ಚೀನಾದಲ್ಲಿ ಕೋವಿಡ್ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಪ್ರತಿ ದಿನ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಬಳಿಕ ಚೀನಾ ಕೋವಿಡ್ ಅಂಕಿ ಸಂಖ್ಯೆ ಬಹಿರಂಗ ಮಾಡುತ್ತಿದೆ. ಕಳೆದ 35 ದಿನಗಳ ಸಾವಿನ ಸಂಖ್ಯೆ ಹಾಗೂ ಮುಂದಿನ 15 ದಿನದ ಭವಿಷ್ಯ ಮತ್ತೆ ಎಚ್ಚರಿಕೆ ಗಂಟೆ ಬಾರಿಸುತ್ತಿದೆ.
ಬೀಜಿಂಗ್(ಜ.14): ಚೀನಾದಲ್ಲಿ ಕೋವಿಡ್ ಪ್ರಕರಣ ಸರ್ಕಾರದ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಶೂನ್ಯ ಕೋವಿಡ್ ನಿಮಯ ಅನುಸರಿಸಿದ್ದ ಚೀನಾ ಇದೀಗ ಸೋಂಕಿನಿಂದ ತುಂಬಿ ತುಳುಕುತ್ತಿದೆ. ಒಂದೊಂದೆ ನಗರದಲ್ಲಿ ಕೋವಿಡ್ ಸೋಂಕಿನ ಅಂಕಿ ಅಂಶಗಳನ್ನು ಚೀನಾ ಸರ್ಕಾರ ಬಿಡುಗಡೆ ಮಾಡುತ್ತಿದೆ. ಇದರ ಜೊತೆಗೆ ಚೀನಾದ ತಜ್ಞರು ನೀಡಿರುವ ವರದಿ ಆತಂಕ ಹುಟ್ಟಿಸಿದೆ. ಜನವರಿ ಅಂತ್ಯಕ್ಕೆ ಬೀಜಿಂಗ್ ನಗರದ ಶೇಕಡಾ 92 ರಷ್ಟು ಮಂದಿ ಕೋವಿಡ್ ಸೋಂಕಿಗೆ ತುತ್ತಾಗಲಿದ್ದಾರೆ ಅನ್ನೋ ವರದಿ ನೀಡಿದ್ದಾರೆ. ಇತ್ತ ಕಳೆದ 35 ದಿನಗಳ ಕೋವಿಡ್ ಸಾವಿನ ಸಂಖ್ಯೆ ಕುರಿತು ಚೀನಾ ಮಾಹಿತಿ ಬಹಿರಂಗ ಪಡಿಸಿದೆ. ಡಿಸೆಂಬರ್ 8, 2022ರಿಂದ ಜನವರಿ 12, 2033ರ ವರೆಗೆ ಅಂದರೆ ಕಳೆದ 35 ದಿನಗಳಲ್ಲಿ ಚೀನಾದಲ್ಲಿ 60,000 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.
ಚೀನಾದ ಅಧ್ಯಯನ ವರದಿ ಪ್ರಕಾರ ಬೀಜಿಂಗ್‌ನಲ್ಲಿ ನೆಲೆಸಿರುವ 22 ಮಿಲಿಯನ್ ಜನಸಂಖ್ಯೆಯಲ್ಲಿ ಶೇಕಡಾ 92 ರಷ್ಟು ಮಂದಿ ಜನವರಿ ಅಂತ್ಯಕ್ಕೆ ಕೋವಿಡ್ ಸೋಂಕಿನಿಂದ ಬಳಲಿದ್ದಾರೆ. 2022ರ ಡಿಸೆಂಬರ್ ಅಂತ್ಯಕ್ಕೆ ಶೇಕಡಾ 76ರಷ್ಟು ಮಂದಿಗೆ ಕೋವಿಡ್ ಸೋಂಕು ತಗುಲಿತ್ತು. ಬೀಜಿಂಗ್‌ನಲ್ಲಿ ಶೇಕಡಾ 89.0 ರಷ್ಟು ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
undefined
Covid Cases: ನಾಲ್ಕನೇ ಡೋಸ್ ಹಾಕಿಸಿಕೊಳ್ಳಲೇ ಬೇಕಾ ? ಡಾ.ಸಿಎನ್ ಮಂಜುನಾಥ್ ಹೇಳೋದೇನು?
ಆತಂಕ ಬೀಜಿಂಗ್‌ನಲ್ಲಿ ಮಾತ್ರವಲ್ಲ, ಶಾಂಘೈ ಸೇರಿದಂತೆ ಹಲವು ನಗರಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂಘೈನಲ್ಲಿ ಈಗಾಗಲೇ ಶೇಕಡಾ 70 ರಷ್ಟು ಮಂದಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಮುಂದಿನ 3 ತಿಂಗಳು ಚೀನಾ ಕೋವಿಡ್ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಈಗಲೇ ಸಿದ್ಧತೆ ಮಾಡಿಕೊಳ್ಳಿ ಎಂದು ತಜ್ಞ ವೈದ್ಯರ ಸಮಿತಿ ಎಚ್ಚರಿಕೆ ನೀಡಿದೆ.
ಒಂದೆಡೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೆ, ಮತ್ತೊಂದೆಡೆ ಚೀನಾದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚೀನಾ ಆರೋಗ್ಯ ವಿಭಾಗ ಇದೀಗ ಅಂಕಿ ಅಂಶ ಬಿಡುಗಡೆ ಮಾಡಿದೆ. ಡಿಸೆಂಬರ್ 8, 2022ರಿಂದ ಈ ತಿಂಗಳ ಜನವರಿ 12ರ ವರೆಗೆ 59,938 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಸಾವಿನ ಸಂಖ್ಯೆಯ ಅಂಕಿ ಅಂಶ ಕೇವಲ ಆಸ್ಪತ್ರೆಯಲ್ಲಿ ದಾಖಲಾಗಿ ಮೃತರಾದ ಸೋಂಕಿತರ ಸಂಖ್ಯೆಯಾಗಿದೆ. ಆಸ್ಪತ್ರೆ ಸಿಗದೆ, ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟ ಕೋವಿಡ್ ಸೋಂಕಿತರ ಸಂಖ್ಯೆ ಒಟ್ಟುಗೂಡಿಸಿದರೆ ಲಕ್ಷ ದಾಟಲಿದೆ.
ಕರ್ನಾಟಕದ ಮೇಲೆ ‘ಚೀನಾ ಕೊರೋನಾ ಅಲೆ’ ಪ್ರಭಾವವಿಲ್ಲ?
ಭಾರತದಲ್ಲಿ ಕೋವಿಡ್ ಸಂಖ್ಯೆ ಇಳಿಮುಖ
ಭಾರತದಲ್ಲಿ ಶುಕ್ರವಾರ 174 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 2257ಕ್ಕೆ ಇಳಿಕೆಯಾಗಿದೆ. ಈವರೆಗೂ 4.46 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 4.41 ಕೋಟಿ ಜನ ಗುಣಮುಖರಾಗಿದ್ದಾರೆ. ಮತ್ತು 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 28 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.0.63 ದಾಖಲಾಗಿದೆ. ಸೋಂಕಿನಿಂದ 47 ಜನ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ.
ನಗರದಲ್ಲಿ 129 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 3039 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 125 ಮಂದಿ ಮೊದಲ ಡೋಸ್, 1070 ಮಂದಿ ಎರಡನೇ ಡೋಸ್ ಮತ್ತು 1844 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 4840 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.