ವಿಚಿತ್ರ ಸಂಪ್ರದಾಯ, ದೇವಸ್ಥಾನದಲ್ಲಿ ಒಂದೇ ಬಾರಿ ವಿವಸ್ತ್ರರಾದ 10 ಸಾವಿರ ಮಂದಿ| ಏನಿದು ಸಂಪ್ರದಾಯ? ಇಲ್ಲಿದೆ ವಿವರ
ಟೋಕಿಯೋ[ಫೆ.17]: ಜಗತ್ತಿನಾದ್ಯಂತ ಹಲವಾರು ಬಗೆಯ ಸಂಪ್ರದಾಯಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ವಿಚಿತ್ರ ಸಂಪ್ರದಾಯದಿಂದ ಸದ್ದು ಮಾಡುತ್ತವೆ. ಇಂತಹುದೇ ಒಂದು ಹಬ್ಬ ಜಪಾನ್ ನಲ್ಲಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಶನಿವಾರ ಆಚರಿಸಲಾಗುತ್ತದೆ. ಹಡ್ಕಾ ಮತ್ಸುರೀ ಹೆಸರಿನ ಈ ಹಬ್ಬದಲ್ಲಿ, ಜನರು ಜಪಾನ್ ನ ಓಕಾಯಾಮಾ ನಗರದಲ್ಲಿ ನಿರ್ಮಿಸಲಾಗಿರುವ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಪೂಜೆ ಮಾಡಲು ಹೋಗುತ್ತಾರೆ.
ಒಗ್ಗೂಡಿದ 10 ಸಾವಿರ ಮಂದಿ
ಪ್ರತಿ ವರ್ಷದಂತೆ ಈ ಬಾರಿಯೂ ಜಪಾನ್ ನಲ್ಲಿ ಹಡ್ಕಾ ಮತ್ಸುರೀ ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ಹಬ್ಬಕ್ಕೆ ಬೆತ್ತಲು ಹಬ್ಬ ಎಂದೂ ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಪಾಲ್ಗೊಳ್ಳುವವರು ತ್ಯಂತ ಕಡಿಮೆ ಬಟ್ಟೆ ಧರಿಸಬೇಕಾಗುತ್ತದೆ. ಇವರು ಕೇವಲ 'ಪುಂದೇಶೀ ಹಾಗೂ ತಬೀ' ಎನ್ನುವ ಒಂದು ಪುಟ್ಟ ಬಟ್ಟೆ ತುಂಡು ಸುತ್ತಿಕೊಳ್ಳುತ್ತಾರೆ.
ತಬ್ಕೊಂಡು ಮಲಗಿದ್ಲು..ಮದುವೆ ದಿನವೇ ದೊಡ್ಡ ಪರದೆಯಲ್ಲಿ ಬೆತ್ತಲಾದಳು!
ಹೀಗೆ ಆಚರಿಸಿದ್ರು ಈ ಹಬ್ಬ
10 ಸಾವಿರ ಮಂದಿ ಪಾಲ್ಗೊಂಡಿದ್ದ ಈ ಹಬ್ಬದಲ್ಲಿ, ಜನರು ಪ್ರಪ್ರಥಮವಾಗಿ ದೇಗುವವನ್ನು ಶುಚಿಗೊಳಿಸಬೇಕಾಗುತ್ತದೆ. ಬೋಳಿಕ ಸಂಜೆಯಾಗುತ್ತಿದ್ದಂತೆ ತಣ್ಣೀರಲ್ಲಿ ಸ್ನಾನ ಮಾಡಬೇಕು. ಬಳಿಕ ಮುಖ್ಯ ದೇಗುಲದ ಆವರಣಕ್ಕೆ ತೆರಳುತ್ತಾರೆ. ರಾತ್ರಿಯಾಗುತ್ತಿದ್ದಂತೆಯೇ ದೇಗುಲದ ಅರ್ಚಕ ಜನರಿದ್ದ ಕಡೆಯ ದೇಗುಲದ ಮಹಡಿಯ ಕಿಟಕಿ ತೆರೆದು ಧ್ವಜಗಳನ್ನು ಎಸೆಯುತ್ತಾರೆ. ಯಾರಿಗೆಲ್ಲಾ ಈ ಧ್ವಜ ಸಿಗುತ್ತೋ ಅವರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
30 ನಿಮಿಷದಲ್ಲಾಗುತ್ತದೆ ಗಾಯ
ಈ ಇಡೀ ಪ್ರಕ್ರಿಯೆ ಕೇವಲ 30 ನಿಮಿಷದ್ದು. ಹೀಗಿರುವಾಗ ಮೇಲಿನಿಂದ ಬೀಳುವ ಧ್ವಜವನ್ನು ಪಡೆದುಕೊಳ್ಳಲು 10 ಸಾವಿರ ಮಂದಿ ಪೈಪೋಟಿ ನಡೆಸುತ್ತಾರೆ. ಈ ಪ್ರಯತ್ನದಲ್ಲಿ ಹಲವಾರು ಮಂದಿಗೆ ಗಾಯಗಳಾಗುತ್ತವೆ. ಈ ವಿಶೇಷ ಹಬ್ಬದಲ್ಲಿ ಪಾಲ್ಗೊಳ್ಳಲು ಜಪಾನ್ ನ ಬಹುತೇಕ ಎಲ್ಲಾ ಮನೆಯ ಜನರು ಆಗಮಿಸುತ್ತಾರೆ. ಈ ಮೂಲಕ ತಮಗರ ಒಳ್ಳೆಯದಾಗಬೇಕೆಂಬ ಆಶಯ ಅವರದ್ದು.
ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!