
ನ್ಯೂಯಾರ್ಕ್(ಸೆ.09) ಭಯೋತ್ಪಾದಕರಿಂದ ದೇಶದ ರಕ್ಷಣೆಗಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಮತ್ತೆ ಅಧ್ಯಕ್ಷರಾಗಿ ಪುನಾರಾಯ್ಕೆ ಆಗಬೇಕು ಎಂದು ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್ ಲಾಡೆನ್ ಸೋದರ ಸೊಸೆ ನೂರ್ ಬಿನ್ ಲಾಡೆನ್ ಪ್ರತಿಪಾದಿಸಿದ್ದಾರೆ.
ಇಮ್ರಾನ್ ಸಂಪುಟದ 7 ಸಚಿವರು ಉಭಯ ಪೌರತ್ವ ಹೊಂದಿರುವವರು!
ಜೊತೆಗೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರಿಗೇ ಮತ ಚಲಾಯಿಸುವಂತೆ ಮತದಾರರಿಗೆ ನೂರ್ ಬಿನ್ ಲಾಡೆನ್ ಕೋರಿದ್ದಾರೆ. ಒಂದು ವೇಳೆ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, 2001ರ 9/11ರ ಕರಾಳ ದಿನದಂಥ ಘಟನೆ ಮರುಕಳಿಸಲಿದೆ ಎಂದು ಎಚ್ಚರಿಸಿದ್ದಾರೆ.
ಈ ಹಿಂದೆ ಒಬಾಮಾ/ಬೈಡನ್ ಆಡಳಿತಾವಧಿಯಲ್ಲಿ ಐಸಿಸ್ ಜಾಲ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿತ್ತು. ಆದರೆ, ಟ್ರಂಪ್ ಭಯೋತ್ಪಾದಕರನ್ನು ಹುಟ್ಟಡಗಿಸಲು ಸಮರ್ಥರಿದ್ದಾರೆ. ದೇಶ ಮತ್ತ ವಿಶ್ವದ ರಕ್ಷಣೆಗಾಗಿ ಟ್ರಂಪ್ ಪುನಾರಾಯ್ಕೆಯಾಗಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ