ಕೊರೊನಾ ವೈರಸ್‌ ಉಗಮ ಸ್ಥಾನ ಚೀನಾದಲ್ಲಿ ಮತ್ತೆ ಕೋವಿಡ್‌ ರಣಕೇಕೆ: ವಾರಕ್ಕೆ 65 ಲಕ್ಷ ಕೇಸ್‌!

By Kannadaprabha News  |  First Published May 27, 2023, 10:47 AM IST

2 ಹೊಸ ಎಕ್ಸ್‌ಬಿಬಿ ರೂಪಾಂತರಿ ತಳಿಗಳಿಂದ ಚೀನಾದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದೆ. ಕಳೆದ ವರ್ಷ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಬೇಕಾಬಿಟ್ಟಿಯಾಗಿ ಕೊನೆಗೊಳಿಸಿ ಹೆಚ್ಚು ಕಮ್ಮಿ ಇಡೀ ದೇಶದ ಜನರಿಗೆ ಕೋವಿಡ್‌ ಸೋಂಕು ತಗಲಿದ ನಂತರ ದೇಶದಲ್ಲಿ ಕಾಣಿಸಿಕೊಂಡಿರುವ ಅತಿದೊಡ್ಡ ಅಲೆ ಇದಾಗಿದೆ.


ಬೀಜಿಂಗ್‌ (ಮೇ 27, 2023): ಕೊರೋನಾ ವೈರಸ್‌ನ ಉಗಮ ಸ್ಥಾನವೆಂಬ ಕುಖ್ಯಾತಿ ಪಡೆದಿರುವ ಚೀನಾದಲ್ಲಿ ಮತ್ತೆ ಹೊಸ ಕೋವಿಡ್‌ ತಳಿಯ ಅಬ್ಬರ ಜೋರಾಗುತ್ತಿದ್ದು, ಸದ್ಯದಲ್ಲೇ ವಾರಕ್ಕೆ 65 ಲಕ್ಷದಷ್ಟು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

2 ಹೊಸ ಎಕ್ಸ್‌ಬಿಬಿ ರೂಪಾಂತರಿ ತಳಿಗಳಿಂದ ಚೀನಾದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದೆ. ಕಳೆದ ವರ್ಷ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಬೇಕಾಬಿಟ್ಟಿಯಾಗಿ ಕೊನೆಗೊಳಿಸಿ ಹೆಚ್ಚು ಕಮ್ಮಿ ಇಡೀ ದೇಶದ ಜನರಿಗೆ ಕೋವಿಡ್‌ ಸೋಂಕು ತಗಲಿದ ನಂತರ ದೇಶದಲ್ಲಿ ಕಾಣಿಸಿಕೊಂಡಿರುವ ಅತಿದೊಡ್ಡ ಅಲೆ ಇದಾಗಿದೆ. ಇದನ್ನು ತಡೆಯಲು ಹರಸಾಹಸ ಮಾಡುತ್ತಿರುವ ಚೀನಾ ಸರ್ಕಾರ, ಹೊಸ ರೂಪಾಂತರಿಯ ವಿರುದ್ಧ ಕೆಲಸ ಮಾಡುವ ಹೊಸ ಲಸಿಕೆಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ‘ದಿ ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

Latest Videos

undefined

ಇದನ್ನು ಓದಿ: ಮೂರೂವರೆ ವರ್ಷಗಳ ಕಾಲ ಜಗತ್ತನ್ನು ಬಾಧಿಸಿದ್ದ ಕೊರೋನಾ ‘ಎಮರ್ಜೆನ್ಸಿ’ಗೆ ಗುಡ್‌ಬೈ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಚೀನಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಜಾಂಗ್‌ ನಾನ್‌ಶಾನ್‌, ‘ಎಕ್ಸ್‌ಬಿಬಿ ಓಮಿಕ್ರೋನ್‌ ತಳಿಯ 2 ಹೊಸ ರೂಪಾಂತರಿಗಳನ್ನು ನಿಯಂತ್ರಿಸಲು 2 ಹೊಸ ಲಸಿಕೆಗಳಿಗೆ ಪ್ರಾಥಮಿಕ ಅನುಮೋದನೆ ನೀಡಲಾಗುತ್ತಿದೆ. ಇನ್ನೂ 3 - 4 ಲಸಿಕೆಗಳು ಶೀಘ್ರದಲ್ಲೇ ಬರಲಿವೆ’ ಎಂದು ಹೇಳಿದ್ದಾರೆ.

‘ಈಗಿನ ಹೊಸ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವು ಕಡಿಮೆಯಿರಲಿದೆ. ಆದರೂ ಅದು ದೊಡ್ಡ ಸಂಖ್ಯೆಯಲ್ಲೇ ಇರಲಿದೆ’ ಎಂದು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಇನ್ನೊಬ್ಬ ಸಾಂಕ್ರಾಮಿಕ ರೋಗ ತಜ್ಞ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಲಸಿಕೆ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ, ಕೋವಿಡ್ ಸಂಕಷ್ಟ ಸಮಯ ನೆನೆದ ಮೋದಿ!

‘ಕಳೆದ ತಿಂಗಳಿನಿಂದ ಈಚೆಗೆ ಕೋವಿಡ್‌ ಸೋಂಕು ತೀವ್ರ ಪ್ರಮಾಣದಲ್ಲಿ ಏರುತ್ತಿದೆ. ಆದರೆ ಅದರ ಪರಿಣಾಮ ಅಷ್ಟೊಂದು ಗಂಭೀರವಾಗಿಲ್ಲ. ಸೋಂಕಿತರಲ್ಲಿ ಕೋವಿಡ್‌ನ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ರೋಗಿಗಳು ದಾಖಲಾಗುವ ಪ್ರಮಾಣ ಹೆಚ್ಚಾಗಿಲ್ಲ ಎಂದು ಚೀನಾದ ಆರೋಗ್ಯ ಇಲಾಖೆ ಹೇಳಿದೆ’ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ತಿಳಿಸಿದೆ.

ದೇಶದಲ್ಲಿ 500ಕ್ಕಿಂತ ಕಮ್ಮಿ ಹೊಸ ಕೇಸ್‌, 2 ಸಾವು: ಸಕ್ರಿಯ ಕೇಸ್‌ 5707ಕ್ಕೆ ಇಳಿಕೆ
ನವದೆಹಲಿ: ದೇಶದಲ್ಲಿ ಶುಕ್ರವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 490 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಗುಣಮಖರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 5705ಕ್ಕೆ ಇಳಿಕೆಯಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ.0.01 ಗುಣಮುಖರ ಪ್ರಮಾಣ ಶೇ. 98.80 ಹಾಗೂ ಮರಣ ದರ ಶೇ.1.18ರಷ್ಟು ದಾಖಲಾಗಿದೆ. ಈವರೆಗೂ 4.49 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.31 ಲಕ್ಷ ಜನ ಮೃತಪಟ್ಟಿದ್ದಾರೆ.
ದೇಶದ ಲಸಿಕಾಕರಣವು ಈವರೆಗೆ 220.66 ಕೋಟಿ ಡೋಸ್‌ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಹೃದಯ ಸ್ತಂಭನದಿಂದ 8ನೇ ತರಗತಿ ವಿದ್ಯಾರ್ಥಿ ಸಾವು: ಯುವ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತ್ತಿರೋದೇಕೆ?

click me!