ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ತನ್ನಲ್ಲಿದ್ದ ನಾಯಿ ಮರಿ ರೀತಿಯ ಆಟಿಕೆಯೊಂದು ಕಳೆದು ಹೋಗಿದೆ. ಆದರೆ ಈ ಆಟಿಕೆ ಯುವಕನಿಗೆ ಪ್ರಾಣಕ್ಕಿಂತಲು ಹೆಚ್ಚು. ಹೀಗಾಗಿ ಹುಡುಕಿಕೊಟ್ಟವರಿಗೆ ಬರೋಬ್ಬರಿ 46,000 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾನೆ. ಕೊನೆಗೆ ಏನಾಯ್ತು?
ಬಾರ್ಸಿಲೋನ(ಜೂ.28) ಬಾಲ್ಯದಲ್ಲಿ ಆಟಿಕೆಗಳು ಜೀವನದ ಭಾಗವಾಗಿರುತ್ತದೆ. ಅದರಲ್ಲೂ ಕೆಲ ಆಟಿಕೆಗಳು ಹೃದಯಕ್ಕೆ ಹತ್ತಿರವಾಗಿರುತ್ತದೆ. ಉಡುಗೊರೆಯಾಗಿ ಸಿಕ್ಕ ವಸ್ತುಗಳು ಹೀಗೆ, ಬೆಲೆ ಕಟ್ಟಲು ಸಾಧ್ಯವಿಲ್ಲದ ಮೌಲ್ಯ ಪಡೆದುಕೊಂಡಿರುತ್ತದೆ. ಹೀಗಾಗಿ ಈ ಆಟಿಕೆ, ವಸ್ತುಗಳ ಮೇಲೆ ಜೀವವೇ ಇರುತ್ತದೆ. ಏಕಾಏಕಿ ಈ ಬೆಲೆ ಕಟ್ಟಲಾಗದ ವಸ್ತು ಕಳೆದು ಹೋದರೆ? ಹೀಗೆ ಇಲ್ಲೊಬ್ಬ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ತನ್ನಲ್ಲಿದ್ದ ನಾಯಿ ಮರಿ ರೀತಿಯ ಆಟಿಕೆಯೊಂದು ಕಳೆದು ಹೋಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಈ ಆಟಿಕೆ ಇಲ್ಲದೆ ಆತ ಕಂಗಾಲಾಗಿದ್ದ. ಅನ್ನ ನೀರು ಬಿಟ್ಟಿದ್ದ. ಕೊನೆಗೆ ಆಟಿಕೆ ಹುಡುಕಿ ಕೊಟ್ಟವರಿಗೆ 46,637 ರೂಪಾಯಿ ಬಹುಮಾನ ಘೋಷಣೆ ಮಾಡಿದ. ಹುಡುಕಾಟ ತೀವ್ರಗೊಳಿಸಿದ. ಕೊನೆಗೂ ತನ್ನ ಆಟಿಕೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.ಸ್ಪೇನ್‌ನ ಬಾರ್ಸಿಲೋನಾದಲ್ಲಿ ಈ ಘಟನೆ ನಡೆದಿದೆ.
ಚೀನಾ ಮೂಲದ ಯುವಕ ನಾಯಿ ಮರಿ ರೀತಿಯ ಆಟಿಕೆ ಬಿಟ್ಟು ಒಂದು ನಿಮಿಷವೂ ಇರುವುದಿಲ್ಲ. ಈ ಆಟಿಕೆ ಎಂದರೆ ಪಂಚ ಪ್ರಾಣ. ಇದರ ನಡುವೆ ಈ ಯುವಕ ಸ್ಪೇನ್ ಪ್ರವಾಸ ಕೈಗೊಂಡಿದ್ದಾನೆ. ಸ್ಪೇನ್ ದೇಶದ ಸುಂದರ ತಾಣ ವೀಕ್ಷಿಸಲು ಹೊರಟಿದ್ದಾನೆ. ಸ್ಪೇನ್ ತಲುಪಿ ಒಂದೆಡೆ ಪ್ರದೇಶದ ಸೌಂದರ್ಯ ಸವಿದ ಯುವಕ, ಬಾರ್ಸಿಲೋನಗೆ ಪ್ರಯಾಣ ಮಾಡಿದ್ದಾನೆ.
undefined
ಅರೆರೆ, ಬಂದೋರಿಗೆಲ್ಲ 66000 ರೂ., ಇನ್ನೂ ಬೇಕಿದ್ರೆ ತಗೊಳ್ಳಿ ಎಂಬ ಉದಾರತೆ; ಇದು ಚೀನಾದ ಅಂಬಾನಿ ಮನೆಯ ವಿವಾಹ!
ಬಾರ್ಸಿಲೋನ ವೀಕ್ಷಿಸಲು ಯುವಕ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾನೆ. ಈತನ ಜೊತೆಗೆ ಈ ಆಟಿಕೆಯೂ ಪ್ರಯಾಣ ಮಾಡಿದೆ. ಮೆಟ್ರೋದ ಒಂದು ಸೀಟಿನಲ್ಲಿ ಈತ ಕುಳಿತರೆ ಮತ್ತೊಂದು ಸೀಟಿನಲ್ಲಿ ಆಟಿಕೆಯನ್ನು ಇಟ್ಟಿದ್ದಾನೆ. ಮೆಟ್ರೋದಲ್ಲಿ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡಿದ ಈತನ ಆಟಿಕೆಯನ್ನು ಯಾರೋ ಕದ್ದಿದ್ದಾರೆ. ಪರ್ಸ್ ರೀತಿ ಕಾಣುವ ಈ ಆಟಿಕೆಯನ್ನು ಯಾರೋ ಕದ್ದಿದ್ದಾರೆ.
ಮೆಟ್ರೋದಿಂದ ಇಳಿದಾಗ ತನ್ನ ಆಟಿಕೆ ನಾಪತ್ತೆಯಾಗಿದೆ ಅನ್ನೋದು ಗೊತ್ತಾಗಿದೆ. ಮರಳಿ ಮೆಟ್ರೋದಲ್ಲಿ ಪ್ರಯಾಣ ಮಾಡಿ ಹುಡುಕಾಡಿದ್ದಾನೆ. ಎಲ್ಲಿ ಕಳೆದು ಹೋಗಿದೆ ಅನ್ನೋದು ಈತನಿಗೆ ಸ್ಪಷ್ಟವಿಲ್ಲ. ಹೀಗಾಗಿ ಹುಡುಕಾಟ ಮತ್ತಷ್ಟು ಸಂಕಷ್ಟ ತಂದಿದೆ. ಕೊನೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಟಿಕೆ ಫೋಟೋ ಹಾಕಿದ್ದಾನೆ. ಕಳೆದುಹೋದ ಈ ಆಟಿಕೆ ಹುಡುಕಿ ಕೊಟ್ಟವರಿಗೆ 500 ಯೋರೋ( 46,637 ರೂಪಾಯಿ) ಬಹುಮಾನ ಘೋಷಿಸಿದ್ದಾನೆ.
ಈತನ ಪೋಸ್ಟ್ ವೈರಲ್ ಆಗಿತ್ತು. ಕೊನೆಗೆ ಸಾಗರ್ಡಾ ಫ್ಯಾಮಿಲಿಯಾ ರೈಲು ನಿಲ್ದಾಣದ ಸಿಬ್ಬಂದಿ ಈ ಆಟಿಕೆ ಸಿಕ್ಕಿದೆ. ಬಳಿಕ ಯುವಕನ ಸಂಪರ್ಕಿಸಿ ಆಟಿಕೆಯನ್ನು ಮರಳಿಸಿದ್ದಾರೆ. ಆಟಿಕೆ ಸಿಕ್ಕ ಖುಷಿಯಲ್ಲಿ ಈತ ಗಳಗಳನೇ ಅತ್ತಿದ್ದಾನೆ.
ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!