5 ದಿನದಲ್ಲಿ 40000 ಬಾರಿ ಚೀನಾ ಸೈಬರ್ ದಾಳಿ ಯತ್ನ!| ಐಟಿ, ಬ್ಯಾಂಕಿಂಗ್ ವಲಯಗಳೇ ಟಾರ್ಗೆಟ್
ಮುಂಬೈ(ಜೂ.24): ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಚೀನಾದಿಂದ ಭಾರತದ ಮೇಲೆ ಸೈಬರ್ ದಾಳಿ ನಡೆಯಬಹುದು ಎಂಬ ಎಚ್ಚರಿಕೆ ನಿಜವಾಗಿದೆ. ಕಳೆದ 5 ದಿನದಲ್ಲಿ ಚೀನಾ 40,000 ಬಾರಿ ಸೈಬರ್ ದಾಳಿಗೆ ಯತ್ನ ನಡೆಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಮಹಾರಾಷ್ಟ್ರ ಸೈಬರ್ ಭದ್ರತಾ ಇಲಾಖೆ ಬಹಿರಂಗಪಡಿಸಿದೆ.
ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!
‘ಕಳೆದ ನಾಲ್ಕೈದು ದಿನಗಳಲ್ಲಿ ಸೈಬರ್ ದಾಳಿ ಯತ್ನಗಳು ಏಕಾಏಕಿ ಏರಿಕೆಯಾಗಿವೆ. ಚೀನಾದ ಹ್ಯಾಕರ್‌ಗಳು ಮಾಹಿತಿ ತಂತ್ರಜ್ಞಾನ ಮೂಲ ಸೌಕರ‍್ಯ ಮತ್ತು ಬ್ಯಾಂಕಿಂಗ್ ವಲಯಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿದ್ದಾರೆ. ಈ ಅವಧಿಯಲ್ಲಿ ಕನಿಷ್ಠ 40,300 ಬಾರಿ ಸೈಬರ್ ದಾಳಿಗೆ ಯತ್ನಿಸಲಾಗಿದೆ. ಚೀನಾ ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡುವಿನಿಂದ ಸೈಬರ್ ದಾಳಿ ಯತ್ನ ನಡೆದಿದೆ’ ಎಂದು ಮಹಾರಾಷ್ಟ್ರದ ಸೈಬರ್ ಭದ್ರತಾ ವಿಭಾಗವಾಗಿರುವ ‘ಮಹಾರಾಷ್ಟ್ರ ಸೈಬರ್’ನ ಐಜಿಪಿ ಯಶಸ್ವಿನಿ ಯಾದವ್ ತಿಳಿಸಿದ್ದಾರೆ.
ಮೋದಿಯನ್ನು ಚೀನಾ ಹೊಗಳೋದೇಕೆ?: ರಾಹುಲ್ ಪ್ರಶ್ನೆ!
ಸೇವೆಗಳು ಲಭ್ಯವಾಗದಿರುವಂತೆ ಮಾಡುವುದು, ಇಂಟರ್ನೆಟ್ ಪ್ರೋಟೋಕಾಲ್ ಹೈಜಾಕ್ ಮಾಡುವುದು ಹಾಗೂ ಫಿಶಿಂಗ್ ನಡೆಸುವ ಗುರಿಯೊಂದಿಗೆ ಚೀನಿ ಹ್ಯಾಕರ್‌ಗಳು ಯತ್ನಿಸಿದ್ದಾರೆ. ಹೀಗಾಗಿ ಬಲಿಷ್ಠವಾದ ಫೈರ್‌ವಾಲ್‌ಗಳನ್ನು ಇಂಟರ್ನೆಟ್ ಬಳಕೆದಾರರು ಸೃಷ್ಟಿಸಿಕೊಳ್ಳಬೇಕು. ಸೈಬರ್ ಭದ್ರತಾ ಆಡಿಟ್ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.