
ಬೀಜಿಂಗ್(ಏ.20) ಬಂಗಾರ ಬೆಲೆ ಪ್ರತಿ ದಿನ ದಾಖಲೆ ಬರೆಯುತ್ತಿದೆ. ಒಂದು ಗ್ರಾಂ ಚಿನ್ನ ಖರೀದಿ ಇದೀಗ ಹಿಂದೂ ಮುಂದೂ ಯೋಚಿಸುವಂತೆ ಮಾಡಿದೆ. ಜನಸಾಮಾನ್ಯರಿಗೆ ಚಿನ್ನ ಕೈಕೆಟುಕದ ದ್ರಾಕ್ಷಿಯಾಗಿದೆ. ದರದಲ್ಲಿ ಯಾರ ಕೈಗೆ ಸಿಗದ ಚಿನ್ನವನ್ನು ಇದೀಗ 11 ವರ್ಷದ ಬಾಲಕನೊಬ್ಬ ನುಂಗಿದ್ದಾನೆ. ಈತ ನಂಗಿದ್ದು 100 ಗ್ರಾಂ ಚಿನ್ನ. ಆತಂಕಗೊಂಡ ಪೋಷಕರು ಆಸ್ಪತ್ರೆ ದಾಖಲಿಸಿದ್ದಾರೆ. ಆರಂಭದಲ್ಲಿ ಕೆಲ ಔಷಧಿಗಳನ್ನು ನೀಡಿ ಆಪರೇಶನ್ ಮಾಡದೇ ಚಿನ್ನ ಹೊರತೆಯುವ ಪ್ರಯತ್ನವನ್ನು ವೈದ್ಯರು ಮಾಡಿದ್ದಾರೆ. ಈ ವೇಳೆ ಕೆಲವೇ ಕ್ಷಣದಲ್ಲಿ ವ್ಯಾಲ್ಯೂ ಹೆಚ್ಚಿಸಿಕೊಂಡ ಬಾಲಕನಿಗೆ ಈತ ದುಬಾರಿ ಹುಡುಗ ಎಂದು ಕರೆದಿದ್ದಾರೆ. ಬಳಿಕ ಸರ್ಜರಿ ಮೂಲಕ ಚಿನ್ನ ಹೊರತೆದಿದ್ದಾರೆ.
ಭಯದಿಂದ ಅಸ್ವಸ್ಥಗೊಂಡ ಬಾಲಕ
ಈ ಘಟನೆ ನಡೆದಿರುವುದು ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ. ಖಿಯಾನ್ ಅನ್ನೋ 11 ವರ್ಷದ ಬಾಲಕ ಮನೆಯೊಳಗೆ ಆಟವಾಡುತ್ತಿದ್ದ. ಈ ವೇಳೆ ಕಬೋರ್ಡ್‌ನಲ್ಲಿದ್ದ ಚಿನ್ನದ ಬಿಸ್ಕೆಟ್ ನೋಡಿದ್ದಾನೆ. ಕೆಲ ಹೊತ್ತು ಆಟವಾಡಿದ ಈತ ಬಳಿಕ ಈ ಬಿಸ್ಕೆಟ್ ಬಾಯಲ್ಲಿ ಇಟ್ಟು ತಿನ್ನೋ ರೀತಿ ಆಟವಾಡಿದ್ದಾನೆ. ಅಚನಕ್ಕಾಗಿ ಈ ಬಿಸ್ಕೆಟ್ ಬಾಯಿಯಿಂದ ಇಳಿದು ಹೋಗಿದೆ. ಬಾಲಕ ಆತಂಕಗೊಂಡಿದ್ದಾನೆ. ತಕ್ಷಣವೇ ಪೋಷಕರನ್ನು ಕೂಗಿದ್ದಾನೆ. ಭಯದಿಂದ ಅಸ್ವಸ್ಥಗೊಂಡಿದ್ದಾನೆ.
ಅತಿಹೆಚ್ಚು ಬಂಗಾರ ಬಳಸುವ ಟಾಪ್ 10 ದೇಶಗಳು: ಭಾರತಕ್ಕೆ ಎಷ್ಟನೇ ಸ್ಥಾನ?
ಮಕ್ಕಳ ಆಸ್ಪತ್ರೆಗೆ ದಾಖಲು
ಇತ್ತ ಪೋಷಕರು ಆತಂಕಗೊಂಡಿದ್ದಾರೆ. ಕಾರಣ 100 ಗ್ರಾಂ ಚಿನ್ನವಾಗಿರುವ ಕಾರಣ ಬಾಲಕನ ಆರೋಗ್ಯಕ್ಕೆ ಸಮಸ್ಯೆಯಾಗಲಿದೆ ಎಂದು ತಕ್ಷಣವೇ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ತಂಡ ತಪಾಸಣೆ ನಡೆಸಿದೆ. ಬಳಿಕ ಎಕ್ಸ್ ರೇ, ಸ್ಕ್ಯಾನಿಂಗ್ ಸೇರಿದಂತೆ ಇತರ ಪರೀಕ್ಷೆಗಳನ್ನು ಮಾಡಿದ್ದಾರೆ. ಆಸ್ಪತ್ರೆ ದಾಖಲಿಸಿದ ದಿನ್ನ ಸರ್ಜರಿ ಮಾಡದೆ ಚಿನ್ನ ಹೊರತೆಗಯಲು ವೈದ್ಯರು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಕೆಲ ಔಷಧಿಗಳನ್ನು ನೀಡಿದ್ದಾರೆ. ಆದರೆ ಚಿನ್ನದ ಗಾತ್ರ ದೊಡ್ಡದಾಗಿರುವ ಕಾರಣ ಚಿನ್ನ ಹೊರಬರಲಿಲ್ಲ.
ದುಬಾರಿ ಬಾಲಕ ಎಂದ ವೈದ್ಯರು
ವೈದ್ಯರು ತಪಾಸಣೆ ಮಾಡಿ ಬಾಲಕನಿಗೆ ಹಾಗೂ ಪೋಷಕರಿಗೆ ಧೈರ್ಯ ತುಂಬಿದ್ದಾರೆ. 11 ವರ್ಷದ ಬಾಲಕನಲ್ಲಿ ವೈದ್ಯರು ಕೆಲ ಪ್ರಶ್ನೆ ಕೇಳಿದ್ದಾರೆ. ಚಿನ್ನ ನುಂಗಿ ಒಂದೇ ಬಾರಿ ಮೌಲ್ಯ ಹೆಚ್ಚಿಸಿಕೊಳ್ಳುವ ಆಲೋಚನೆ ಇತ್ತಾ ಎಂದಿದ್ದಾರೆ. ಇಷ್ಟೇ ಅಲ್ಲ ಈಗ ಬಾಲಕ ಬಲು ದುಬಾರಿ ಎಂದು ತಮಾಷೆ ಮಾಡಿದ್ದಾರೆ.
ಸರ್ಜರಿ ಮೂಲಕ ಚಿನ್ನ ಹೊರಕ್ಕೆ
ಮೊದಲ ದಿನ ಪ್ರಯತ್ನಿಸಿದ ವೈದ್ಯರಿಗೆ ಸರ್ಜರಿ ಇಲ್ಲದೆ ಚಿನ್ನ ತೆಗೆಯಲು ಸಾಧ್ಯವಿಲ್ಲ ಅನ್ನೋದು ಮನದಟ್ಟಾಗಿದೆ. ತಡ ಮಾಡಿದರೆ ಬಾಲಕನ ಆರೋಗ್ಯ ಮತ್ತಷ್ಟು ಕ್ಷೀಣಸುವ ಸಾಧ್ಯತೆ ಅರಿತು, ತಕ್ಷಣವೇ ಸರ್ಜರಿ ಮಾಡಿದ್ದಾರೆ. ಈ ಮೂಲಕ ಚಿನ್ನ ಹೊರತೆಗೆದಿದ್ದಾರೆ. 4 ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಬಾಲಕ ಇದೀಗ ಬಡುಗಡೆಯಾಗಿದ್ದಾನೆ.
1000 ಕೆ.ಜಿ. ದೇಗುಲ ಚಿನ್ನ ಕರಗಿಸಿದ ತಮಿಳುನಾಡು ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ