21 ಅಮಾಯಕರ ಪ್ರಾಣ ತೆಗೆದ ಬಸ್ ಡ್ರೈವರ್; ಪೊಲೀಸರ ತನಿಖೆಯಿಂದ ಹೊರಬಿತ್ತು ಸ್ಫೋಟಕ ಮಾಹಿತಿ!

By Suvarna NewsFirst Published Jul 13, 2020, 2:38 PM IST
Highlights

21 ಅಮಾಯಕ ಪ್ರಯಾಣಿಕರ ಜೀವ ತೆಗೆದ ಬಸ್ ಅಪಘಾತ ಪ್ರಕರಣದ ತನಿಖೆ ಅಂತ್ಯಗೊಂಡಿದೆ. ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. 21ಜನರ ಸವಾರಿಗೆ ಕಾರಣ ಯಾರು ಅನ್ನೋದನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬೀಜಿಂಗ್(ಜು.13):  ದಕ್ಷಿಣ ಚೀನಾದಲ್ಲಿ ನಡೆದ ಬಸ್ ಅಪಘಾತ ಪ್ರಕರಣದಲ್ಲಿ 21 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಂಬೀರ ಗಾಯಗೊಂಡಿದ್ದ ಘಟನೆ ನಡಿದಿತ್ತು. ಈ ಕುರಿತು ತನಿಖೆ ಆರಂಭಿಸಿದ ಬೀಜಿಂಗ್ ಪೊಲೀಸರು ಇದೀಗ ತನಿಖೆ ಪೂರ್ಣಗೊಳಿಸಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಬಸ್ ಅಪಘಾತ ಪ್ರಕರಣಕ್ಕೆ ಬಸ್ ಚಾಲಕನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲ ಇದಕ್ಕೆ ಕಾರಣವನ್ನೂ ಬಹಿರಂಗ ಪಡಿಸಿದ್ದಾರೆ.

ಮೈಸೂರು: ಮಾಜಿ ಸಚಿವ ವಿಶ್ವನಾಥ್ ಮೊಮ್ಮಗ ಸಾವು...

ಬಸ್ ಚಾಲಕ ವಾಸವಿದ್ದ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಬಸ್ ಚಾಲಕ, ತಾನು ಸೇರಿದಂತೆ ಬಸ್ ಪ್ರಯಾಣಿಕರನ್ನೇ ಉದ್ದೇಶಪೂರ್ವಕವಾಗಿ ಕೊಂದಿದ್ದಾನೆ ಎಂದು ಪೊಲೀಸರ ವರದಿಯಲ್ಲಿ ಹೇಳಿದ್ದಾರೆ. ತನ್ನ ಮನೆ ನೆಲಸಮ ಮಾಡಿದ ಆಕ್ರೋಶಕ್ಕೇ ಸೇಡು ತೀರಿಸಿಕೊಳ್ಳಲು ಬಸ್ ಚಾಲಕ ಅಂದು ಮದ್ಯ ಸೇವಿಸಿ ಬಸ್ ಚಾಲನೆ ಮಾಡಿದ್ದಾನೆ. ಇಷ್ಟೇ ಅಲ್ಲ ಅಪಘಾತ ಮೂಲಕ ಎಲ್ಲರ ಪ್ರಾಣ ತೆಗೆಯಲು ನಿರ್ಧರಿಸಿದ್ದ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ

ಬಸ್ ಅಪಘಾತ ಹಾಗೂ ಪ್ರಯಾಣಿಕರ ಸಾವಿನ ಮೂಲಕ ಅಧಿಕಾರಿಗಳ ತಿರುಗೇಟು ನೀಡಲು ಬಸ್ ಚಾಲಕ ನಿರ್ಧರಿಸಿದ್ದ. ಹೀಗಾಗಿ ಅಮಾಯಕ 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಕುರಿತು ಬೀಜಿಂಗ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ ವರದಿಯಲ್ಲಿ ಅಪಘಾತದ ಕಾರಣಗಳನ್ನು ಬಹಿರಂಗ ಪಡಿಸಿದ್ದಾರೆ.

click me!