ಕೊರೋನಾ ವೈರಸ್‌ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!

Published : Jul 12, 2020, 11:50 AM ISTUpdated : Jul 12, 2020, 11:52 AM IST
ಕೊರೋನಾ ವೈರಸ್‌ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!

ಸಾರಾಂಶ

ಕೊರೋನಾ ವೈರಸ್‌ ಹರಡುವಿಕೆ ವಿಷಯವನ್ನು ಬಹಿರಂಗಪಡಿಸದೆ ಚೀನಾ ಬಹುಕಾಲ ಮುಚ್ಚಿಟ್ಟಿತ್ತು| ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳ ಆರೋಪಕ್ಕೆ ಈಗ ಪುಷ್ಟಿ| ಹಾಂಕಾಂಗ್‌ನಿಂದ ಅಮೆರಿಕಕ್ಕೆ ಪರಾರಿಯಾಗಿರುವ ವೈರಾಣು ತಜ್ಞೆ

ಹಾಂಕಾಂಗ್(ಜು.12)‌: ಕೊರೋನಾ ವೈರಸ್‌ ಹರಡುವಿಕೆ ವಿಷಯವನ್ನು ಬಹಿರಂಗಪಡಿಸದೆ ಚೀನಾ ಬಹುಕಾಲ ಮುಚ್ಚಿಟ್ಟಿತ್ತು ಎಂಬ ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳ ಆರೋಪಕ್ಕೆ ಈಗ ಪುಷ್ಟಿಸಿಕ್ಕಿದೆ. ಹಾಂಕಾಂಗ್‌ನಿಂದ ಅಮೆರಿಕಕ್ಕೆ ಪರಾರಿಯಾಗಿರುವ ವೈರಾಣು ತಜ್ಞೆಯೊಬ್ಬರು ಖುದ್ದು ಈ ವಿಷಯವನ್ನು ಖಚಿತಪಡಿಸಿದ್ದಾರೆ.

‘ಕೊರೋನಾ ವೈರಸ್‌ ಹರಡುವಿಕೆಯನ್ನು ಚೀನಾ 2019ರ ವರ್ಷಾಂತ್ಯಕ್ಕೆ ಬಹಿರಂಗಪಡಿಸಿತು. ಆದರೆ ಇದಕ್ಕಿಂತ ಮೊದಲೇ ವೈರಸ್‌ ಹರಡಿದ್ದು ಗೊತ್ತಾಗಿದ್ದರೂ ವಿಷಯ ಬಹಿರಂಗಪಡಿಸದೆ ಮುಚ್ಚಿಟ್ಟಿತ್ತು’ ಎಂದು ‘ಹಾಂಕಾಂಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌’ ವಿಶ್ವವಿದ್ಯಾಲಯದ ವೈರಾಣು ತಜ್ಞೆ ಲೀ ಮೆಂಗ್‌ ಯಾನ್‌ ಆರೋಪಿಸಿದ್ದಾರೆ. ನಾವರು ವರದಿ ಕೊಟ್ಟಿದ್ದರೂ ಚೀನಾ ನಿರ್ಲಕ್ಷಿಸಿತು. ಆಗಲೇ ಕ್ರಮ ಕೈಗೊಂಡಿದ್ದರೆ ಅನೇಕ ಜೀವಗಳು ಉಳಿಯುತ್ತಿದ್ದವು ಎಂದು ಹೇಳಿದ್ದಾರೆ.

ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್‌ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ!

‘ಚೀನಾದಲ್ಲಿ ಕಳೆದ ವರ್ಷದ ಅಂತ್ಯಕ್ಕೆ ಸಾರ್ಸ್‌ ರೀತಿಯ ರೋಗಲಕ್ಷಣದ ವೈರಸ್‌ ಹರಡುತ್ತಿದೆ ಎಂದು ನಮ್ಮ ಮುಖ್ಯಸ್ಥರು ಅಧ್ಯಯನಕ್ಕೆ ಸೂಚಿಸಿದರು. ಆಗ ನಾನು ಕೊರೋನಾ ವೈರಸ್‌ ಅಧ್ಯಯನ ನಡೆಸಿದ ಮೊದಲಿಗಳಾಗಿದ್ದೆ. ಆದರೂ ನನ್ನ ಮೇಲಧಿಕಾರಿಗಳು ನಾನು ಕೊರೋನಾ ಕುರಿತು ನಡೆಸಿದ ಸಂಶೋಧನೆಯನ್ನು ನಿರ್ಲಕ್ಷಿಸಿದರು. ಚೀನಾ ಸರ್ಕಾರವು ವಿದೇಶೀ ತಜ್ಞರು ಹಾಗೂ ಹಾಂಕಾಂಗ್‌ ತಜ್ಞರಿಗೆ ಈ ಕುರಿತು ಸಂಶೋಧನೆ ನಡೆಸಲು ಅವಕಾಶ ನೀಡಲಿಲ್ಲ. ಒಂದು ವೇಳೆ ಆಗಲೇ ಈ ಕುರಿತು ಕ್ರಮ ಕೈಗೊಂಡಿದ್ದರೆ ಅನೇಕ ಜೀವಗಳು ಉಳಿಯುತ್ತಿದ್ದವು’ ಎಂದು ‘ಫಾಕ್ಸ್‌ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಈ ವೈರಾಣುವಿನ ಬಗ್ಗೆ ನಾನು ಹಾಗೂ ನನ್ನ ಸಹೋದ್ಯೋಗಿಗಳು ಚರ್ಚೆ ಆರಂಭಿಸಿದೆವು. ಆದರೆ ಬಳಿಕ ಎಲ್ಲರೂ ಸುಮ್ಮನಾದರು. ಚರ್ಚೆ ಮಾಡಕೂಡದು ಎಂದು ಸರ್ಕಾರದ ಸೂಚನೆ ಬಂದಿದ್ದೇ ಇದಕ್ಕೆ ಕಾರಣ. ‘ಈ ಬಗ್ಗೆ ಮಾತಾಡೋದು ಬೇಡ. ಎಲ್ಲರೂ ಮಾಸ್ಕ್‌ ಹಾಕಿಕೊಳ್ಳೋಣ’ ಎಂದಷ್ಟೇ ವೈದ್ಯರು ಹೇಳತೊಡಗಿದರು’ ಎಂದು ಯಾನ್‌ ಹೇಳಿದ್ದಾರೆ.

ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ಹೆಮ್ಮೆ ಇದೆ: ಅಮೆರಿಕದ ಸೆನೆಟರ್ ಕೆನಡಿ!

‘ಹೀಗಾಗಿ ಚೀನಾ ತೊರೆಯಲು ನಾನು ನಿರ್ಧರಿಸಿ ಕದ್ದು ಮುಚ್ಚಿ ಕ್ಯಾಂಪಸ್‌ನಿಂದ ಹೊರಬಂದೆ. ಏಪ್ರಿಲ್‌ 28ರಂದು ಅಮೆರಿಕದ ವಿಮಾನ ಏರಿದೆ’ ಎಂದಿರುವ ಅವರು, ‘ಇದೇ ಕಾರಣಕ್ಕೆ ನನ್ನ ಮೇಲೆ ಚೀನಾ ಸರ್ಕಾರ ಪ್ರತೀಕಾರ ಯತ್ನ ನಡೆಸುತ್ತಿದೆ. ಸೈಬರ್‌ ದಾಳಿ ಮೂಲಕ ಸರ್ಕಾರಿ ಗೂಂಡಾಗಳು ನನ್ನನ್ನು ಸುಮ್ಮನಾಗಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನನ್ನ ಜೀವಕ್ಕೆ ಅಪಾಯವಿದೆ. ಹೀಗಾಗಿ ನಾನೆಂದೂ ತವರಿಗೆ ಮರಳಲ್ಲ. ಇದನ್ನೇ ನಾನು ಚೀನಾದಲ್ಲಿ ಕುಳೊತು ಹೇಳಿದ್ದರೆ ನನ್ನನ್ನು ಹತ್ಯೆ ಮಾಡಿಬಿಡುತ್ತಿದ್ದರು’ ಎಂದಿದ್ದಾರೆ.

ಹಾಂಕಾಂಗ್‌ ವಿಶ್ವವಿದ್ಯಾಲಯ ಈ ವಿದ್ಯಮಾನದ ಬೆನ್ನಲ್ಲೇ ವೆಬ್‌ಸೈಟ್‌ನಿಂದ ಯಾನ್‌ ಅವರ ವಿವರ ಅಳಿಸಿ ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ