
ಲಂಡನ್(ಜು.12): ಕಜಕಿಸ್ತಾನದಲ್ಲಿ ಕೊರೋನಾಗಿಂತಲೂ ಭೀಕರವಾದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದೆ ಎಂದು ಚೀನಾ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕಜಕಿಸ್ತಾನದಲ್ಲಿ ನಿಗೂಢ ನ್ಯುಮೋನಿಯಾ ರೋಗ ಏಕಾಏಕಿ ಹರಡಲು ಕೊರೋನಾ ವೈರಸ್ಸೇ ಕಾರಣವಿರಬಹುದು ಎಂದು ವಿಶ್ವ ಆರೋಗ್ಯ ಸಂಘಟನೆ ಸ್ಪಷ್ಟನೆ ನೀಡಿದೆ.
ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ
ಡಬ್ಲ್ಯುಎಚ್‌ಒದ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ.ಮೈಕೆಲ್ ರಿಯಾನ್ , ‘ಕಜಕಿಸ್ತಾನದಲ್ಲಿ ಈವರೆಗೆ ಒಟ್ಟು 50,000 ಕೊರೋನಾ ಸೋಂಕು ಪ್ರಕರಣಗಳು ಮತ್ತು 264 ಸಾವು ಸಂಭವಿಸಿದ್ದಾಗಿ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಲವೆಡೆ ಪತ್ತೆಯಾದ ನ್ಯುಮೋನಿಯಾ ಪ್ರಕರಣಗಳು ಕೊರೋನಾ ಸೋಂಕೇ ಆಗಿರಬಹುದು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಡಬ್ಲ್ಯುಎಚ್‌ಒ ಸ್ಥಳೀಯ ಅಧಿಕಾರಿಗಳೊಂದಿಗೆ ಎಕ್ಸ್-ರೇಸ್ ಮತ್ತು ನ್ಯುಮೋನಿಯಾದ ವಿಧದ ಬಗ್ಗೆ ಪರಿಶೀಲನೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ. ಇತ್ತ ಕಜಕಿಸ್ತಾನವೂ ಕೊರೋನಾಗಿಂತ ಭೀಕರ ನ್ಯುಮೋನಿಯಾ ಸೋಂಕು ಹರಡುತ್ತಿದೆ ಎಂಬ ಚೀನಾ ಮಾಧ್ಯಮಗಳ ವರದಿ ಸುದ್ದಿ ಸುಳ್ಳು ಎಂದು ಶುಕ್ರವಾರವೇ ಸ್ಪಷ್ಟನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ