ಮಗನ ಗಾಯಕ್ಕೆ ಕೀಟದ ಔಷಧಿ ಹಚ್ಚಿದ ಚಿಂಪಾಂಜಿ ... ವಿಡಿಯೋ ವೈರಲ್‌

Suvarna News   | Asianet News
Published : Feb 09, 2022, 01:12 PM ISTUpdated : Feb 09, 2022, 01:13 PM IST
ಮಗನ ಗಾಯಕ್ಕೆ ಕೀಟದ ಔಷಧಿ ಹಚ್ಚಿದ ಚಿಂಪಾಂಜಿ ... ವಿಡಿಯೋ ವೈರಲ್‌

ಸಾರಾಂಶ

ಮಗನ ಗಾಯಕ್ಕೆ ಕೀಟದ ಲೇಪನ ಹಚ್ಚಿದ ಚಿಂಪಾಜಿ ಚಿಂಪಾಂಜಿಯ ಬುದ್ಧಿವಂತಿಕೆ ವಿಡಿಯೋ ವೈರಲ್‌ ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಸೆರೆ ಹಿಡಿದ ದೃಶ್ಯ  

ತಾಯಿ ಚಿಂಪಾಜಿಯೊಂದು ತನ್ನ ಮಗ ಚಿಂಪಾಜಿಗೆ ಆಗಿದ್ದ ಗಾಯದ ಮೇಲೆ ಕೀಟದ ಲೇಪನವನ್ನು ಹಚ್ಚಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಪತ್ತೆ ಮಾಡಿದ್ದಾರೆ.

ಬುದ್ಧಿವಂತರೆನಿಸಿರುವ ಮನುಷ್ಯರಾದ ನಾವು ಗಾಯಗೊಂಡರೆ, ಮೊದಲು ಮಾಡುವ ಕೆಲಸ ಬ್ಯಾಂಡೇಜ್, ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ನಂಜುನಿರೋಧಕ ದ್ರವವನ್ನು ಗಾಯದ ಮೇಲೆ ಸಿಂಪಡಿಸಿ  ಸ್ವಚ್ಛಗೊಳಿಸಿ ಬ್ಯಾಂಡೇಜ್‌ ಕಟ್ಟುವುದು ಸಾಮಾನ್ಯ. ಆದರೆ ಚಿಂಪಾಜಿಗಳು ಕೂಡ ಅದನ್ನೇ ಮಾಡುತ್ತಿವೆ. ಆದರೆ ಅವರು ನಂಜು ನಿವಾರಕ ಔಷಧದ ಬದಲು ಕೀಟವನ್ನು ಲೇಪನವಾಗಿ ಬಳಸಿವೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಚಿಂಪಾಂಜಿಯೊಂದು ತನ್ನ ಮಗನ ಕಾಲಿನಲ್ಲಾದ ಗಾಯಕ್ಕೆ ಮೊದಲ ಬಾರಿಗೆ ಅಪರಿಚಿತ ಕೀಟವೊಂದನ್ನು ಅರೆದು ಹಚ್ಚುವ ವಿಡಿಯೋ ಇದಾಗಿದೆ.  ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಸೆರೆ ಹಿಡಿದಿದ್ದಾರೆ.

4 ವರ್ಷದಿಂದ ಚಿಂಪಾಂಜಿ ಜೊತೆ ಅಫೇರ್, ಮಹಿಳೆ ಮೃಗಾಲಯ ಪ್ರವೇಶಕ್ಕೆ ನಿಷೇಧ!

ಸುಜೀ (Suzee) ಹೆಸರಿನ ವಯಸ್ಕ ಚಿಂಪಾಂಜಿ, ತನ್ನ ಮಗ ಸಿಯಾ(Sia)ನ ಕಾಲಿಗೆ ಆದ ಗಾಯವನ್ನು ಪರೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಚಿಂಪಾಂಜಿ ತಾಯಿಯು ಕೀಟವನ್ನು ಹಿಡಿದು ತನ್ನ ಮಗುವಿನ ಗಾಯಕ್ಕೆ ಹಚ್ಚುವ ಮೊದಲು ಅದನ್ನು ತನ್ನ ಬಾಯಿಗೆ ಹಾಕುತ್ತಾಳೆ. ಸಂಶೋಧಕರಿಗೆ ಅದು ಯಾವ ಕೀಟ ಎಂದು ಖಚಿತವಾಗಿಲ್ಲವಾದರೂ, ಗಾಯದ ಶುದ್ಧೀಕರಣ ಅಥವಾ ನೋವು ನಿವಾರಣೆಗೆ ಇದು ಸಹಾಯ ಮಾಡುತ್ತದೆ ಎಂದು ಅವರು ಊಹಿಸುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

 

ವೀಡಿಯೊದಲ್ಲಿ, ಸುಜೀ ಮೊದಲು ತನ್ನ ಮಗ ಸಿಯಾನ ಪಾದವನ್ನು ನೋಡುತ್ತಿರುವುದನ್ನು ನೋಡಬಹುದು, ಮತ್ತು ನಂತರ ಆಕೆ ನಾನು ಏನು ಮಾಡಬಹುದು ಎಂಬಂತೆ ಆಕೆ ಯೋಚಿಸುತ್ತಿರುವುದು ವಿಡಿಯೋದಲ್ಲಿ ತೋರುತ್ತಿದೆ. ನಂತರ ತಲೆಯೆತ್ತಿ ನೋಡುವ ತಾಯಿ ಚಿಂಪಾಜಿ, ಕೀಟವನ್ನು ನೋಡುತ್ತಾಳೆ ಮತ್ತು ಅದನ್ನು ಹಿಡಿದು ತನ್ನ ಮಗನ ಕಾಲಿಗೆ ಹಚ್ಚುತ್ತಾಳೆ. ಇದೊಂತರ ವಿಶೇಷ ಸಂಗತಿಯಾಗಿದೆ. ಏಕೆಂದರೆ  ಅನೇಕ ಜನರು ಇತರ ಪ್ರಾಣಿಗಳಲ್ಲಿನ ಸಾಮಾಜಿಕ ಸಾಮರ್ಥ್ಯಗಳನ್ನು ಅನುಮಾನಿಸುತ್ತಾರೆ. ಆದರೆ ಇಲ್ಲಿ ನಾವು ಒಂದು ಪ್ರಾಣಿ ಮತ್ತೊಂದು ಪ್ರಾಣಿ ಬಗ್ಗೆ ಕಾಳಜಿ ತೋರುವುದನ್ನು ನಿಜವಾಗಿಯೂ ನೋಡುಬಹುದಾಗಿದೆ ಎಂದು ಸಂಶೋಧಕಿ ಹೇಳಿದ್ದಾರೆ. 

ಮನುಷ್ಯರಂತೆ ಬಟ್ಟೆ ಒಗೆಯುವ ಚಿಂಪಾಜಿಯನ್ನು ನೋಡಿದ್ದೀರಾ.? ಇಲ್ಲಾಂದ್ರೆ ನೋಡಿ!

ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿ ( Evolutionary Anthropology)  ಮತ್ತು ಓಝೌಗಾ ಚಿಂಪಾಂಜಿ ಪ್ರಾಜೆಕ್ಟ್ (Ozouga Chimpanzee Project)ಎರಡರ ವಿಕಸನೀಯ ಜೀವಶಾಸ್ತ್ರಜ್ಞ ಅಲೆಸ್ಸಾಂಡ್ರಾ ಮಸ್ಕರೊ (Alessandra Mascaro) ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ ಪ್ರಾಣಿಗಳು ಮತ್ತೊಂದು ಪ್ರಾಣಿಯ ಬಗ್ಗೆ  ಕಾಳಜಿ ತೋರುವುದು, ಗಾಯಕ್ಕೆ ಔಷಧ ಹಚ್ಚುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್ ನೋಟು ಮುದ್ರಣ ಘಟಕವು ಶ್ರೀ ಚಾಮರಾಜೇಂದ್ರ ಮೃಗಾಲಯದ ಎರಡು ಭಾರತೀಯ ಆನೆ, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು 2020ರಲ್ಲಿ ದತ್ತು ಸ್ವೀಕರಿಸಿತ್ತು. ಆರ್‌ಬಿಐ ಸಿಎಸ್‌ಆರ್‌ ಸ್ಕೀಮ್‌ ಅಡಿ ಒಂದು ವರ್ಷದ ಅವಧಿಗೆ .10 ಲಕ್ಷ ಪಾವತಿಸಿ ದತ್ತು ಸ್ವೀಕರಿಸಲಾಗಿತ್ತು. ಕಳೆದ 5 ವರ್ಷಗಳಿಂದ ಬೃಹತ್‌ ಗಾತ್ರದ ಪ್ರಾಣಿಯನ್ನು ದತ್ತು ಸ್ವೀಕಾರದ ಅವಧಿಯ ನವೀಕರಣ ಮಾಡುವ ಮೂಲಕ ಆರ್‌ಬಿಐ ನೋಟು ಮುದ್ರಣ್‌ ವನ್ಯ ಪ್ರಾಣಿಗಳ ಸಂರಕ್ಷಣೆಯಂತಹ ವಿಷಯದಲ್ಲಿ ತೋರಿಸಿರುವ ಆಸಕ್ತಿಯು ಅತ್ಯಂತ ಪ್ರಶಂಸನೀಯ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!