ಕಣ್ಣಿಗೆ ಸೌತೆಕಾಯಿ ಪೀಸು, ಕೂಲ್ ಕೂಲ್ ಮಾಸ್ಕ್... ಈ ಮಾರ್ಜಾಲದ ಶೋಕಿ ನೋಡಿ...

Published : Oct 31, 2022, 09:29 PM IST
ಕಣ್ಣಿಗೆ ಸೌತೆಕಾಯಿ ಪೀಸು, ಕೂಲ್ ಕೂಲ್ ಮಾಸ್ಕ್... ಈ ಮಾರ್ಜಾಲದ ಶೋಕಿ ನೋಡಿ...

ಸಾರಾಂಶ

ಬೆಕ್ಕೊಂದರ ಶೋಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದೆ. 

ಇತ್ತೀಚೆಗೆ ಮನುಷ್ಯರಿಗಿಲ್ಲದ ಸೌಕಾಶಗಳನ್ನು ಪ್ರಾಣಿಗಳು ಅನುಭವಿಸುತ್ತಿವೆ. ಶ್ವಾನಗಳು ಈಜುಕೊಳದಲ್ಲಿ ಈಜಾಡುವ, ಸೋಪಾದ ಮೇಲೆ ಕುಳಿತು ಹಾಯಾಗಿ ಟಿವಿ ನೋಡುತ್ತಾ ನಿದ್ದೆ ಮಾಡುವ ಬೆಕ್ಕುಗಳು ಐಷಾರಾಮಿ ಬೆಡ್‌ಗಳಲ್ಲಿ ಮಲಗಿ ನಿದ್ದೆಗೆ  ಜಾರುವ ಜೊತೆಗೆ ತುಂಟಾಟವಾಡುವ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಬೆಕ್ಕೊಂದರ ಶೋಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದೆ. 

ಇತ್ತೀಚೆಗೆ ಪ್ರಾಣಿಪ್ರಿಯರು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಿಗಿಂತ ತುಸು ಹೆಚ್ಚೆ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಟ್ರೆಂಡ್ ಹೆಚ್ಚಿದೆ. ಅದಕ್ಕೆ ತಕ್ಕಂತೆ ಪ್ರಾಣಿಗಳಿಗಾಗಿಯೇ ಸ್ಪಾ ಸೆಂಟರ್‌ಗಳು (Animal spa center) ಬ್ಯೂಟಿಪಾರ್ಲರ್‌ಗಳು ಹೆಚ್ಚಾಗಿದ್ದು, ಅವುಗಳಿಗೆ ಮಸಾಜ್ (Massage), ಸ್ನಾನಗಳನ್ನು (Bath) ಚಿಕಿತ್ಸೆಯನ್ನು(Medicine) ಈ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ. ಕೆಲವರು ತಮ್ಮ ಪ್ರೀತಿಯ ಶ್ವಾನಗಳನ್ನು ಬೆಕ್ಕುಗಳನ್ನು ಅಲ್ಲಿಗೆ ಕರೆತಂದು ಅವುಗಳ ಉಗುರು ಕತ್ತರಿಸುವುದು, ಹೇರ್ ಟ್ರಿಮ್ ಮಾಡಿಸುವುದು, ಸ್ನಾನ ಮಾಡಿಸುವುದು ಸೇರಿದಂತೆ ಹಲವು ಸವಲತ್ತುಗಳ ಮೂಲಕ ತಮ್ಮಂತೆ ತಮ್ಮ ಪ್ರೀತಿಯ ಪ್ರಾಣಿಗಳು ಎಲ್ಲಾ ಸುಖ ಅನುಭವಿಸಬೇಕು ಎಂದು ಬಯಸುತ್ತಾರೆ. ಅವುಗಳಿಗಾಗಿಯೇ ಮಲಗಲು ಸುಂದರವಾದ ಬೆಡ್‌ಗಳು, ಕಾಲಿಗೆ ಶೂ ಸಾಕ್ಸ್‌ ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.

 

ಅದೇ ರೀತಿ ಇಲ್ಲಿ ಕಾಣಿಸಿರುವ ವಿಡಿಯೋವೊಂದರಲ್ಲಿ ಸುಂದರವಾದ ಪುಟಾಣಿ ಬೆಡ್ ಮೇಲೆ ಬೆಕ್ಕನ್ನು ಮಲಗಿಸಲಾಗಿದ್ದು, ಅದಕ್ಕೆ ಮುಖದಿಂದ ಕಾಲಿನವರೆಗೆ ಮಿಷನೊಂದರಿಂದ ಮಸಾಜ್ ಮಾಡಲಾಗಿದೆ. ನಂತರ ಎರಡು ಕಣ್ಣುಗಳಿಗೆ (Eye) ಸೌತೆಕಾಯಿ (Cucumber) ಫೀಸ್‌ಗಳನ್ನು ಇಡಲಾಗಿದೆ. ಜೊತೆಗೆ ಫೇಸ್ ಮಾಸ್ಕ್‌ (Face Mask) ಕೂಡ ಹಾಕಲಾಗಿದ್ದು, ಬೆಕ್ಕು ಕೂಡ ಆರಾಮವಾಗಿ ಮಲಗಿಕೊಂಡು ಈ ಸ್ವರ್ಗ ಸುಖವನ್ನು ಅನುಭವಿಸುತ್ತಿದೆ. ಬೆಕ್ಕಿನ ಮಾಲಕಿ ಅದರ ಕಾಲುಗಳ ಉಗುರುಗಳನ್ನು ಕತ್ತರಿಸಿ ಹೊಟ್ಟೆಯ ಭಾಗದಲ್ಲಿ ಮಸಾಜ್ ಮಾಡಿ ಅದಕ್ಕೆ ಮತ್ತಷ್ಟು ಆರಾಮ ನೀಡುತ್ತಿದ್ದು, ವಿಡಿಯೋದ ಕೊನೆಯಲ್ಲಿ ಬೆಕ್ಕು ನಿದ್ದೆಗೆ ಜಾರಿದೆ. ಮಾಲಕಿ ಮಾಡಿದ್ದೆಲ್ಲವನ್ನು ಮಾಡಿಸಿಕೊಳ್ಳುವ ಈ ಬೆಕ್ಕು ಸುಖವಾಗಿ ನಿದ್ದೆಗೆ ಜಾರಿದೆ.

Mysuru: ಕೊನೆಗೂ ಪತ್ತೆಯಾಯ್ತು ನಾಪತ್ತೆಯಾಗಿದ್ದ ಬೆಕ್ಕು: ಬಹುಮಾನದ ಹಣ ಪಡೆಯಲು ನಿರಾಕರಣೆ

ಈ ವಿಡಿಯೋ ನೋಡಿದ ಅನೇಕರು ಅಯ್ಯೋ ಈ ಬೆಕ್ಕಿಗಿರುವ ಸುಖ ನಮಗಿಲ್ಲವಲ್ಲ ಎಂದು ಹಲಬುತ್ತಿದ್ದಾರೆ. ಮತ್ತೆ ಕೆಲವರು ನಾನು ಈ ಬೆಕ್ಕು ಆಗಿರಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಈ ಬೆಕ್ಕನ್ನು ನೋಡಿ ನನಗೆ ಅಸೂಯೆಯಾಗುತ್ತಿದೆ. ನನಗಿಂತ ಈ ಬೆಕ್ಕೆ ಸುಖಿಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು dontstopmeowing ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

ಸ್ಮಾರ್ಟ್ ಕ್ಯಾಟ್‌: ಹೊಂಡಕ್ಕೆ ಬಿದ್ದ ಕೀಯನ್ನು ಸಾಹಸದಿಂದ ತೆಗೆದ ಮೀಯಾಂವ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ