ಚೀನಾ ತಯಾರಿಸಿರುವ ಎರಡು ಲಸಿಕೆಗಳು ಸದ್ಯ ಜಗತ್ತಿನಲ್ಲಿ ಮೂರನೇ ಹಂತದ ಟ್ರಯಲ್‌ನಲ್ಲಿರುವ ಟಾಪ್ 10 ಲಸಿಕೆಗಳಲ್ಲಿ ಸೇರಿವೆ. ಇದಲ್ಲದೆ, ಚೀನಾದ ಮಿಲಿಟರಿ ವಿಜ್ಞಾನಿಗಳು ಕೊರೋನಾ ವೈರಸ್‌ನ ಬೇರೆ ಬೇರೆ ರೂಪಾಂತರಗಳಿಗೂ ಲಸಿಕೆ ತಯಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೀಜಿಂಗ್ (mz.8): ಇಡೀ ಜಗತ್ತು ಕೊರೋನಾ ಲಸಿಕೆಯ ಹಿಂದೆ ಓಡುತ್ತಿರುವಾಗ ಕೊರೋನಾದ ಉಗಮ ಸ್ಥಾನವಾದ ಚೀನಾ ಸದ್ದಿಲ್ಲದೆ ಎರಡು ಲಸಿಕೆಗಳನ್ನು ತಯಾರಿಸಿದೆ. ಈ ಲಸಿಕೆಗಳನ್ನು ಇದೇ ಮೊದಲ ಬಾರಿ ಬೀಜಿಂಗ್‌ನ ವಾಣಿಜ್ಯ ಮೇಳದಲ್ಲಿ ಪ್ರದರ್ಶನ ಕೂಡ ಮಾಡಿದೆ.
ಚೀನಾದ ಸಿನೋವ್ಯಾಕ್ ಬಯೋಟೆಕ್ ಮತ್ತು ಸಿನೋಫಾರ್ಮ ಎಂಬ ಕಂಪನಿಗಳು ಈ ಲಸಿಕೆಗಳನ್ನು ತಯಾರಿಸಿವೆ. ಇವು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಸದ್ಯ 3ನೇ ಹಂತದ ಟ್ರಯಲ್‌ನಲ್ಲಿದ್ದು, ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬರಲಿವೆ ಎಂದು ಹೇಳಲಾಗಿದೆ. ಸಿನೋವ್ಯಾಕ್ ಕಂಪನಿ ಈಗಾಗಲೇ ತಾನು ವರ್ಷಕ್ಕೆ 30 ಕೋಟಿ ಲಸಿಕೆ ತಯಾರಿಕಾ ಸಾಮರ್ಥ್ಯದ ಕಾರ್ಖಾನೆ ನಿರ್ಮಿಸಿರುವುದಾಗಿ ಹೇಳಿಕೊಂಡಿದೆ. ಸಿನೋಫಾರ್ಮ ಕಂಪನಿ ತನ್ನ ಲಸಿಕೆಯ ಎರಡು ಡೋಸ್ ತೆಗೆದುಕೊಂಡರೆ ಒಂದರಿಂದ ಮೂರು ವರ್ಷದವರೆಗೆ ಕೊರೋನಾದ ಭೀತಿ ಇರುವುದಿಲ್ಲ. ಇದರ ಎರಡು ಡೋಸ್‌ನ ಬೆಲೆ ಸುಮಾರು 10,000 ರು. ಇರಬಹುದು ಎಂದು ತಿಳಿಸಿದೆ.
undefined
ವೈರಸ್ ಹಾವಳಿ: ಬೆಂಗಳೂರು ಶೇ.60 ಚೇತರಿಕೆ
ಸೋಮವಾರ ಬೀಜಿಂಗ್‌ನ ವ್ಯಾಪಾರಿ ಮೇಳದಲ್ಲಿ ಈ ಲಸಿಕೆಗಳನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದರು. ಕೊರೋನಾ ಹರಡಿದ ಕಾರಣದಿಂದ ಜಗತ್ತಿನಾದ್ಯಂತ ಕುಖ್ಯಾತಿ ಗಳಿಸಿರುವ ಚೀನಾ ಇದೀಗ ತಾನೇ ಉತ್ತಮ ಲಸಿಕೆಯನ್ನೂ ನೀಡುವ ಮೂಲಕ ಜಗತ್ತಿನ ವಿಶ್ವಾಸ ಗಳಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳ ಹಿಂದೆ ಸ್ವತಃ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಜಗತ್ತಿನ ಒಳಿತಿಗಾಗಿ ಚೀನಾ ಕೊರೋನಾ ಲಸಿಕೆ ತಯಾರಿಸಲಿದೆ ಎಂದು ಹೇಳಿದ್ದರು.
ಚೀನಾ ತಯಾರಿಸಿರುವ ಎರಡು ಲಸಿಕೆಗಳು ಸದ್ಯ ಜಗತ್ತಿನಲ್ಲಿ ಮೂರನೇ ಹಂತದ ಟ್ರಯಲ್‌ನಲ್ಲಿರುವ ಟಾಪ್ 10 ಲಸಿಕೆಗಳಲ್ಲಿ ಸೇರಿವೆ. ಇದಲ್ಲದೆ, ಚೀನಾದ ಮಿಲಿಟರಿ ವಿಜ್ಞಾನಿಗಳು ಕೊರೋನಾ ವೈರಸ್‌ನ ಬೇರೆ ಬೇರೆ ರೂಪಾಂತರಗಳಿಗೂ ಲಸಿಕೆ ತಯಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೆ ಮರುಕಳಿಸಲಿದೆ ಕೊರೋನಾ ಸೋಂಕು
ಕೊರೋನಾ ಲಸಿಕೆ ಭಾರತದಲ್ಲಿ ಪರೀಕ್ಷೆ
ಕೊರೋನಾ ವೈರಸ್ ನಿಗ್ರಹಕ್ಕೆ ಸಿದ್ಧಪಡಿಸಿರುವ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್-5’ ಲಸಿಕೆಯ ಸಮಗ್ರ ಮಾಹಿತಿಯನ್ನು ಭಾರತದೊಂದಿಗೆ ರಷ್ಯಾ ಹಂಚಿಕೊಂಡಿದೆ. ಇದರೊಂದಿಗೆ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ.
3ನೇ ಹಂತದ ಪ್ರಯೋಗದ ಕುರಿತು ಭಾರತ ಸರ್ಕಾರ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲವಾದರೂ, ಇದೇ ತಿಂಗಳಾಂತ್ಯಕ್ಕೆ ಭಾರತ, ಸೌದಿ ಅರೇಬಿಯಾ, ಯುಎಇ, ಫಿಲಿಪ್ಪೀನ್ಸ್ ಮತ್ತು ಬ್ರೆಜಿಲ್‌ನಲ್ಲಿ ಪ್ರಯೋಗ ಆರಂಭವಾಗಲಿದೆ. ಅಕ್ಟೋಬರ್- ನವೆಂಬರ್‌ನಲ್ಲಿ ಈ ಪ್ರಯೋಗದ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಮುಖ್ಯಸ್ಥ ಕಿರ್ರಿಲ್ ಡಿಮೆಟ್ರೀವ್ ಸೋಮವಾರ ಹೇಳಿಕೆ ನೀಡಿದ್ದಾರೆ.