ತಿಂಗಳಿಗೆ 6 ಲಕ್ಷ ಸಂಪಾದಿಸ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್!

Published : Jun 20, 2020, 05:12 PM ISTUpdated : Jun 20, 2020, 05:15 PM IST
ತಿಂಗಳಿಗೆ 6 ಲಕ್ಷ ಸಂಪಾದಿಸ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್!

ಸಾರಾಂಶ

ಕೊರೋನಾದಿಂದ ಜೀವನ ಶೈಲಿಯೇ ಚೇಂಜ್| ಎಲ್ಲರ ಬದುಕನ್ನೂ ಬದಲಾಯಿಸಿದ ಮಹಾಮಾರಿ| ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್| ತಿಂಗಳಿಗೆ ಆರು ಲಕ್ಷ ಸಂಪಾದಿಸುತ್ತಿದ್ದವನೀಗ ಎರಡು ಸಾವಿರ ಗಳಿಸಲು ಪರದಾಟ

ಥಾಯ್ಲೆಂಡ್(ಜೂ.20): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಹೀಗಿರುವಾಗ ಜನರು ಊಟ, ತಿಂಡಿ, ಪ್ರಯಾಣ, ಶಾಪಿಂಗ್ ಇತ್ಯಾದಿಗಳಿಗೆ ಒಂದು ಬ್ರೇಕ್ ನೀಡಿದ್ದಾರೆ. ಇದರಿಂದ ಹಲವಾರು ಉದ್ಯಮಗಳು ನೆಲ ಕಚ್ಚಿವೆ ಹಾಗೂ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಿರುವಾಗ ವೈಮಾನಿಕ ಕ್ಷೇತ್ರವೂ ಬಂದ್ ಆಗಿದೆ. ಹಲವಾರು ಕಮರ್ಷಿಯಲ್ ಪೈಲಟ್‌ಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಅದೇನೇ ಇರಲಿ ಜೀವನ ಮುಂದುವರೆಯಲೇಬೇಕು. ಹೀಗಾಗಿ ಜನರು ತಮ್ಮ ಹಾಗೂ ತಮ್ಮನ್ನು ನಂಬಿದ ಕುಟುಂಬ ಸದಸ್ಯರ ಹೊಟ್ಟೆ ತುಂಬಿಸಲು ಏನಾದರೊಂದು ಉದ್ಯೋಗ ಮಾಡುತ್ತಿದ್ದಾರೆ. ಥಾಯ್ಲೆಂಡ್‌ನ ಓರ್ವ ಪೈಲಟ್‌ ಬದುಕನ್ನೇ ನೋಡಿ, ನೀಲಿ ಆಕಾಶದಲ್ಲಿ ಎತ್ತರಕ್ಕೆ ಕಾರಾಟ ನಡೆಸುತ್ತಿದ್ದ ಈತ ಓರ್ವ ಸಾಮಾನ್ಯ ಡೆಲಿವರಿ ಬಾಯ್ ಆಗಿ  ಮನೆ ಮನೆಗೂ ವಸ್ತುಗಳನ್ನು ತಲುಪಿಸಿ ಜೀವನ ನಡೆಸುತ್ತಿದ್ದಾರೆ.

42 ವರ್ಷದ ಪೈಲಟ್ Nakarin Inta ಕಳೆದ ನಾಲ್ಕು ವರ್ಷಗಳಿಂದ ಕಮರ್ಷಿಯಲ್ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೋನಾ ಸಂಕಷ್ಟ ಅವರನ್ನು ಫುಡ್ ಡೆಲಿವರಿ ಬಾಯ್ ಆಗಿ ಪರಿವರ್ತಿಸಿದೆ. ಈ ಏರ್‌ಳೈನ್ಸ್ ತನ್ನ ಹೆಚ್ಚಿನ ಉದ್ಯೋಗಿಗಳಿಗೆ ವೇತನ ನೀಡದೆಯೇ ರಜಡಯಲ್ಲಿ ಕಳುಹಿಸಿದೆ. ಇನ್ನು ಯಾರಿಗೆಲ್ಲಾ ವೇತನ ಸಿಗುತ್ತದೆಯೋ ಅದು ಏನೂ ಅಲ್ಲ. ಹೀಗಿರುವಾಗ ಅನೇಕರನ್ನು ಕೆಲಸದಿಂದಲೇ ಕುತ್ತು ಹಾಕಿದೆ.

ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸ್ತಿದ್ರು

ಈ ಸಂಕಷ್ಟದ ಸಮಯದಲ್ಲಿ ನನ್ನ ಅನೇಕ ಮಂದಿ ಸಹೋದ್ಯೋಗಿಗಳು ಸೈಡ್ ಜಾಬ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಮತ್ತೆ ಕೆಲಸಕ್ಕೆ ತೆರಳುವ ಕಾತುರವಿದೆ. ಇವರಲ್ಲಿ ಅನೇಕ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿಲ್ಲ ಎಂದು Nakarin Inta ಹೇಳಿದ್ದಾರೆ. ಅಲ್ಲದೇ ತಾನು ಒಂದು ತಿಂಗಳಿಗೆ ನಾಲ್ಕರಿಂದ ಆರು ಲಕ್ಷ ಸಂಪಾದಿಸುತ್ತಿದ್ದೆ. ಆದರೆ ಕೊರೋನಾದಿಂದಾಗಿ ಸದ್ಯ ಎರಡು ಸಾವಿರ ಸಂಪಾದಿಸುವುದೂ ಕಷ್ಟವಾಗಿದೆ ಎಂದಿದ್ದಾರೆ.

ಹಾರಾಡುವ ವಿಮಾನವನ್ನು ನೋಡುತ್ತಿರುತ್ತೇನೆ

ಅಲ್ಲದೇ ನಾನು ನನ್ನ ಸಹೋದ್ಯೋಗಿಗಳು, ಕ್ಯಾಪ್ಟನ್, ಕ್ಯಾಬಿನ್ ಕ್ರೂ, ಡಿಸ್ಪ್ಯಾಚರ್ ಹಾಗೂ ಇತರ ಉದ್ಯೋಗಿಗಳನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಈ ನೆನಪು ನನ್ನನ್ನು ಬಹುವಾಗಿ ಕಾಡುವಾಗ ಆಕಾಶದಲ್ಲಿ ಹಾರಾಡುವ ವಿಮಾನವನ್ನು ನೊಡುತ್ತೇನೆ ಎಂದು Nakarin Inta ತಿಳಿಸಿದ್ದಾರೆ.

ಬಾಲ್ಯದಿಂದಲೂ ಪೈಲಟ್ ಆಗುವ ಕನಸು ಕಂಡಿದ್ದೆ

ಸದ್ಯ ಓರ್ವ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ Nakarin Inta ತಮ್ಮ ಅನುಭವ ಹಂಚಿಕೊಳ್ಳುತ್ತಾ ನನಗೆ ಮೊದಲ ಡೆಲಿವರಿ ಆರ್ಡರ್ ಸಿಕ್ಕಾಗ, ಅದನ್ಉ ಸ್ವೀಕರಿಸಿ ಗ್ರಾಹಕರ ಬಳಿ ತಲುಪಿದಾಗ ಆ ಅನುಭವವವೇ ಬೇರೆಯದ್ದಾಗಿತ್ತು. ಆಗಲೇ ನನಗನಿಸಿದ್ದು, ನಾಣು ಈ ಕೆಲಸವನ್ನೂ ಮಾಡಬಲ್ಲೆ ಎಂದು. ಆದರೆ ಮತ್ತೆ ವಿಮಾನವನ್ನೇರಿ ಮತ್ತೆ ಆಕಾಶದಲ್ಲಿ ಹಾರಾಡಲು ಕಾಯುತ್ತಿದ್ದೇನೆ ಎಂದಿರುವ Nakarin Inta ಪೈಲಟ್ ಆಗುವ ಕನಸು ನಾನು ಬಾಲ್ಯದಿಂದಲೂ ಕಂಡಿದ್ದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ