ಚೀನಾದಲ್ಲಿ ಡ್ರೋನ್ ಚಾಲಿತ ಸುಡ್ಡುಮದ್ದು ಪ್ರದರ್ಶನದಲ್ಲಿ ಎಡವಟ್ಟು: ಪ್ರೇಕ್ಷಕರ ಮೇಲೆ ಬೆಂಕಿಮಳೆ

Published : Oct 07, 2025, 02:09 PM IST
China Drone Display Disaster: Fireworks Fall from Sky

ಸಾರಾಂಶ

China Drone Display Disaster:  ಚೀನಾದಲ್ಲೊಂದು ಕಡೆ ಡ್ರೋನ್‌ ಮೂಲಕ ಬಾನಂಗಳದಲ್ಲಿ ಸುಡುಮದ್ದುಗಳ ಚಿತ್ತಾರದ ಪ್ರದರ್ಶನ ಮಾಡುವುದಕ್ಕೆ ಹೋಗಿ ದೊಡ್ಡ ಅವಾಂತರ ನಡೆದಿದೆ. ಡ್ರೋನ್‌ಗಳಲ್ಲಿ ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ಪಟಾಕಿಗಳು ಸೀದಾ ಬಂದು, ಕೆಳಗೆ ನಿಂತಿದ್ದವರ ಮೇಲೆ ಬಿದ್ದಿದೆ.

ಚೀನಾದಲ್ಲಿ ಡ್ರೋನ್ ಚಾಲಿತ ಸುಡ್ಡುಮದ್ದು ಪ್ರದರ್ಶನದ ವೇಳೆ ಅವಘಡ

ಮೈಸೂರು ದಸರಾದಲ್ಲಿ ಆಗಸದ ಮೇಲೆ ಡ್ರೋನ್‌ಗಳನ್ನು ಬಳಸಿಕೊಂಡು ಕಲಾವಿದರು ಆಕರ್ಷಣೀಯ ಚಿತ್ತಾರಗಳನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದನ್ನು ನೀವು ನೋಡಿರಬಹುದು ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ತಾಯಿ ಚಾಮುಂಡೇಶ್ವರಿ, ದಸರಾ ವೈಭವ ಸೇರಿದಂತೆ ಹಲವು ಚಿತ್ತಾರಗಳನ್ನು ಡ್ರೋನ್ ತಂತ್ರಜ್ಞರು ರೂಪಿಸಿದ್ದರು. ಆದರೆ ಚೀನಾದಲ್ಲೊಂದು ಕಡೆ ಡ್ರೋನ್‌ ಮೂಲಕ ಬಾನಂಗಳದಲ್ಲಿ ಸುಡುಮದ್ದುಗಳ ಚಿತ್ತಾರದ ಪ್ರದರ್ಶನ ಮಾಡುವುದಕ್ಕೆ ಹೋಗಿ ದೊಡ್ಡ ಅವಾಂತರ ನಡೆದಿದೆ. ಡ್ರೋನ್‌ಗಳಲ್ಲಿ ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸುವ ಬದಲು ಸೀದಾ ಬಂದು, ಆಕಾಶದಲ್ಲಿ ಬೆಳಕಿನ ಚಿತ್ತಾರ ನೋಡುವುದಕ್ಕಾಗಿ ಕೆಳಗೆ ನಿಂತಿದ್ದವರ ಮೇಲೆ ಬೀಳುವುದಕ್ಕೆ ಶುರು ಮಾಡಿದೆ. ಇದರಿಂದ ಗಾಬರಿಯಾದ ಜನ ಪಟಾಕಿಯ ಮಳೆಯಿಂದ ತಪ್ಪಿಸಿಕೊಳ್ಳುವುದಕ್ಕೆ ತಾವು ಕುಳಿತಿದ್ದ ಚೇರುಗಳನ್ನೇ ಮೇಲೆತ್ತಿ ತಲೆ ಮೇಲೆ ಇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.

ಆಕಾಶದಲ್ಲಿ ಚಿತ್ತಾರ ಬಿಡಿಸುವ ಬದಲು ನೋಡುಗರ ಮೇಲೆಯೇ ಬಿದ್ದ ಬೆಂಕಿಯುಂಡೆ

ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿನ ಸ್ಕೈ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್: ದಿ ಸೌಂಡ್ ಆಫ್ ಬ್ಲೂಮಿಂಗ್ ಫ್ಲವರ್ಸ್ ಹೆಸರಿನ ಈ ಕಾರ್ಯಕ್ರಮದಲ್ಲಿ ಭೂಮಿ ಹಾಗೂ ನೀರಿನ ಮೇಲೆ ಪಟಾಕಿ ಹಾಗೂ ಡ್ರೋನ್‌ಗಳನ್ನು ಬಳಸಿ ತ್ರಿಡಿ ದೃಶ್ಯಕಾವ್ಯವವನ್ನು ಸೃಷ್ಟಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಯಿಂದಾಗಿ ಸೊಗಸಾದ ಬೆಳಕಿನ ಪ್ರದರ್ಶನವಾಗಬೇಕಿದ್ದ ಈ ಶೋ ಅಲ್ಲಿ ಡ್ರೋನ್‌ಗಳು ಹಾಗೂ ಪಟಾಕಿಗಳು ಬೆಂಕಿಯುಂಡೆಯಂತೆ ಬೀಳಲು ಶುರು ಮಾಡಿದ ನಂತರ ಭಯಾನಕ ವಾತಾವರಣ ಸೃಷ್ಟಿಯಾಗಿ ಜನರು ಭಯದಿಂದ ಓಡುವಂತೆ ಮಾಡಿತು.

ಭಯದಿಂದ ಓಡಿದ ಪ್ರೇಕ್ಷಕರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳಲ್ಲಿ ಆಕಾಶದಿಂದ ಬೆಂಕಿಯುಂಡೆಯಂತೆ ಪಟಾಕಿ ಅವಶೇಷಗಳು ಕೆಳಗೆ ಬೀಳುತ್ತಿದ್ದಂತೆ ಜನರು ಭಯಭೀತರಾಗಿ ಓಡುತ್ತಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಕೆಲವರು ಬೆಂಕಿ ಮೈಮೇಲೆ ಬೀಳದಂತೆ ತಡೆಯಲು ತಾವು ಕುಳತ ಕರ್ಚಿಯನ್ನೇ ಮೇಲೆತ್ತಿ ತಲೆಮೇಲೆ ಇರಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋಗಳು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಕಾಶದಿಂದ ನಕ್ಷತ್ರಗಳು ಕೆಳಕ್ಕೆ ಬೀಳುತ್ತಿವೆಯೇನೋ ಎಂದು ಭಾಸವಾಗುವಂತೆ ಈ ದೃಶ್ಯಗಳು ಕಾಣುತ್ತಿದ್ದವು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಕೆಲವು ದೃಶ್ಯಗಳು ಬೆಂಕಿಯ ಮಳೆಯೇ ಬೀಳುವಂತೆ ಕಾಣಿಸುತ್ತಿದ್ದವು. ಈ ಭಯಾನಕ ದೃಶ್ಯವನ್ನು ನೋಡಿ ಜನರು ಓಡುವುದನ್ನು ವೀಡಿಯೋಗಳಲ್ಲಿ ಕಾಣಬಹುದಾಗಿದೆ.

ಚೀನಾದಲ್ಲಿ, ನೂರಾರು ಡ್ರೋನ್‌ಗಳು ಬಿದ್ದು ಜನಸಮೂಹದ ಮೇಲೆಯೇ ಬಿದ್ದು ಸ್ಫೋಟಗೊಂಡವು. ಅವುಗಳನ್ನು ಲಿಯುಯಾಂಗ್ ನಗರದಲ್ಲಿ ಬೆಳಕಿನ ಪ್ರದರ್ಶನದ ಭಾಗವಾಗಿ ಉಡಾಯಿಸಲಾಯಿತು, ಆದರೆ ಏನೋ ತಾಂತ್ರಿಕ ದೋಷ ಉಂಟಾಗಿ ಅಲ್ಲಿ ಬೆಂಕಿ ಕಾಣಿಸಿಕೊಂಡು ಜನರ ಮೇಲೆಯೇ ಬಿದ್ದವು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಭಯಭೀತನಾದ ಪ್ರೇಕ್ಷಕನೊಬ್ಬ ತಲೆಯ ಮೇಲೆ ಕುರ್ಚಿ ಹಿಡಿದುಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವ ದೃಶ್ಯವನ್ನು ನೋಡುಗರು ಶ್ಲಾಘಿಸಿದ್ದು, ಉತ್ತಮ ಬಿಕ್ಕಟ್ಟು ನಿರ್ವಹಣಾ ಪ್ರವೃತ್ತಿ ಎಂದು ಕಾಮೆಂಟ್ ಮಾಡಿದ್ದಾರೆ.

ಘಟನೆಯಲ್ಲಿ ಚೀನಾ ಸರ್ಕಾರದ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ. ಆದರೆ ನಿಜವಾಗಿಯೂ ಕೆಲವು ಗಾಯಗಳಿದ್ದರೂ ಸಹ ಅವರು ಗಾಯಗಳನ್ನು ಬಹಿರಂಗಪಡಿಸದಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾ ಪಟಾಕಿಗಳ ಹೊಸತನಕ್ಕೆಹೆಸರುವಾಸಿಯಾಗಿದೆ, ಆದರೆ ಇದು ಅತ್ಯಾಧುನಿಕ ತಂತ್ರಜ್ಞಾನವು ಸಹ ಅದರ ಅಪಾಯಗಳನ್ನು ಹೊಂದಿದೆ ಎಂಬುದನ್ನು ನೆನಪಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ಗರ್ಲ್‌ಫ್ರೆಂಡ್ ಆಗು: ಬೀದಿಯಲ್ಲಿ ಹೋಗ್ತಿದ್ದ ಮಹಿಳೆಯ ಎಳೆದಾಡಿದ ಯುವಕ

ಇದನ್ನೂ ಓದಿ: ರೇಬಿಸ್ ಬಗ್ಗೆ ಬೀದಿ ನಾಟಕ ಮಾಡ್ತಿದ್ದ ಕಲಾವಿದನಿಗೆ ಕಚ್ಚಿದ ಬೀದಿನಾಯಿ

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌