ರೈಲಿನಲ್ಲಿ ಚೀನಾ ಆಗಮಿಸಿದ ಕಿಮ್‌ ಜೊಂಗ್‌ ಉನ್‌ : ಏನಿದರ ಒಳರಹಸ್ಯ?

Published : Sep 03, 2025, 07:59 AM IST
Kim Jong-un

ಸಾರಾಂಶ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜೊಂಗ್‌ ಉನ್‌ ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಲೆಟ್‌ಪ್ರೂಫ್ ರೈಲಿನಲ್ಲಿ ಆಗಮಿಸಿದ್ದಾರೆ. 

ಬೀಜಿಂಗ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜೊಂಗ್‌ ಉನ್‌ (Kim Jong-un), ಚೀನಾದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಂಗಳವಾರ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದರು. ವಿಶೇಷವೆಂದರೆ ಕಿಮ್‌ ಹೀಗೆ ಆಗಮಿಸಿದ್ದು ವಿಶೇಷ ಬುಲೆಟ್‌ ಪ್ರೂಫ್‌ ರೈಲಿನಲ್ಲಿ! ಹೌದು. ಉತ್ತರ ಕೊರಿಯಾ ರಾಜಧಾನಿ ಪ್ಯೋಂಗ್ಯಾಂಗ್‌ನಿಂದ ಬೀಜಿಂಗ್‌ಗೆ ಹೆಚ್ಚು ಕಡಿಮೆ 1000 ಕಿ.ಮೀ ದೂರವಿದೆ. ಈ ಪೂರ್ಣ ದೂರವನ್ನು ಅವರು ತಮ್ಮ ವಿಶೇಷ ರೈಲಿನಲ್ಲೇ ಕ್ರಮಿಸಿದ್ದಾರೆ.

ರೈಲಿನಲ್ಲೇ ಏಕೆ ಪ್ರಯಾಣ?

ಉತ್ತರ ಕೊರಿಯಾ ಬಳಿ ಅತ್ಯಾಧುನಿಕ ವಿಮಾನಗಳಿಲ್ಲ. ಜೊತೆಗೆ ಕಿಮ್‌ಗೆ ವಿಮಾನ ಪ್ರಯಾಣ ಭಯ. ಹೀಗಾಗಿ 2011ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶದೊಳಗೆ ದೂರ ಪ್ರದೇಶಕ್ಕೆ ಸಂಚರಿಸಲು, ಮಿತ್ರ ದೇಶಗಳಾದ ರಷ್ಯಾ, ಚೀನಾ, ವಿಯೆಟ್ನಾಂಗೆ ಸಂಚರಿಸಲು ಅವರು ರೈಲನ್ನೇ ಬಳಸುತ್ತಾರೆ.

ಈ ವಿಶೇಷ ರೈಲಿನಲ್ಲಿ ಎಲ್ಲಾ ಸೌಲಭ್ಯಗಳಿವೆ?

ಹಲವು ಬೋಗಿಗಳನ್ನು ಒಳಗೊಂಡ ಈ ವಿಶೇಷ ಬುಲೆಟ್‌ ಪ್ರೂಫ್‌ ರೈಲನ್ನು ಕೇವಲ ಕಿಮ್‌ ಮಾತ್ರ ಬಳಸುತ್ತಾರೆ. ಅದರೊಳಗೆ ಮೀಟಿಂಗ್‌ ಹಾಲ್‌, ಔತಣ ಕೊಠಡಿ, ಭದ್ರತಾ ಸಿಬ್ಬಂದಿ ಇರಲು ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇವೆ. ಕೊರಿಯಾದ ರೀತಿಯಲ್ಲೇ ಚೀನಾದ ರೈಲು ಹಳಿ ವ್ಯವಸ್ಥೆ ಇರುವ ಕಾರಣ ಚೀನಾದೊಳಗೆ ಕಿಮ್‌ ರೈಲು ಸಂಚಾರಕ್ಕೆ ಅಡ್ಡಿ ಇಲ್ಲ. ಆದರೆ ರಷ್ಯಾದಲ್ಲಿ ಹಳಿ ವ್ಯವಸ್ಥೆ ಬೇರೆ ಇರುವ ಕಾರಣ, ಈ ಹಿಂದೆ ರಷ್ಯಾ ಗಡಿಗೆ ಕಿಮ್‌ ರೈಲು ಪ್ರವೇಶ ಮಾಡಿದ ಬಳಿಕ ಅದರ ಚಕ್ರಗಳ ವ್ಯವಸ್ಥೆಯನ್ನೇ ಬದಲಾಯಿಸಲಾಗಿತ್ತು.

ಇದನ್ನೂ ಓದಿ: 1 ದೊಡ್ಡಣ್ಣ VS 3 ದೊಡ್ಡಣ್ಣ : ಟ್ರಂಪ್‌ ವಿರುದ್ಧ ಮೂರೂ ನಾಯಕರ ಒಗ್ಗಟ್ಟಿನ ಟ್ರಂಪ್‌ ಕಾರ್ಡ್‌

ಈ ಹಿಂದೆಯೂ ಸಂಚಾರ:

2023ರಲ್ಲಿ ರಷ್ಯಾಕ್ಕೆ ಕೂಡಾ ಕಿಮ್‌ ರೈಲಲ್ಲೇ ಹೋಗಿದ್ದರು. ಬಳಿಕ ಡೊನಾಲ್ಡ್‌ ಟ್ರಂಪ್‌ರನ್ನು ವಿಯೆಟ್ನಾಂನಲ್ಲಿ ಭೇಟಿ ಮಾಡಲು ರೈಲಿನಲ್ಲೇ 60 ಗಂಟೆ ಪ್ರಯಾಣ ಕೈಗೊಂಡಿದ್ದರು. ಅದಕ್ಕೂ ಮುನ್ನ 2018ರಲ್ಲಿ ಸಿಂಗಾಪುರದಲ್ಲಿ ಟ್ರಂಪ್‌ ಭೇಟಿಗೆ ಚೀನಾ ನೀಡಿದ್ದ ವಿಮಾನದಲ್ಲಿ ತೆರಳಿದ್ದರು.

ಇದನ್ನೂ ಓದಿ: 'ಒನ್‌ ಸೈಡೆಡ್‌ ಡಿಸಾಸ್ಟರ್‌..' ಭಾರತದ ಜೊತೆಗಿನ ಸಂಬಂಧ ವಿಪತ್ತು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!