
ಕಠ್ಮಂಡು(ಜೂ.24): ಲಡಾಖ್ ಗಡಿಯಲ್ಲಿ ಭಾರತದ ಭೂ ಪ್ರದೇಶ ಕಬಳಿಸಲು ಕಾದು ಕುಳಿತಿರುವ ಚೀನಾ ನೇಪಾಳದ ಜಮೀನ ನುಂಗಿ ಹಾಕಿದೆ. ನೇಪಾಳದ ಕೃಷಿ ಸಚಿವಾಲಯದ ವರದಿಯನ್ವಯ ಒಟ್ಟು ಹತ್ತು ಪ್ರದೇಶಗಳನ್ನು ಚೀನಾ ತನ್ನ ತೆಕ್ಕಗೆ ಸೇರಿಸಿಕೊಂಡಿದೆ. ಇಷ್ಟೇ ಅಲ್ಲದೇ 33 ಹೆಕ್ಟೇರ್‌ನಷ್ಟು ನೇಪಾಳದ ಭೂ ಪ್ರದೇಶದಲ್ಲಿ ನದಿ ಹರಿವನ್ನು ಬದಲಾಯಿಸಿ ನೈಸರ್ಗಿಕ ಗಡಿಯಾಗಿ ಪರಿವರ್ತಿಸುವ ಮೂಲಕ ಇದನ್ನೂ ಕಸಿದುಕೊಂಡಿದೆ. ಭಾರತ ಮಾತುಕತೆ ನಡೆಸಲು ನವಿ ಮಾಡಿಕೊಂಡಿದ್ದರೂ ವಿವಾದಾತ್ಮಕ ನಕ್ಷೆ ಜಾರಿಗೊಳಿಸಿ, ಚೀನಾದೆಡೆ ವಾಲಿಕೊಂಡಿದ್ದ ನೇಪಾಳದ ಕಮ್ಯುನಿಸ್ಟ್ ಸರ್ಕಾರ ಡ್ರ್ಯಾಗನ್ ದೇಶದ ಈ ನರಿ ಬುದ್ಧಿ ಬಗ್ಗೆ ಮೌನ ತಾಳಿದೆ. ಆದರೆ ಅತ್ತ ವಿಪಕ್ಷಗಳಿಗೆ ಚೀನಾದ ಈ ನಡೆ ಭಯ ಹುಟ್ಟಿಸಿದೆ.
ನೇಪಾಳ ರೇಡಿಯೋಗಳಿಂದ ಭಾರತ ವಿರೋಧಿ ಪ್ರೋಗ್ರಾಂ!
ವಿಪಕ್ಷದ ನೇಪಾಳಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಅಲ್ಲಿನ ಮಾಜಿ ಉಪ ಪ್ರಧಾನಿ ಬಿಮಲೇಂದ್ರ ನಿಧಿ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಚೀನಾ ಬಲವಂತವಾಗಿ ನೇಪಾಳದ ಭೂಪ್ರದೇಶವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಚೀನಾದ ಹಿಮಾಲಯ ಹಾಗೂ ನೇಪಾಳದ ಹಳ್ಳಿ ರುಯೀಯನ್ನು ಕಬಳಿಸಿರುವ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೆಪಿ ಓಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಚೀನಾದ ಕಮ್ಯುನಿಸ್ಟ್ ಪಕ್ಷವು ಸರ್ಕಾರಕ್ಕೆ ತರಬೇತಿ ನೀಡುತ್ತಿದೆ. ಆದರೆ ಈ ಇಡೀ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.
ಭಾರತದ ಭೂಮಿ ಕಬಳಿಸಿದ ನೇಪಾಳ ನಕ್ಷೆಗೆ ಅಂಗೀಕಾರ
ರಸ್ತೆ ನಿರ್ಮಾಣ ಹೆಸರಲ್ಲಿ ನೇಪಾಳದ ಪ್ರದೇಶ ಕಬಳಿಸಿದ ಚೀನಾ
ಇನ್ನು ಚೀನಾ ಟಿಬೆಟ್‌ನಲ್ಲಿ ರಸ್ತೆ ನಿರ್ಮಾಣದ ನೆಪವೊಡ್ಡಿ ನೇಪಾಳದ ಭೂ ಪ್ರದೇಶವನ್ನು ಕಬಳಿಸಿದೆ ಎನ್ನಲಾಗಿದೆ. ನೇಪಾಳದ ಕೃಷಿ ಸಚಿವಾಲಯದ ಸರ್ವೆ ಡಿಪಾರ್ಟ್‌ಮೆಂಟ್ನಲ್ಲಿ ಇರುವ 11 ಸ್ಥಳಗಳ ಪಟ್ಟಿಯಲ್ಲಿ 10 ಸ್ಥಳಗಳನ್ನು ಚೀನಾ ನುಂಗಿ ಹಾಕಿದೆ. ವರದಿಯನ್ವಯ ಒಟ್ಟು ಹತ್ತು ಪ್ರದೇಶಗಳನ್ನು ಚೀನಾ ತನ್ನ ತೆಕ್ಕಗೆ ಸೇರಿಸಿಕೊಂಡಿದೆ. ಅಲ್ಲದೇ 33 ಹೆಕ್ಟೇರ್‌ನಷ್ಟು ನೇಪಾಳದ ಭೂ ಪ್ರದೇಶದಲ್ಲಿ ನದಿ ಹರಿವನ್ನು ಬದಲಾಯಿಸಿ ನೈಸರ್ಗಿಕ ಗಡಿಯಾಗಿ ಪರಿವರ್ತಿಸಿದೆ. ಇನ್ನು ಈ ಅತಿಕ್ರಮಣವನ್ನು ಸಕ್ರಮವಾಗಿಸುವ ನಿಟ್ಟಿನಲ್ಲಿ ಹಳ್ಳಿಯಲ್ಲಿದ್ದ ಗಡಿ ಕಂಬಗಳನ್ನೂ ತೆಗೆದು ಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ