ಲಡಾಖ್ ದಾಳಿಗೆ ಆಕ್ರೋಶ; ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ ಯುನಿವರ್ಸಿಟಿಯಿಂದ ಎಚ್ಚರಿಕೆ!

Suvarna News   | Asianet News
Published : Jun 20, 2020, 05:58 PM IST
ಲಡಾಖ್ ದಾಳಿಗೆ ಆಕ್ರೋಶ; ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ ಯುನಿವರ್ಸಿಟಿಯಿಂದ ಎಚ್ಚರಿಕೆ!

ಸಾರಾಂಶ

ಲಡಾಖ್ ಪ್ರಾಂತ್ಯದಲ್ಲಿ ಅತಿಕ್ರಮಣ ಮಾಡಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಚೀನಾದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ಲಡಾಕ್ ದಾಳಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿಶ್ವವಿದ್ಯಾಲಯ ಭಾರಚೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ

ಚೀನಾ(ಜೂ.20): ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಚೀನಾ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ಹೆಚ್ಚಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರು ಚೀನಾ ದಾಳಿಯನ್ನು ಖಂಡಿಸಿದ್ದಾರೆ. ಇದೇ ರೀತಿ ಚೀನಾದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಚೀನಾ ಆಕ್ರಮಣವನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ಚೀನಾ ವಿಶ್ವವಿದ್ಯಾಲಯ ಭಾರತೀಯ ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. 

10ರಲ್ಲಿ ನಾಲ್ವರು ಭಾರತೀಯರು ಚೀನಾ ಫೋನ್‌ಗೆ ಗುಡ್‌ಬೈ; ಸಮೀಕ್ಷೆ ಬಹಿರಂಗ!...

ಜೈಂಗ್ಸು ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ಭಾರತೀಯ ವಿದ್ಯಾರ್ಥಿಗಳು ಚೀನಾ ದಾಳಿಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ ಪೋಸ್ಟ್ ವೈರಲ್ ಆಗಿತ್ತು. ತಕ್ಷಣವೇ ಜೈಂಗ್ಸು ವಿಶ್ವವಿದ್ಯಾಲಯ, ವಿದ್ಯಾರ್ಥಿಗೆ ಖಡಕ್ ವಾರ್ನಿಂಗ್ ನೀಡಿದೆ. 

ಭಾರೀತಯಿ ವಿದ್ಯಾರ್ಥಿಯನ್ನು ಅಮಾನತು ಮಾಡುವುದಾಗಿ ಹೇಳಿದೆ. ಚೀನಾ ದೇಶದಲ್ಲಿದ್ದು, ಚೀನಾ ವಿರೋಧಿಸುವರು ದೇಶ ದ್ರೋಹ ಮಾಡಿದಂತೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇತ್ತ ಭಾರತೀಯ ವಿದ್ಯಾರ್ಥಿ ಕ್ಷಮೆ ಕೇಳಿದ್ದಾನೆ. ಆದರೆ ವಿಶ್ವವಿದ್ಯಾಲಯ ಇದೀಗ ಈ ರೀತಿ ಚೀನಾ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ಬಳಿಕ ಕ್ರಮ ಕೈಗೊಳ್ಳಲು ಮುಂದಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ