ಲಡಾಕ್ ಸಂಘರ್ಷ: ಅಕ್ಸಾಯ್‌ ಚಿನ್‌ ಕೈತಪ್ಪಿದ್ದು ಹೇಗೆ?

By Kannadaprabha News  |  First Published Jun 20, 2020, 1:15 PM IST

1956ರಲ್ಲಿ ಸೇನಾ ಮುಖ್ಯಸ್ಥ ಜನರಲ್ ತಿಮ್ಮಯ್ಯ ಬ್ರಿಟಿಷ್‌ ಪರ್ವತಾರೋಹಿ ಸಿಡ್ನಿ ವಿಗ್ನಾಲ್‌ ಅವರನ್ನು ಅಕ್ಸಾಯ್‌ ಚಿನ್‌ನಲ್ಲಿ ಚೀನಾ ಟಿಬೆಟ್‌ವರೆಗೆ ರಸ್ತೆ ನಿರ್ಮಿಸುತ್ತಿದೆಯೇ ಎಂದು ನೋಡಿ ಬರಲು ಬೇಹುಗಾರಿಕೆಗೆ ಕಳುಹಿಸುತ್ತಾರೆ. ಆತ ನೀಡಿದ ವರದಿಯನ್ನು ಪ್ರಧಾನಿ ಮುಂದಿಟ್ಟಾಗ ಅಲ್ಲಿಯೇ ಇದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್‌ ‘ನೀವೆಲ್ಲ ಅಮೆರಿಕದ ಸಿಐಎಗೋಸ್ಕರ ಕೆಲಸ ಮಾಡುತ್ತಿದ್ದೀರಿ’ ಎಂದರಂತೆ. 


1956ರಲ್ಲಿ ಸೇನಾ ಮುಖ್ಯಸ್ಥ ಜನರಲ್‌ ತಿಮ್ಮಯ್ಯ ಬ್ರಿಟಿಷ್‌ ಪರ್ವತಾರೋಹಿ ಸಿಡ್ನಿ ವಿಗ್ನಾಲ್‌ ಅವರನ್ನು ಅಕ್ಸಾಯ್‌ ಚಿನ್‌ನಲ್ಲಿ ಚೀನಾ ಟಿಬೆಟ್‌ವರೆಗೆ ರಸ್ತೆ ನಿರ್ಮಿಸುತ್ತಿದೆಯೇ ಎಂದು ನೋಡಿ ಬರಲು ಬೇಹುಗಾರಿಕೆಗೆ ಕಳುಹಿಸುತ್ತಾರೆ. ಆತ ನೀಡಿದ ವರದಿಯನ್ನು ಪ್ರಧಾನಿ ಮುಂದಿಟ್ಟಾಗ ಅಲ್ಲಿಯೇ ಇದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್‌ ‘ನೀವೆಲ್ಲ ಅಮೆರಿಕದ ಸಿಐಎಗೋಸ್ಕರ ಕೆಲಸ ಮಾಡುತ್ತಿದ್ದೀರಿ’ ಎಂದರಂತೆ.

ಆದರೆ ವಿಪರ್ಯಾಸ ನೋಡಿ, ಮುಂದೆ ಅದೇ ಚೀನಾದ ಸರ್ಕಾರಿ ಮಾಧ್ಯಮ ದಲೈ ಲಾಮಾರನ್ನು ಒಳಗೆ ಬಿಟ್ಟುಕೊಂಡಿದ್ದಕ್ಕೆ ಪಂಡಿತ್‌ ನೆಹರು ಮತ್ತು ಕೃಷ್ಣ ಮೆನನ್‌ರನ್ನು ಅಮೆರಿಕನ್‌ ಸಾಮ್ರಾಜ್ಯಶಾಹಿಯ ನಾಯಿಗಳು ಎಂದು ಹೀಗಳೆಯುತ್ತದೆ. ‘ಒಂದು ಹಿಡಿ ಹುಲ್ಲು ಕೂಡ ಬೆಳೆಯದ’ ಅಕ್ಸಾಯ್‌ಚಿನ್‌ ನಮ್ಮಲ್ಲೇ ಉಳಿಯಬೇಕೆಂಬ ಆಗ್ರಹ ಸ್ವಯಂ ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಇರದೇ ಇದ್ದುದರಿಂದ ಅದು ಇವತ್ತು ಸಂಪೂರ್ಣ ಚೀನಾದ ಬಳಿಯಿದೆ.

Tap to resize

Latest Videos

undefined

ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

ಅಷ್ಟೇ ಅಲ್ಲ, ಈಗ ಚೀನಾ ಅದಕ್ಕೆ ತಾಗಿಕೊಂಡಿರುವ ಗಲ್ವಾನ್‌ ಕಣಿವೆಗೂ ಬಂದು ಕುಳಿತಿದೆ. ಚೀನಾದ ತಂತ್ರವೇ ಹಾಗೆ ಮೂರು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ. ಅಂದರೆ ಒಂದು ಸಲಕ್ಕೆ ಒಂದು ಹೆಜ್ಜೆಯ ಲಾಭ ನಿಶ್ಚಿತ.

ಮಿಂಚಿ ಹೋಯಿತು ಕಾಲ

ಚೀನಾದ ಪ್ರಧಾನಿ ಮತ್ತು ನೆಹರು ನಡುವೆ ಮುಂದೆ ಗಡಿ ಬಗ್ಗೆ ಅನೇಕ ಸಭೆ ನಡೆದಾಗ ಸಿಕ್ಕಿಂ ಮತ್ತು ಬೇರೆ ಕಡೆ ಬ್ರಿಟಿಷರು ಎಳೆದ ಮ್ಯಾಕ್‌ಮೋಹನ್‌ ಗೆರೆ ಒಪ್ಪಿಕೊಳ್ಳುವುದಾಗಿ ಹೇಳಿದ ಚೀನಾ, ಲಡಾಖ್‌ನಲ್ಲಿ ಮಾತ್ರ ಹೊಸದಾಗಿ ಸರ್ವೇ ಆಗಬೇಕು ಎಂದಿತು. ಆದರೆ ಭಾಗಶಃ ಒಪ್ಪಂದಗಳಿಗೆ ನೆಹರು ಒಪ್ಪಲಿಲ್ಲ. ಹೀಗಾಗಿ 1962ರ ಯುದ್ಧ ಮತ್ತು 1967ರ ಘರ್ಷಣೆ ನಡೆದವು. ಶತ್ರುವಿನ ಗುಣಧರ್ಮವನ್ನೇ ಮೊದಲು ಅರಿಯದ, ನಂತರ ಅರಿತರೂ ಒಪ್ಪಿಕೊಳ್ಳದ ನೆಹರು ಇವತ್ತಿನ ಚೀನಾದ ಜೊತೆಗಿನ ಯುದ್ಧ ಸನ್ನಿವೇಶದಲ್ಲಿ ತಮ್ಮ ಪ್ರಮಾದಗಳಿಂದಾಗಿ ನೆನಪಾಗುತ್ತಾರೆ. 

ಚೀನಾಗೆ ಲಾಸಾ ಆಕ್ರಮಣ ತಯಾರಿಯಾದ್ರೆ, ನೆಹರೂಗೆ ಚೀನಾಗೆ ವಿಟೋ ಕೊಡಿಸುವ ತಯಾರಿ.!

ಝಾನ್ಸಿ ರಾಣಿಯ ಸಿನಿಮಾ

1954ರ ಜೂನ್‌ 27ರ ಬೆಳಿಗ್ಗೆ ಮಾತುಕತೆ ಶುರು ಮಾಡುವುದಕ್ಕಿಂತ ಮುಂಚೆ ಚೌ ಎನ್‌ ಲಾಯ… ಅವರು ಸೊಹ್ರಾಬ್‌ ಮೋದಿ ಅವರ ‘ಝಾನ್ಸಿ ಕಿ ರಾಣಿ’ ಚಲನಚಿತ್ರ ನೋಡಿ ಬಂದಿದ್ದರು. ‘ಒಳ್ಳೆಯ ಚಿತ್ರ, ವಿದೇಶೀಯರ ವಿರುದ್ಧದ ಹೋರಾಟ’ ಎಂದು ಚೀನಿ ಪ್ರಧಾನಿ ಹೇಳಿದರೆ, ಭಾರತದ ಪ್ರಧಾನಿ ‘ಇಲ್ಲ ಅದು ಕೇವಲ ಜಮೀನ್ದಾರಿಗಳ ಹೋರಾಟ’ ಎನ್ನುತ್ತಾರಂತೆ. ಆಗ ಮಾವೋ ಜೊತೆ ಹೋರಾಟದಲ್ಲಿದ್ದ ಚೌ ವಿದೇಶೀಯರ ವಿರುದ್ಧ ಮೊದಲು ಬೀದಿಗಿಳಿಯುವುದು ಶ್ರೀಮಂತರೇ ಎನ್ನುತ್ತಾರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!