ಇಸ್ರೇಲ್ ಬೆಂಬಲಿಸಿದ ಅಮೆರಿಕದ ಮೇಲೆ ಹಮಾಸ್ ರೀತಿ ಉಗ್ರ ದಾಳಿಗೆ ಪ್ಲಾನ್, FBI ಎಚ್ಚರಿಕೆ!

Published : Oct 15, 2023, 11:30 PM IST
ಇಸ್ರೇಲ್ ಬೆಂಬಲಿಸಿದ ಅಮೆರಿಕದ ಮೇಲೆ ಹಮಾಸ್ ರೀತಿ ಉಗ್ರ ದಾಳಿಗೆ ಪ್ಲಾನ್, FBI ಎಚ್ಚರಿಕೆ!

ಸಾರಾಂಶ

ಇಸ್ರೇಲ್ ಬೆಂಬಲಿಸಿದ ಅಮೆರಿಕದ ಮೇಲೆ ಹಮಾಸ್ ರೀತಿಯಲ್ಲೇ ಉಗ್ರದಾಳಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಎಫ್‌ಬಿಐ ಎಚ್ಚರಿಕೆ ನೀಡಿದೆ. ಅಮೆರಿಕ ಹೆಜ್ಜೆ ಹೆಜ್ಜೆಗೂ ಮುನ್ನಚ್ಚೆರಿಕೆ ವಹಿಸುವುದೂ ಸೂಕ್ತ ಎಂದು ಎಫ್‌ಬಿಐ ಹೇಳಿದೆ.  

ನ್ಯೂಯಾರ್ಕ್(ಅ.15) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿರುವ ಅಮೆರಿಕ, ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡಿದೆ. ಮುಸ್ಲಿಂ ರಾಷ್ಟ್ರ ಪ್ಯಾಲೆಸ್ತಿನ್ ಹಾಗೂ ಹಮಾಸ್ ವಿರುದ್ಧ ನಿಂತಿರುವ ಅಮೆರಿಕದ ಮೇಲೆ ಕೆಲ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸ್ಕೆಚ್ ರೆಡಿ ಮಾಡಿವೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ದಾಳಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ನರಮೇಧ ರೀತಿಯಲ್ಲೇ ಇರುವ ಸಾಧ್ಯತೆ ಇದೆ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ ನಿರ್ದೇಶಕ ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮಡಿದ ಇಸ್ರೇಲಿಗರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಮಾತು ಆರಂಭಿಸಿದ ಎಫ್‌ಬಿಐ ನಿರ್ದೇಶಕ ಕ್ರಿಸ್ ವ್ರೇ, ಸದ್ಯ ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಮಾಸ್ ಉಗ್ರರು ನಡೆಸಿದ ಮಾರಣಹೋಮವನ್ನು ಅಮರಿಕ ಕಟುವಾಗಿ ಖಂಡಿಸುತ್ತದೆ. ಇತಿಹಾಸದಲ್ಲಿ ಹಲವು ಹಿಂಸಾಚಾರಗಳು, ದಾಳಿಗಳು ನಡೆದಿದೆ. ಇದೀಗ ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಗೆ ಮನುಕುಲವೇ ಬೆಚ್ಚಿಬಿದ್ದಿದೆ. ಕೆಲ ಮೂಲಭೂತವಾದಿಗಳು ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಅವರ ನಂಬಿಕೆ, ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವ್ರೇ ಹೇಳಿದ್ದಾರೆ.

ಇಸ್ರೇಲ್ ದಾಳಿಗೆ ಕಂಗೆಟ್ಟ ಗಾಜಾ, ಸಂಧಾನಕ್ಕೆ ಮೋದಿ ಜೊತೆ ಪ್ಯಾಲೆಸ್ತಿನ್ ಮಾತುಕತೆ ಸಾಧ್ಯತೆ!

ಹಮಾಸ್ ದಾಳಿ ಖಂಡಿಸಿರುವ ಅಮೆರಿಕ ಎಚ್ಚರಿಕೆ ಹೆಜ್ಜೆ ಇಡಬೇಕು. ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ರೀತಿಯಲ್ಲಿ ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ಒಂದರ್ಥದಲ್ಲಿ ಹಮಾಸ್ ದಾಳಿಯ ನಕಲು ಪ್ರತಿ ರೀತಿಯ ಪ್ಲಾನ್ ರೆಡಿಯಾಗಿದೆ ಎಂದು ವ್ರೇ ಎಚ್ಚರಿಸಿದ್ದಾರೆ. ಎಫ್‌ಬಿಐ ನಿರ್ದೇಶಕನ ಮಾತಿನ ಬೆನ್ನಲ್ಲೇ ಅಮರಿಕ ಅಲರ್ಟ್ ಆಗಿದೆ.

ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿದ ಅಮೆರಿಕ ಪ್ಯಾಲೆಸ್ತಿನ್, ಈಜಿಪ್ಟ್, ಇರಾನ್,ಲೆಬೆನಾನ್, ಸಿರಿಯಾಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ಇತ್ತ ಇಸ್ರೇಲ್‌ಗೆ ಯುದ್ಧ ಸಾಮಾಗ್ರಿಗಳನ್ನು ಪೊರೈಸಿದೆ. ಇಷ್ಟೇ ಅಲ್ಲ ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ಮೆಡಿಟರೇನಿಯನ್ ಸಮುದ್ರದ ಮೂಲಕ ತಪ್ಪಿಸಿಕೊಳ್ಳದಂತೆ ಅಮೆರಿಕ ನೌಕಾ ಪಡೆ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ.

ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!

ಈ ಎಲ್ಲಾ ಬೆಳವಣಿಗೆಯಿಂದ ಅಮೆರಿಕದ ಮೇಲೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಉಗ್ರರು ಪ್ಲಾನ್ ಹಾಕಿದ್ದಾರೆ ಎಂದು ಎಫ್‌ಬಿಐ ನಿರ್ದೇಶಕನ ಮಾತು ಭಾರಿ ಮಹತ್ವ ಪಡೆದುಕೊಂಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!