
ನವದೆಹಲಿ (ಜು.31): ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನ ದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ತನ್ನ ವಶದಲ್ಲಿರುವ ಟಿಬೆಟ್‌ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸ್ಪೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‌ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲದು.
ಲಡಾಖ್ ಗಡಿ ಸಮೀಪ ಚೀನಾದಿಂದ ಯುದ್ದ ವಾಯು ನೆಲೆ ನಿರ್ಮಾಣ!
ಹೀಗಾಗಿಯೇ ಪೂರ್ವ ಲಡಾಖ್‌ನಲ್ಲಿ ಚೀನಾ ಯೋಧರು ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಟಿಬೆಟ್ ಯುವಕರನ್ನು ಆಯ್ದು ಅವರಿಗೆ ವಿಶೇಷ ತರಬೇತಿ ನೀಡಿದ್ದ ಚೀನಾ, ಇದೀಗ ಇಂಥ ಯೋಧರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ