ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!

By Suvarna News  |  First Published Jul 11, 2020, 9:55 AM IST

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು|  ಚೀನಾದ 3 ಹಿರಿಯ ಅಧಿಕಾರಿಗಳಿಗೆ ಅಮೆರಿಕವು ವೀಸಾ ನಿರ್ಬಂಧ ಹೇರಿದೆ| ಚೀನಾ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಾದೇಶಿಕ ಮುಖ್ಯಸ್ಥರೂ ಇದ್ದಾರೆ


ವಾಷಿಂಗ್ಟನ್(ಜು.11):  ಚೀನಾ ಹಾಗೂ ಅಮೆರಿಕ ನಡುವೆ ವೀಸಾ ಸಮರ ಮುಂದುವರಿದಿದೆ. ಚೀನಾದ 3 ಹಿರಿಯ ಅಧಿಕಾರಿಗಳಿಗೆ ಅಮೆರಿಕವು ವೀಸಾ ನಿರ್ಬಂಧ ಹೇರಿದೆ. ಇವರಲ್ಲಿ ಚೀನಾ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಾದೇಶಿಕ ಮುಖ್ಯಸ್ಥರೊಬ್ಬರೂ ಇದ್ದಾರೆ.

ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

Tap to resize

Latest Videos

undefined

ಚೀನಾದ ಮುಸ್ಲಿಂ ಬಾಹುಳ್ಯದ ಕ್ಸಿಂಜಿಯಾಂಗ್‌ ಪ್ರಾಂತ್ಯದಲ್ಲಿ ಕಜಕಸ್ತಾನ ಮೂಲದ ಉಯಿಗುರ್‌ ಜನಾಂಗದವರು ಇದ್ದು, ಇವರ ಮೇಲೆ ಚೀನಾ ನಿರಂತರ ದೌರ್ಜನ್ಯ ನಡೆಸುತ್ತಿದೆ. ಅವರಿಗೆ ಬಲವಂತದ ಸಂತಾನಹರಣ ಚಿಕಿತ್ಸೆ ಮಾಡುತ್ತಿದೆ. ಧಾರ್ಮಿಕ ಕಿರುಕುಳ ನೀಡಲಾಗುತ್ತಿದ್ದು, ಸಾವಿರಾರು ಜನರನ್ನು ಬಂಧನಕ್ಕೆ ಒಳಪಡಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಈ ಕ್ರಮ ಕೈಗೊಂಡಿದೆ. ಆದರೆ ಇದಕ್ಕೆ ಚೀನಾ ಖಾರ ಪ್ರತಿಕ್ರಿಯೆ ನೀಡಿದ್ದು, ಚೀನಾದ ಆಂತರಿಕ ವಿಚಾರದಲ್ಲಿ ತಲೆ ಹಾಕುತ್ತಿರುವ ಅಮೆರಿಕದ ಈ ಕ್ರಮಕ್ಕೆ ಪ್ರತೀಕಾರ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಚೀನಾದ ಅಲ್ಪಸಂಖ್ಯಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾರಣೀಭೂತರಾದ 3 ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ಅಮೆರಿಕ ವೀಸಾ ನಿರ್ಬಂಧಿತರಾಗಿದ್ದಾರೆ.

ಪ್ಯಾಂಗಾಂಗ್‌ನಿಂದಲೂ ಹಿಂದೆ ಸರಿದ ಚೀನಾ ಸೇನೆ!

ಇತ್ತೀಚೆಗೆ ಟಿಬೆಟ್‌ಗೆ ಅಮೆರಿಕನ್ನರ ಪ್ರವೇಶ ನಿರ್ಬಂಧಿಸುತ್ತಿರುವ ಅಧಿಕಾರಿಗಳಿಗೆ ವೀಸಾ ನಿರ್ಬಂಧಿಸುವುದಾಗಿ ಅಮೆರಿಕ ಸರ್ಕಾರ ಹೇಳಿತ್ತು.

click me!