ಭಾರತೀಯರಿಗೆ ನವರಾತ್ರಿ ಶುಭಕೋರಿ ಸ್ನೇಹ ಬಯಸಿದ ಕೆನಡಾ ಪ್ರಧಾನಿ

Published : Oct 16, 2023, 06:24 AM ISTUpdated : Oct 16, 2023, 06:26 AM IST
ಭಾರತೀಯರಿಗೆ ನವರಾತ್ರಿ ಶುಭಕೋರಿ ಸ್ನೇಹ ಬಯಸಿದ ಕೆನಡಾ ಪ್ರಧಾನಿ

ಸಾರಾಂಶ

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶ ಮತ್ತು ವಿದೇಶಗಳಲ್ಲೂ ಭಾರೀ ಮುಖ ಭಂಗ ಅನುಭವಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಭಾರತೀಯರಿಗೆ ನವರಾತ್ರಿ  ಶುಭ ಕೋರಿದ್ದಾರೆ. ಈ ಮೂಲಕ ಸಿಟ್ಟಿಗೆದ್ದಿದ್ದ ಭಾರತ ಕಡೆಗೆ ಮತ್ತೆ ಸ್ನೇಹದ ಹಸ್ತ ಚಾಚುವ ಯತ್ನ ಮಾಡಿದ್ದಾರೆ.

ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶ ಮತ್ತು ವಿದೇಶಗಳಲ್ಲೂ ಭಾರೀ ಮುಖ ಭಂಗ ಅನುಭವಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಭಾರತೀಯರಿಗೆ ನವರಾತ್ರಿ  ಶುಭ ಕೋರಿದ್ದಾರೆ. ಈ ಮೂಲಕ ಸಿಟ್ಟಿಗೆದ್ದಿದ್ದ ಭಾರತ ಕಡೆಗೆ ಮತ್ತೆ ಸ್ನೇಹದ ಹಸ್ತ ಚಾಚುವ ಯತ್ನ ಮಾಡಿದ್ದಾರೆ.

ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡವಿದೆ ಎಂದು ಟ್ರುಡೋ ಆರೋಪ ಮಾಡಿದ್ದರು. ಜೊತೆಗೆ ಜಗತ್ತಿನ ಹಲವು ದೇಶಗಳ ಬಳಿ ಭಾರತದ ಬಗ್ಗೆ ದೂರಿ ನಗೆಪಾಟಲಿಗೀಡಾಗಿದ್ದರು. ಆದರೆ ಈ ಬಗ್ಗೆ ಭಾರತ ಎಷ್ಟೇ ಕೇಳಿದರೂ ಸಾಕ್ಷ್ಯ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಕೆನಡಾಕ್ಕೆ ವೀಸಾ ನೀಡಿಕೆ ಸ್ಥಗಿತಗೊಳಿಸಿತ್ತು. ಜೊತೆಗೆ ಭಾರತದಲ್ಲಿನ ಕೆನಡಾ ರಾಯಭಾರ ಸಿಬ್ಬಂದಿ (Canadian Embassy in India) ಕಡಿತಕ್ಕೆ ಸೂಚಿಸಿತ್ತು. ಇನ್ನಷ್ಟು ಕಠಿಣ ರಾಜ ತಾಂತ್ರಿಕ ಕ್ರಮದ ಸುಳಿವು ನೀಡಿತ್ತು.

ನಿಜ್ಜರ್ ಹತ್ಯೆಯ ಸಾಕ್ಷ್ಯ ಭಾರತಕ್ಕೆ ಕೊಡಲ್ಲ ಕೋರ್ಟಿಗೆ ಕೊಡೇವೆ: ಕೆನಡಾ

ಹೀಗಾಗಿ ಈ ವಿಷಯದಲ್ಲಿ ಟ್ರುಡೋ ಸ್ವತಃ ತಮ್ಮ ದೇಶ ಮತ್ತು ವಿದೇಶಗಳ ದೃಷ್ಟಿಯಲ್ಲಿ ಏಕಾಂಗಿಯಾಗಿ ಪೇಚಿಗೀಡಾಗಿದ್ದರು. ಜೊತೆಗೆ ಭಾರತದ ಕ್ರಮಗಳು ಕೆನಡಾ ಅರ್ಥ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುವ ಸುಳಿವು ಕಂಡು ಬಂದಿತ್ತು. ಅದರ ಬೆನ್ನಲ್ಲೇ ಟ್ರುಡೋ ಭಾರತೀಯರಿಗೆ ಹಬ್ಬದ ಶುಭ ಕೋರಿ ಸ್ನೇಹದ ಹಸ್ತ ಚಾಚಿದ್ದಾರೆ. ಈ ಮೂಲಕ ಭಾರತದ ಜೊತೆಗೆ ಮತ್ತೆ ಸ್ನೇಹ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಕೆನಡಾದಲ್ಲಿ ಖಲಿಸ್ತಾನ್‌ ಉಗ್ರ  ನಿಜ್ಜರ್ ಹತ್ಯೆಯಾಗಿತ್ತು.

ಕೋಕೇನ್ ಅಮಲಿನಲ್ಲೇ ಇದ್ರಾ ಜಿ20ಗೆ ಬಂದಿದ್ದ ಕೆನಡಾ ಪ್ರಧಾನಿ: ಮಾಜಿ ರಾಯಭಾರ ಸಿಬ್ಬಂದಿ ಹೇಳೋದೇನು? 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ