
ವಿಶ್ವಸಂಸ್ಥೆ (ಜು.31): ಭಾರತದಲ್ಲಿ ಮೊದಲು ಪತ್ತೆ ಆದ ರೂಪಾಂತರಿ ಡೆಲ್ಟಾವೈರಸ್ ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 4ನೇ ಅಲೆಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಪಾಕಿಸ್ತಾನದಿಂದ ಮೊರಾಕ್ಕೋ ವರೆಗೆ ವಿಸ್ತರಿಸಿರುವ ಮಧ್ಯಪ್ರಾಚ್ಯದ 22 ದೇಶಗಳ ಪೈಕಿ 15 ದೇಶಗಳಲ್ಲಿ ಡೆಲ್ಟಾವೈರಸ್ ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚಿನ ಹೊಸ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳು ಲಸಿಕೆ ಪಡೆಯದೇ ಇರುವವರಾಗಿದ್ದಾರೆ. ನಾವು ಈಗ ನಾಲ್ಕನೇ ಅಲೆಯ ಆರಂಭದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಧ್ಯಪ್ರಾಚ್ಯ ಪ್ರದೇಶಗಳ ನಿರ್ದೇಶಕ ಅಹಮದ್ ಅಲ್ ಮಂಧಾರಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ 3ನೇ ಅಲೆ ಎಚ್ಚರಿಕೆ : ವಕ್ಕರಿಸಲಿದೆ ಮಾರಿ
ಕಳೆದ ವಾರದ ವರೆಗೆ ಮಧ್ಯಪ್ರಾಚ್ಯ ದೇಶಗಳ ಕೇವಲ 4.1 ಕೋಟಿ ಮಂದಿ ಅಂದರೆ ಒಟ್ಟು ಜನಸಂಖ್ಯೆಯ ಶೇ.5.5ರಷ್ಟುಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ ಸೋಂಕು ಶೇ.55ರಷ್ಟುಏರಿಕೆ ಆಗಿದೆ. ಸಾವಿನ ಪ್ರಮಾಣ ಶೇ.15ರಷ್ಟುಏರಿಕೆ ಆಗಿದೆ. 3.10 ಲಕ್ಷಕ್ಕೂ ಅಧಿಕ ಕೇಸ್‌ಗಳು ಪತ್ತೆ ಆಗಿವೆ.
ವಾರಕ್ಕೆ 3500 ಸಾವುಗಳು ಸಂಭವಿಸುತ್ತಿವೆ. ಉತ್ತರ ಆಫ್ರಿಕಾದ ಟ್ಯುನೇಷಿಯಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸಿದ್ದು, ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆಮ್ಲಜನಕ ಸಿಲಿಂಡರ್ ಹಾಗೂ ಐಸಿಯು ಬೆಡ್‌ಗಳ ಕೊರತೆ ಉಂಟಾಗುತ್ತಿದೆ. ಡೆಲ್ಟಾವೈರಸ್ ವ್ಯಾಪಕವಾಗಿ ಹರಡುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ