕಾರ, ಮಹಿಳೆ ಸಿರಿಧಾನ್ಯ ತುಂಬಿದ್ದ ಪ್ಯಾಕ್‌ನ್ನು ಅರ್ಧದವರೆಗೆ ಒಪನ್‌ ಮಾಡಿದರೂ ಅದರೊಳಗೆ ದವಸ ಧಾನ್ಯಗಳು ಹೊರಗೆ ಬರುವುದು ಕಾಣಿಸಿಲ್ಲ.   ನಂತರ ಪ್ಯಾಕ್‌ನ ಒಳಭಾಗಕ್ಕೆ ಅವರು ಕೈ ಹಾಕಿ ನೋಡಿದಾಗ ಅದರೊಳಗೆ ಮತ್ತೊಂದು ಪ್ಯಾಕೆಟ್‌ ಇರುವುದು ಕಂಡು ಬಂದಿದೆ.  

Crime Round Up 2021 : ಅಪರಾಧ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣಗಳು.. ಸಿಡಿಯಿಂದ ಕಾಯಿನ್‌ವರೆಗೆ!

ಇದರಿಂದ ಪ್ಯಾಕ್‌ ಒಳಗೆ ಮತ್ತೊಂದು ಪ್ಯಾಕ್‌ ಇರುವುದರಿಂದಾಗಿ ಉಳಿದ ಧಾನ್ಯಗಳು ಹೊರ ಬಂದಿಲ್ಲ ಎಂದು ಮಹಿಳೆ ಯೋಚಿಸಿದ್ದಾಳೆ. ಈ ವೇಳೆ ಆಕೆಗೆ ಭಯವಾಗಿದ್ದು, ಈ ಅಕ್ರಮ ವಸ್ತುವನ್ನು ಹೊಂದಿರುವ ಪ್ಯಾಕೆಟ್‌ನ್ನು ಪೊಲೀಸರಿಗೆ ತೆಗೆದುಕೊಂಡುಹೋಗಿ ನೀಡಿದ್ದಾರೆ. ಅಲ್ಲಿ ಅವರು ಇದು ನಿಷೇಧಿತ ಡ್ರಗ್ಸ್‌ ಎಂಬುದನ್ನು ಖಚಿತಪಡಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಮಹಿಳೆ ಒಂದು ವೇಳೆ ಮಕ್ಕಳೇನಾದರೂ ಇದನ್ನು ಸೇವಿಸಿರಬಹುದೇ ಎಂದು ಹೆದರಿ ತಮ್ಮ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಮಕ್ಕಳು ಇದನ್ನು ಸೇವಿಸಿಲ್ಲ ಎಂಬುದು ತಿಳಿದು ಬಂದಿದ್ದು ತಾಯಿ ನಿರಾಳರಾಗಿದ್ದಾರೆ. 

Drug Case: ಮಗಳನ್ನು ರಕ್ಷಿಸುವಂತೆ VHP ಗೆ ಕ್ರಿಶ್ಚಿಯನ್ ಮಹಿಳೆ ದೂರು, ಆರೋಪಿ ಸೆರೆ

'ಇದು ತುಂಬಾ ಆಘಾತಕಾರಿ, ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೆ. ಇದು ಸುಮಾರು ಅರ್ಧ  ಪ್ಯಾಕ್‌ನಷ್ಟಿತ್ತು. ನನಗೆ ನಿಜವಾಗಿಯೂ ಭಯವಾಯಿತು. ನನ್ನ ಆತಂಕ ಮುಗಿಲೆತ್ತರದಷ್ಟು ಆವರಿಸಿತ್ತು.  ಅದರಲ್ಲಿ 450 ಗ್ರಾಂನಷ್ಟು ಇತ್ತು ಎಂದು ಮಹಿಳೆ ಹೇಳಿದ್ದಾರೆ. ನನ್ನ ಮಕ್ಕಳು ನಾಲ್ಕು ದಿನಗಳಿಂದ ನೇರವಾಗಿ ಆ ಪ್ಯಾಕ್‌ನಿಂದ ತಿನ್ನುತ್ತಿದ್ದರು ಮತ್ತು ಈ ಡ್ರಗ್ಸ್‌ ಇದ್ದ ಚೀಲವು ನಿಜವಾಗಿಯೂ ತೆಳ್ಳಗಿತ್ತು, ಚೂಪಾದ ಧಾನ್ಯದ ತುಂಡು ಸುಲಭವಾಗಿ ಅದರಲ್ಲಿ ರಂಧ್ರವನ್ನು ಮಾಡಬಹುದಿತ್ತು. ದೇವರ ದಯೆಯಿಂದ ಹಾಗಾಗಲಿಲ್ಲ ಎಂದು ಮಹಿಳೆ ಕೃತಜ್ಞತೆ ಸಲ್ಲಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ