ಪಕ್ಕದ ಮನೆಯಾಕೆ ಭೇಟಿಗೆ ಸುರಂಗ, ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತಿರಾಯ!

By Suvarna News  |  First Published Dec 31, 2020, 5:14 PM IST

ವಿವಾಹಿತರ ಅಕ್ರಮ ಸಂಬಂಧ| ಹೆಂಡತಿ ಬಿಟ್ಟು ಪಕ್ಕದ ಮನೆಯಾಕೆಯ ಪ್ರೀತಿ| ಭೇಟಿಯಾಗಲು ಸುರಂಗ ಕೊರೆದ| ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪ್ರೇಮಿಗಳು| 


ಮೆಕ್ಸಿಕೋ(ಡಿ.31): ಈ ಘಟನೆ ನಡಡೆದಿದ್ದು ಮೆಕ್ಸಿಕೋನ ಟಿಯೂಆನಾದಲ್ಲಿ. ಅಲ್ಬರ್ಟೋ ಎಂಬಾತ ತನ್ನ ಪಕ್ಕದ ಮನೆಯಲ್ಲಿದ್ದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಅಲ್ದೇ ಈತ ಖುದ್ದು ವಿವಾಹಿತನಾಗಿದ್ದ. ಹೀಗಿದ್ದರೂ ನೆರೆಮನೆಯಾಕೆಯ ಪ್ರೀತಿಯಲ್ಲಿ ಬಿದ್ದಿದ್ದ. ಹೀಗಾಗಿ ಏನು ಮಾಡುವುದೆಂದು ತೋಚದ ಆತ ಆಕೆಯನ್ನು ಭೇಟಿಯಾಗಲು ಸುರಂಗವೊಂದನ್ನು ಕೊರೆದಿದ್ದ. ಈ ಗುಪ್ತ ದಾರಿಯ ಮೂಲಕ ಆತ ಅದ್ಯಾವುದೇ ಅಡೆ ತಡೆ ಇಲ್ಲದೇ, ತನ್ನ ಪ್ರೇಯಸಿಯ ಭೇಟಿಯಾಗಿ ಯಾರಿಗೂ ತಿಳಿಯದಂತೆ ಮರಳಿ ಬರುತ್ತಿದ್ದ. ಆದರೆ ಅದೊಂದು ದಿನ ಆ ನೆರೆಮನೆಯಾಕೆಯ ಗಂಡ ಇವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾನೆ, ಜೊತೆಗೆ ಸುರಂಗ ರಹಸ್ಯವೂ ಬಯಲಾಗಿದೆ.

ಪ್ರತಿದಿನಕ್ಕಿಂತ ಬೇಗ ಮರಳಿದ್ದ ಗಂಡ

Tap to resize

Latest Videos

ವರದಿಗಳನ್ವಯ ಈ ರಹಸ್ಯ ಬಯಲಾಗಿದ್ದು, ಫಾಮೆಲಾ(ವಿವಾಹಿತ ಮಹಿಳೆ)ಯ ಗಂಡ(ಜಾರ್ಜ್) ಅದೊಂದು ಬೇಗ ಮನೆಗೆ ಬಂದಿದ್ದರಿಂದ. ಅಂದು ಆತ ತನ್ನ ಹೆಂಡತಿ ಹಾಗೂ ನೆರೆಮನೆ ನಿವಾಸಿ ಅಲ್ಬರ್ಟೋನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದ. ಅಲ್ಬರ್ಟೋ ಕೌಚ್‌ ಒಂದರ ಹಿಂದೆ ಅಡಗಿ ನೋಡ ನೋಡುತ್ತಿದ್ದಂತೆಯೇ ಮಾಯವಾಗಿದ್ದ. ಜಾರ್ಜ್ ಆತನನ್ನು ತುಂಬಾ ಸಮಯ ಬೆಡ್‌ರೂಂನಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 

ಬುದ್ಧಿವಂತಿಕೆಯಿಂದ ನಿರ್ಮಿಸಲಾಗಿತ್ತು ಸುರಂಗ

ಅಲ್ಬರ್ಟೋ ಅಚಾನಕ್ಕಾಗಿ ಮಾಯಾವಾಗಿದ್ದು ಜಾರ್ಜ್‌ಗೆ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ ಮನೆ ಪರಿಶೀಲನೆ ಆರಂಭಿಸಿದ. ಹೀಗಿರುವಾಗ ಆತನಿಗೆ ನೆಲದಲ್ಲಿ ಸುರಂಗ ಇರುವುದು ತಿಳಿದು ಬಂದಿದೆ. ಇದರಲ್ಲಿಳಿದ ಜಾರ್ಜ್ ಮುಂದೆ ಹೋದಾಗ ಅದು ಆಲ್ಬರ್ಟೋ ಮನೆಯಲ್ಲಿ ಕೊನೆಯಾಗುವುದನ್ನು ಕಂಡಿದ್ದಾನೆ. 

ಅಲ್ಬರ್ಟೋ ಹೆಂಡತಿಗೆ ಎಲ್ಲವನ್ನೂ ತಿಳಿಸಿದ 

ಸಿಕ್ಕಾಕೊಂಡ ಬಳಿಕ ಅಲ್ಬರ್ಟೋ ಜಾರ್ಜ್‌ ಬಳಿ ಹೆಂಡತಿಗೆ ಈ ಬಗ್ಗೆ ಏನೂ ಹೇಳಬೇಡಿ ಎಂದು ಮನವಿ ಮಾಡಿದ್ದಾನೆ. ಆದರೆ ಜಾರ್ಜ್ ಇದ್ಯಾವುದನ್ನೂ ಕೇಳಿಸಿಕೊಳ್ಳದೇ ಆತನ ಹೆಮಡತಿಗೆ ಎಲ್ಲವನ್ನೂ ತಿಳಿಸಿದ್ದಾನೆ. 

click me!