
ನವದೆಹಲಿ (ಮಾ.25): ಒಂದು ಸಂಬಂಧ ಎಲ್ಲಿಂದ ಎಲ್ಲಿಯವರೆಗೆ ಹೋಗಿ ಮುಟ್ಟಿ ಕೊನೆಗೆ ಒಂದು ಬಹುದೊಡ್ಡ ಆರೋಪಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿದೆ ಪ್ರಕರಣ. ಇಂಗ್ಲೆಂಡ್ ನಲ್ಲಿ (UK) ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್ (UK Chancellor of the Exchequer Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty ), ಭಾರತೀಯ ಮೂಲದ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ನಲ್ಲಿ (Infosys) ಷೇರನ್ನು (Share) ಹೊಂದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ರಷ್ಯಾದಲ್ಲಿ (Russia) ಇನ್ಫೋಸಿಸ್ ಕಂಪನಿ ಎಂದಿನಂತೆ ಕಾರ್ಯನಿವರ್ಹಣೆ ಮಾಡುತ್ತಿದ್ದರೆ, ಇನ್ನೊಂದೆಡೆ ರಷ್ಯಾ ಹಾಗೂ ಇಂಗ್ಲೆಂಡ್ ನಡುವೆ ಆರ್ಥಿಕ ದಿಗ್ಭಂದನಗಳು ಮುಂದುವರಿದಿದೆ. ಇಂಗ್ಲೆಂಡ್ ನಿರ್ಬಂಧಗಳನ್ನು ವಿಧಿಸುತ್ತಿರುವ ನಡುವೆ ರಿಷಿ ಸುನಾಕ್ ಈ ಮೂಲಕ ರಷ್ಯಾದ ಲಿಂಕ್ ಹೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಅಳಿಯ ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್ ಗೆ ತಮ್ಮ ಸ್ವಂತ ಮನೆಯೊಳಗೆ ವ್ಯವಹಾರಗಳಿಗೆ ಅವರ ಸಲಹೆಯನ್ನು ಅನುಸರಿಸುತ್ತಿಲ್ಲವೇ ಎಂದು ನೇರಪ್ರಸಾರದಲ್ಲಿಯೇ ಟಿವಿ ವಾಹಿನಿ ಪ್ರಶ್ನೆ ಮಾಡಿದೆ. ಈ ವೇಳೆ ಉತ್ತರ ನೀಡಿದ ಅವರು ವೈಯಕ್ತಿಕ ಕಂಪನಿಗಳ ಕಾರ್ಯಾಚರಣೆ ಅವರಿಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ.
"ನಿಮ್ಮ ಕುಟುಂಬ ರಷ್ಯಾದೊಂದಿಗೆ ಸಂಪರ್ಕ ಹೊಂದಿದ್ದೀರಿ ಎಂದು ವರದಿಯಾಗಿದೆ, ನಿಮ್ಮ ಪತ್ನಿ ಭಾರತೀಯ ಕನ್ಸಲ್ಟನ್ಸಿ ಸಂಸ್ಥೆ ಇನ್ಫೋಸಿಸ್‌ನಲ್ಲಿ ಪಾಲನ್ನು ಹೊಂದಿದ್ದಾರೆಂದು ವರದಿಯಾಗಿದೆ" ಎಂದು ಖಾಸಗಿ ಟಿವಿ ರಿಷಿ ಸುನಾಕ್ ಗೆ ಪ್ರಶ್ನೆ ಮಾಡಿದೆ. "ಇನ್ಫೋಸಿಸ್ ಕಂಪನಿ ಮಾಸ್ಕೋದಲ್ಲಿ ಕಾರ್ಯ ನಿವರ್ಹಿಸುತ್ತಿದೆ. ಅವರು ಮಾಸ್ಕೋದಲ್ಲಿ ಕಚೇರಿಯನ್ನು ಹೊಂದಿದ್ದಾರೆ, ಅವರಿಗೆ ಅಲ್ಲಿ ವಿತರಣಾ ಕಚೇರಿ ಇದೆ. ಅವರು ಮಾಸ್ಕೋದಲ್ಲಿರುವ ಆಲ್ಫಾ ಬ್ಯಾಂಕ್ ಜೊತೆ ಸಂಪರ್ಕವನ್ನು ಹೊಂದಿದ್ದಾರೆ. ನಿಮ್ಮ ಮನೆಯಲ್ಲೇ ನಿಮ್ಮ ಸಲಹೆಗಳನ್ನು ಅನುರಿಸುತ್ತಿಲ್ಲ, ಆದರೆ, ನೀವು ಬೇರೆಯವರಿಗೆ ಸಲಹೆ ನೀಡುತ್ತಿರುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ.
ಸುನಕ್ ಅವರು "ಚುನಾಯಿತ ರಾಜಕಾರಣಿ" ಎಂದು ಉತ್ತರಿಸಿದರು, ನಾನು ಯಾವುದಕ್ಕೆ ಜವಾಬ್ದಾರನಾಗಿದ್ದೇನೋ ಆ ವಿಚಾರಕ್ಕೆ ಮಾತ್ರವೇ ಸಂದರ್ಶನ ನೀಡುತ್ತಿದ್ದೇನೆ. ನನ್ನ ಪತ್ನಿ ಇದಕ್ಕೆ ಉತ್ತರಿಸಬೇಕಿಲ್ಲ ಎಂದು ಹೇಳಿದರು.
Rishi Sunak ಸಹ ಕೂಡ ಲಾಕ್‌ಡೌನ್ ಪಾರ್ಟಿಗೆ ಹೋಗಿದ್ದರು!
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಡಳಿತದಿಂದ ಅವರ ಕುಟುಂಬವು "ಸಂಭಾವ್ಯವಾಗಿ ಲಾಭ ಪಡೆಯುತ್ತಿದೆಯೇ" ಎಂದು ಪ್ರಶ್ನೆ ಮಾಡಿದಾಗ, "ಅದು ಹಾಗಿಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಹೇಳಿದಂತೆ ಎಲ್ಲಾ ಕಂಪನಿಗಳ ಕಾರ್ಯಾಚರಣೆಗಳು ಅವರಿಗೆ ಬಿಟ್ಟಿದ್ದು' ಎಂದರು. "ನಾವು ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ ಮತ್ತು ನಾವು ಜವಾಬ್ದಾರರಾಗಿರುವ ಎಲ್ಲಾ ಕಂಪನಿಗಳು ಅವುಗಳನ್ನು ಸರಿಯಾಗಿ ಅನುಸರಿಸುತ್ತಿವೆ, ಪುಟಿನ್ ಅವರ ಆಕ್ರಮಣಶೀಲತೆಗೆ ಬಲವಾದ ಸಂದೇಶವನ್ನು ಕಳುಹಿಸುತ್ತವೆ." ಎಂದು ಹೇಳಿದರು.
ಇನ್ಫಿ ನಾರಾಯಣದ ಮೂರ್ತಿ ಮಗಳು ಬ್ರಿಟನ್ ರಾಣಿಗಿಂತ ಶ್ರೀಮಂತೆ! ಆಸ್ತಿ ಬಚ್ಚಿಟ್ಟ ವಿವಾದ
ಇಂಗ್ಲೆಂಡ್ ನಲ್ಲೂ ಅಸ್ತಿತ್ವವನ್ನು ಹೊಂದಿರುವ ಇನ್ಫೋಸಿಸ್ ಕೂಡ ಬಲವಾದ ಸಂದೇಶವನ್ನು ಕಳುಹಿಸಲಿದೆಯೇ ಎಂದು ಅವರನ್ನು ಪ್ರಶ್ನೆ ಮಾಡಲಾಯಿತು. "ನನಗೆ ಈ ಬಗ್ಗೆ ಏನೂ ತಿಳಿದಿಲ್ಲ. ಏಕೆಂದರೆ ನನಗೆ ಆ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಸುನಕ್ ಉತ್ತರಿಸಿದ್ದಾರೆ. ಇನ್ನೊಂದೆಡೆ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಸೇವೆಗಳು ಪ್ರಖ್ಯಾತ ಕಂಪನಿಯಾಗಿರುವ ಇನ್ಫೋಸಿಸ್, ರಷ್ಯಾ ಮತ್ತು ಉಕ್ರೇನ್ ನಡುವೆ "ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಷತಾ ಮೂರ್ತಿ ಇನ್ಫೋಸಿಸ್ ಕಂಪನಿಯಲ್ಲಿ 490 ಮಿಲಿಯನ್ ಪೌಂಡ್ ಮೊತ್ತದ ಷೇರುಗಳನ್ನು ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ