
ಸಿಂದ್ (ಅ.07) ಜಾಫರ್ ಎಕ್ಸ್‌ಪ್ರೆಸ್ ರೈಲು ಟಾರ್ಗೆಟ್ ಮಾಡಿ ದಾಳಿಯಾಗಿದೆ. ಬಾಂಬ್ ದಾಳಿ ನಡೆಸಿರುವುದಾಗಿ ವರದಿಯಾಗಿದ್ದು, ಹಲವು ಪ್ರಯಾಣಕರು ಗಾಯಗೊಂಡಿದ್ದಾರೆ. ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ ಘಟನೆ ಸಿಂಧ್-ಬಲೂಚಿಸ್ತಾನ ಗಡಿಯ ಸುಲ್ತಾನ್‌ಕೋಟ್ ವಲಯದಲ್ಲಿ ನಡೆದಿದೆ. 2025ರಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆಯುತ್ತಿರುವ 7ನೇ ದಾಳಿ ಇದಾಗಿದೆ. ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಬಿಗಿ ಸೇನಾ ಭದ್ರತೆ ನಿಯೋಜನೆ ಮಾಡಲಾಗಿದೆ.
ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬಾಂಬ್ ದಾಳಿಯನ್ನು ಯಾವುದೇ ಸಂಘಟನೆಗಳು ಹೊತ್ತಿಕೊಂಡಿಲ್ಲ. ಆದರೆ ಈ ದಾಳಿ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಬಲೂಚ್ ಲಿಬರೇಶನ್ ಆರ್ಮಿ ಹಲವು ದಶಕಗಳಿಂದ ಪಾಕಿಸ್ತಾನ ವಿರುದ್ದ ನಿರಂತರ ಯುದ್ದ ಸಾರುತ್ತಲೇ ಬಂದಿದೆ. ಇತ್ತೀಚೆಗೆ ಬಲೂಚ್ ಲಿಬರೇಶನ್ ಆರ್ಮಿ ಫ್ರಂಟ್ ಜಾಫರ್ ಎಕ್ಸ್‌ಪ್ರೆಸ್ ರೈಲನ್ನೇ ಪದೇ ಪದೇ ಟಾರ್ಗೆಟ್ ಮಾಡಿತ್ತು.
ಬಲೂಚಿಸ್ತಾನದ ರಾಜಧಾನಿ ಖ್ವೆಟ್ಟಾದಿಂದ ಸಿಂಧ್ ಪ್ರಾಂತ್ಯದ ಪೇಶಾವರಕ್ಕೆ ಪ್ರಯಾಣಿಸುವ ಈ ರೈಲು ಬಲೂಚಿ ಆರ್ಮಿಗಳ ಪ್ರಮುಖ ಟಾರ್ಗೆಟ್. ಇದಕ್ಕೆ ಮುಖ್ಯ ಕಾರಣ ಈ ರೈಲು ಪಾಕಿಸ್ತಾನ ಹಾಗೂ ಬಲೂಚಿಸ್ತಾನ ಸಂಪರ್ಕಿಸುವ ರೈಲು. ಹೀಗಾಗಿ ಇದೇ ರೈಲನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದೇ ವರ್ಷ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ ಮಾಡಿ ಘಟನೆಯೂ ನಡೆದಿತ್ತು. ಬಳಿಕ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿತ್ತು. ಆಗಸ್ಟ್ ತಿಂಗಳಲ್ಲಿ ಇದೇ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬಾಂಬ್ ದಾಳಿಯಾಗಿತ್ತು. ಬಲೂಚಿಸ್ತಾನ ಮಸ್ತುಂಗ್ ಜಿಲ್ಲೆಯಲ್ಲಿ ರೈಲಿನ ಮೇಲೆ ಐಐಡಿ ಬ್ಲಾಸ್ಟ್ ಮಾಡಿ ದಾಳಿ ಮಾಡಲಾಗಿತ್ತು. ಈ ವೇಳೆ 6 ಬೋಗಿಗಳು ಹಳಿ ತಪ್ಪಿತ್ತು. ಹಲವು ಪ್ರಯಾಣಕರು ಗಾಯಗೊಂಡಿದ್ದರು. ಪರಿಣಾಮ ಕೆಲ ದಿನಗಳಲ ಕಾಲ ಜಾಫರ್ ಎಕ್ಸ್‌ಪ್್ರೆಸ್ ರೈಲು ಸೇವೆ ಸ್ಥಗಿತಗೊಂಡಿತ್ತು.
ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬಾಂಬ್ ಸ್ಫೋಟದ ಘಟನೆ ವೇಳೆ 270 ಮಂದಿ ಪ್ರಯಾಣಿಕರಿದ್ದರು. ಈ ಕುರಿತು ಪಾಕಿಸ್ತಾನ ರೈಲ್ವೇ ವಿಭಾಗ ಮಾಹಿತಿ ನೀಡಿದೆ. ಈ ಮಾರ್ಗದ ಮೂಲಕ ಸಂಚರಿಸುವ ರೈಲು ಸಂಚಾರ ಸ್ಥಗಿತಕೊಂಡಿದೆ. ಇತ್ತ ಜಾಫರ್ ಎಕ್ಸ್‌ಪ್ರೆಸ್ ರೈಲು ಕೆಲ ದಿನಗಳ ಕಾಲ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಸಿಂದ್ -ಬಲೂಚಿಸ್ತಾನ ಗಡಿಯ ಸುಲ್ತಾನ್‌ಕೋಟ್ ಬಳಿ ಜಾಫರ್ ಎಕ್ಸ್‌ಪ್ರೆಸ್ ರೈಲು ಮೇಲೆ ಬಾಂಬ್ ದಾಳಿಯಾಗಿದೆ. 10 ಗಂಟೆಯಲ್ಲಿ ನಡೆದ 2ನೇ ಬಾಂಬ್ ಸ್ಫೋಟ ಇದಾಗಿದೆ. ಸಿಂದ್-ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಬಲೂಚಿಸ್ತಾನಕ್ಕೆ ಲಿಂಕ್ ಮಾಡುಲ ರೈಲು ಹಳಿ ಬಳಿ ಸ್ಪೋಟ ನಡೆದಿತ್ತು. ಈ ವೇಳೆ ಯಾವುದೇ ರೈಲಿಗೆ ಹಾನಿಯಾಗಿರಲಿಲ್ಲ. ಆದರೆ ಹಳಿಗಳು ಹಾನಿಯಾಗಿತ್ತು. ಹೀಗಾಗಿ ಹಲವು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.
400 ಪ್ರಯಾಣಿಕರಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚ್ ಲಿಬರೇಶನ್ ಆರ್ಮಿ ಹೈಜಾಕ್ ಮಾಡಿತ್ತು.400 ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಂಡಿತ್ತು.
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ವಿರುದ್ದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪಾಕಿಸ್ತಾನ ಸರ್ಕಾರ, ಪಾಕಿಸ್ತಾನ ಸೇನೆ ವಿರುದ್ಧ ಬಲೂಚಿಗಳು ಪ್ರತಿಭಟನೆ ನಡೆಯುತ್ತಿದೆ. ಈಗಾಗಲೇ ಈ ಪ್ರತಿಭಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪಾಕ್ ಸೇನೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ