ಹಿಂದೂ ಮಹಾಸಾಗರದಲ್ಲಿ ಡ್ರೋಣ್ ಮೂಲಕ ಚೀನಾ ಬೇಹುಗಾರಿಕೆ

By Kannadaprabha News  |  First Published Jan 1, 2021, 10:38 AM IST

ಕುತಂತ್ರಿ ಚೀನಾ ಇದೀಗ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ಡ್ರೋನ್‌ಗಳ ಮೂಲಕ ಬೇಹುಗಾರಿಕೆ ನಡೆಸುತ್ತಿದೆ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನ್ಯೂಜೆರ್ಸಿ(ಜ.01): ಭಾರತ ಹಾಗೂ ಇತರ ಅಕ್ಕ-ಪಕ್ಕದ ದೇಶಗಳ ವಿರುದ್ಧ ಕಾಲುಕೆದರಿ ಜಗಳ ತೆಗೆಯುತ್ತಿರುವ ಚೀನಾ ಈಗ ಜಲಾಂತರ್ಗಾಮಿ ಡ್ರೋನ್‌ಗಳನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಸಮುದ್ರದಲ್ಲಿ ನಡೆಯುವ ಹಡಗು ಸಂಚಾರದ ಮೇಲೆ ಈ ಡ್ರೋನ್‌ಗಳು ಕಣ್ಣಿಡಲಿವೆ. ಸಮುದ್ರದಲ್ಲಿನ ಇತರ ದೇಶಗಳ ಚಟುವಟಿಕೆಯನ್ನು ಗಮನಿಸುವ ಉದ್ದೇಶವನ್ನು ಚೀನಾ ಹೊಂದಿದೆ ಎಂದು ಅಮೆರಿಕ ರಕ್ಷಣಾ ತಜ್ಞ ಹೈ ಸಟನ್‌ ಅವರು ಫೋರ್ಬ್ಸ್ ನಿಯತಕಾಲಿಕೆಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

Tap to resize

Latest Videos

2016ರಲ್ಲಿ ಅಮೆರಿಕ ಇಂಥ ಸಾಧನವನ್ನು ಸಮುದ್ರದಲ್ಲಿ ನಿಯೋಜಿಸಿತ್ತು. ಆದರೆ ಇದನ್ನು ಚೀನಾ 2016ರಲ್ಲಿ ಇದನ್ನು ವಶಪಡಿಸಿಕೊಂಡಿತ್ತು ಹಾಗೂ ಹಡಗುಗಳ ಸುರಕ್ಷಿತ ಸಾಗಣೆಗೆ ಇಂಥದ್ದನ್ನು ಅಳವಡಿಸುವುದನ್ನು ವಿರೋಧಿಸಿತ್ತು. ಆದರೆ ಅಚ್ಚರಿ ಎಂಬಂತೆ ಚೀನಾ 2019ರ ಡಿಸೆಂಬರ್‌ನಲ್ಲೇ ಜಲಾಂತರ್ಗಾಮಿ ಡ್ರೋನ್‌ಗಳನ್ನು ಅಳವಡಿಸಿತ್ತು. 400 ಆಬ್ಸರ್ವೇಶನ್‌ಗಳ ಬಳಿಕ ಇವನ್ನು ಫೆಬ್ರವರಿಯಲ್ಲಿ ಪುನಃ ವಶಕ್ಕೆ ತೆಗೆದುಕೊಂಡಿತ್ತು ಎಂದು ಸಟನ್‌ ವಿವರಿಸಿದ್ದಾರೆ.

ಚೀನಾ ಆಟಕ್ಕೆ ಅಮೆರಿಕ ಲಗಾಮು, ದೊಡ್ಡಣ್ಣ ಕೊಟ್ಟಿದ್ದಾನೆ ದೊಡ್ಡ ಶಾಕ್..!

ಹಿಂದೂ ಮಹಾಸಾಗರದಲ್ಲಿ 12 ಡ್ರೋನ್‌ಗಳನ್ನು ಹಾಕಲಾಗಿತ್ತು. ಬಹುಕಾಲ ನೀರಿನಲ್ಲೇ ಇರಲು ಶಕ್ತಿ ಉಳ್ಳವು ಇವಾಗಿವೆ. ನಿಧಾನವಾಗಿ ಇವು ಚಲಿಸುತ್ತವೆ. ಸಮುದ್ರದಲ್ಲಿನ ಚಟುವಟಿಕೆಗಳ ಮಾಹಿತಿಯನ್ನೂ ಇವು ಸಂಗ್ರಹಿಸವೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಅವರು, ಹಿಂದೂ ಮಹಾಸಾಗರದಲ್ಲಿ 120 ಯುದ್ಧ ಹಡಗುಗಳನ್ನು ವಿವಿಧ ದೇಶಗಳು ನಿಯೋಜಿಸಿದ್ದು ಆಯಕಟ್ಟಿನ ಸ್ಥಳಗಳಿಗೆ ಸ್ಪರ್ಧೆ ಏರ್ಪಟ್ಟಿದೆ ಎಂದಿದ್ದು ಇಲ್ಲಿ ಗಮನಾರ್ಹ.
 

click me!