ಜಗತ್ತಿನ ನಂ.4 ಆರ್ಥಿಕ ರಾಷ್ಟ್ರ ಜರ್ಮನಿಗೂ ಹಣ ಸಂಕಷ್ಟ

By Kannadaprabha News  |  First Published May 26, 2023, 6:22 AM IST

ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಆರ್ಥಿಕ ಹಿಂಜರಿಕೆಯಿಂದ ನರಳುತ್ತಿರುವಾಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿಕೆ ಕಾಲಿಟ್ಟಿದೆ. 


ಬರ್ಲಿನ್‌ (ಮೇ.26): ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಆರ್ಥಿಕ ಹಿಂಜರಿಕೆಯಿಂದ ನರಳುತ್ತಿರುವಾಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿಕೆ ಕಾಲಿಟ್ಟಿದೆ. ಜರ್ಮನಿಯಲ್ಲಿ ಹಣದುಬ್ಬರ ವಿಪರೀತ ಏರಿಕೆಯಾಗಿದ್ದು, ಸತತ ಎರಡು ತ್ರೈಮಾಸಿಕಗಳಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಋುಣಾತ್ಮಕ ಪ್ರಗತಿ ಸಾಧಿಸಿದೆ. ಜಿಡಿಪಿ ಸತತ ಎರಡು ತ್ರೈಮಾಸಿಕಗಳಲ್ಲಿ ಋುಣಾತ್ಮಕ ಪ್ರಗತಿಯನ್ನು ದಾಖಲಿಸಿದರೆ ಅದನ್ನು ಆರ್ಥಿಕ ಹಿಂಜರಿಕೆ ಎನ್ನುತ್ತಾರೆ. 

ಯುರೋಪಿಯನ್‌ ಒಕ್ಕೂಟದಲ್ಲೇ ಅತ್ಯಂತ ಬಲಾಢ್ಯ ದೇಶವೆಂದು ಜರ್ಮನಿಯನ್ನು ಗುರುತಿಸಲಾಗುತ್ತದೆ. ಯುರೋಪ್‌ನ ಆರ್ಥಿಕ ಎಂಜಿನ್‌ ಎಂದು ಪರಿಗಣಿಸಲ್ಪಡುವ ಈ ದೇಶದಲ್ಲೀಗ ಆರ್ಥಿಕ ಹಿಂಜರಿಕೆ ಆರಂಭವಾಗಿರುವುದು ಜಾಗತಿಕ ಆರ್ಥಿಕತೆಯನ್ನು ಇನ್ನಷ್ಟುಆತಂಕಕ್ಕೆ ತಳ್ಳಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜರ್ಮನಿಯ ಜಿಡಿಪಿ ಶೇ.0.3ರಷ್ಟುಕುಸಿತ ಕಂಡಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.0.5ರಷ್ಟುಕುಸಿತ ಕಂಡಿತ್ತು. ಇದರೊಂದಿಗೆ ಜಾಗತಿಕ ರೇಟಿಂಗ್‌ ಏಜೆನ್ಸಿಗಳು ಜರ್ಮನಿಯ ರೇಟಿಂಗ್‌ ಇಳಿಕೆ ಮಾಡಿವೆ. 

Tap to resize

Latest Videos

ನೂತನ ಸಂಸತ್‌ ಉದ್ಘಾಟನೆ ಬಹಿಷ್ಕಾರಕ್ಕೆ ಮೋದಿ ಕೆಂಗಣ್ಣು: ವಿಪಕ್ಷಗಳ ಹೆಸರೆತ್ತದೆ ಪ್ರಧಾನಿ ತರಾಟೆ

ಈಗ ಜರ್ಮನಿ ಸರ್ಕಾರ ಸಾಲ ಮರುಪಾವತಿ ಹಾಗೂ ವಿವಿಧ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದೆ. ‘ಭಾರಿ ಪ್ರಮಾಣದ ಹಣದುಬ್ಬರದಿಂದಾಗಿ ಜರ್ಮನಿಯ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಿಂದಾಗಿ ಇಡೀ ದೇಶದ ಆರ್ಥಿಕತೆ ಮಂಡಿಯೂರಿ ಕುಳಿತುಕೊಂಡಿದೆ’ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. 

ಮಂತ್ರಿಮಂಡಲ ಪೂರ್ಣ ಭರ್ತಿಗೆ ನಿರ್ಧಾರ, 24 ಮಂದಿಗೆ ಸಚಿವ ಸ್ಥಾನ: ಪ್ರಭಾವಿ ಖಾತೆಗೆ ಸಿದ್ದು-ಡಿಕೆಶಿ ಪೈಪೋಟಿ

ಜರ್ಮನಿಯಲ್ಲಿ ತೀವ್ರ ಹಣದುಬ್ಬರದಿಂದಾಗಿ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿದ್ದು, ಗೃಹಬಳಕೆ ವಸ್ತುಗಳ ಖರೀದಿ ಶೇ.1.2ರಷ್ಟುಇಳಿಕೆಯಾಗಿದೆ. ಸರ್ಕಾರದ ವೆಚ್ಚ ಕೂಡ ಶೇ.4.9ರಷ್ಟು ಕುಸಿದಿದೆ. ತೈಲ ಬೆಲೆ ವಿಪರೀತ ಏರಿಕೆಯಾಗಿದೆ. ‘ಜನರ ಖರೀದಿ ಶಕ್ತಿ ಕುಸಿತ, ಔದ್ಯೋಗಿಕ ಉತ್ಪಾದನೆ ಹಾಗೂ ಬೇಡಿಕೆಯಲ್ಲಿ ಕುಸಿತ, ಬಿಗಿಯಾದ ಹಣಕಾಸು ನೀತಿಗಳು ಹಾಗೂ ಅಮೆರಿಕದಲ್ಲಿನ ಆರ್ಥಿಕ ಹಿಂಜರಿಕೆ ಈ ಎಲ್ಲ ಅಂಶಗಳು ಜರ್ಮನಿಯ ಆರ್ಥಿಕ ಹಿಂಜರಿಕೆಗೆ ಕಾರಣವಾಗಿವೆ’ ಎಂದು ತಜ್ಞರು ಹೇಳಿದ್ದಾರೆ.

click me!