ಗಲಾಟೆ ಮಾಡ್ತಿದ್ದಾರೆ ಅಂತ ಪೊಲೀಸರ ಕರೆಸಿದ್ರು: ಬಂದ ಪೊಲೀಸರು ಜೊತೆಲೇ ಕುಣಿದ್ರು

By Anusha KbFirst Published May 9, 2022, 4:12 PM IST
Highlights
  • ಗಲಾಟೆ ಸದ್ದಿಗೆ ಪೊಲೀಸರ ಕರೆಸಿದ ಸ್ಥಳೀಯ ನಿವಾಸಿಗಳು
  • ಸ್ಥಳಕ್ಕೆ ಬಂದು ಪಂಜಾಬಿ ಹಾಡಿಗೆ ಪೊಲೀಸರ ಸಖತ್ ಡಾನ್ಸ್
  • ಪೊಲೀಸರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
     

ಮದ್ವೆ ಪೂರ್ವ ಸಂತೋಷ ಕೂಟದ ವೇಳೆ ಗಲಾಟೆ ಮಾಡುತ್ತಿದ್ದಾರೆ ಎಂದು ಸುತ್ತಮುತ್ತಲಿನ ಜನ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಾವು ವಿಚಾರಣೆ ನಡೆಸಲು ಬಂದಿದ್ದೇವೆ ಎಂಬುದನ್ನು ಮರೆತು ತಾವು ಕೂಡ ಮದ್ವೆ ಮನೆಯವರ ಖುಷಿಯೊಂದಿಗೆ ಕೈ ಜೋಡಿಸಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಜೊವಾಕ್ವಿನ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ.

ಅನಿವಾಸಿ ಭಾರತೀಯರಾದ ಮಂಡಿವರ್ ಟೂರ್ (Mandiver Toor) ಅವರು ತಮಗೆ ನಿಶ್ಚಿಯಗೊಂಡಿದ್ದ ವರ ರಾಮನ್ (Raman) ಅವರನ್ನು ಒಂದೆರಡು ದಿನಗಳಲ್ಲಿ ವಿವಾಹವಾಗುವವರಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಟ್ರೆಸ್ಸಿಯಲ್ಲಿ (Tracy) ಸಂತೋಷ ಕೂಟ ಹಾಗೂ ಮದುವೆ ಪೂರ್ವ ಸಮಾರಂಭಗಳನ್ನು ಆಯೋಜಿಸಿದ್ದರು. ಮದುವೆಯ ಸ್ನೇಹಿತರು ಮತ್ತು ಸಂಬಂಧಿಕರು ಎಲ್ಲರೂ ಅಲ್ಲಿ ಒಟ್ಟು ಸೇರಿದ್ದರಿಂದ ಇಲ್ಲಿ ಹಾಡು ಕುಣಿತ ಜೋರಾಗಿತ್ತು. ಹೀಗಾಗಿ ಯಾರೋ ಸುತ್ತಮುತ್ತಲಿನ ಜನ  ಸ್ಯಾನ್ ಜೊವಾಕ್ವಿನ್ ಕೌಂಟಿ ಶೆರಿಫ್ ಕಚೇರಿಗೆ ಗದ್ದಲದ ಬಗ್ಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. 

 

ಪೊಲೀಸರನ್ನು ನೋಡಿದ ಕುಟುಂಬಸ್ಥರು ಕೊಂಚ ಚಡಪಡಿಸಿದ್ದಾರೆ. ಆದರೆ ಅಲ್ಲಿಗೆ ಬಂದ ಪೊಲೀಸರು ಮಾಡಿದ್ದನ್ನು ನೋಡಿ ಕುಟುಂಬಸ್ಥರು ನಿರಾಳರಾಗಿದ್ದಾರೆ. ಅಂದ ಹಾಗೆ ಪೊಲೀಸರು ಏನು ಮಾಡಿದ್ರು ಗೊತ್ತ. ಸಖತ್‌ ಆಗಿ ಪಂಜಾಬಿ ಹಾಡುಗಳಿಗೆ ಸ್ಟೆಪ್‌ ಹಾಕ್ತಿದ್ದ ಅಲ್ಲಿದವರೊಂದಿಗೆ ಸೇರಿಕೊಂಡು ತಾವು ಕೂಡ ಸ್ಟೆಪ್ ಹಾಕಿದ್ದಾರೆ. ನಾವು ಹಾಡಿದೆವು, ನಾವು ನೃತ್ಯ ಮಾಡಿದೆವು, ನಾವು ತುಂಬಾ ಉತ್ಸುಕರಾಗಿದ್ದರಿಂದ ನಾವು ಪಾರ್ಟಿ ಮಾಡಿದೆವು. ಇದು ಹೊರಾಂಗಣ ಕಾರ್ಯಕ್ರಮವಾದ್ದರಿಂದ ಸಂಗೀತವು ನಿಜವಾಗಿಯೂ ಜೋರಾಗಿತ್ತು ಎಂದು ಮಂಡಿವರ್ ಅವರ ಕುಟುಂಬದ ಸದಸ್ಯ ಮನ್‌ಪ್ರೀತ್ ತೂರ್ ( Manpreet Toor) ABC10 ಗೆ ತಿಳಿಸಿದ್ದಾರೆ.

ಸೈಕಲ್‌ನಲ್ಲಿ ಫುಡ್‌ ಡೆಲಿವರಿ ಮಾಡ್ತಿದ್ದವನಿಗೆ ಬೈಕ್‌ ತೆಗ್ದು ಕೊಟ್ಟ ಪೊಲೀಸರು

ನಾವು  ಸುತ್ತಲೂ ನೋಡುತ್ತಿರಬೇಕಾದರೆ ಎಲ್ಲರಂತೆ ಪೊಲೀಸರು ಇಲ್ಲಿದ್ದರು. ನಮಗೆ ಒಂತರ ಇರಿಸು ಮುರಿಸಾಯಿತು  ಏಕೆಂದರೆ ಅವರು ಇಡೀ ಪಾರ್ಟಿಯನ್ನು ಮುಚ್ಚುತ್ತಾರೆ ಎಂದು ನಾವು ಭಾವಿಸಿದ್ದೆವು ಆದರೆ ಅವರು ಪಾರ್ಟಿಯನ್ನು ಸ್ಥಗಿತಗೊಳಿಸುವ ಬದಲು ಇತರ ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು ನೃತ್ಯ ಮಾಡಿದರು.ನಾವು ಅವರೊಂದಿಗೆ ಮಾತನಾಡಿದ್ದೇವೆ, ಅವರು ಸೂಪರ್ ಕೂಲ್, ಸೂಪರ್ ಚಿಲ್ ಆಗಿದ್ದರು. ನಾವು ಅವರನ್ನು ನೃತ್ಯ ಮಾಡಲು ಕೇಳಿದೆವು ಮತ್ತು ನಂತರ ನಾನು ಅವರಿಗೆ ಎರಡು ಸ್ಟೆಪ್‌ಗಳನ್ನು ಕಲಿಸಿದೆ ಅವರದನ್ನು ಚೆನ್ನಾಗಿ ಮಾಡಿದರು ಎಂದು ಮನ್‌ಪ್ರಿತ್ ಹೇಳಿದ್ದಾರೆ. ಅವರು ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಂತೆ ಎಲ್ಲರೂ ಹುಚ್ಚರಂತೆ ಕುಣಿಯಲು ಶುರು ಮಾಡಿದರು. ಪ್ರತಿಯೊಬ್ಬರೂ ತಮ್ಮ ಫೋನ್ ಅನ್ನು ಕೈಯಲ್ಲಿ ಹಿಡಿದು ರೆಕಾರ್ಡ್ ಮಾಡುತ್ತಿದ್ದರು, ನಾವು ತುಂಬಾ ಉತ್ಸುಕರಾಗಿದ್ದೆವು ಎಂದರು.

Our Deputies were thrilled with the kindness and hospitality of the guests!

It should be noted that the homeowners did agree to turn the music down. :)

— San Joaquin County Sheriff’s Office (@SJSheriff)

ಕೊರೋನಾ ಜಾಗೃತಿ, ವೈರಲ್ ಆಯ್ತು ಚೆನ್ನೈ ರೈಲ್ವೇ ಪೊಲೀಸರ ಡಾನ್ಸ್!

ಈ ಸಮಾರಂಭದಲ್ಲಿ ಪೊಲೀಸರು ಕುಣಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ವೆಡ್ಡಿಂಗ್ ಫೋಟೋಗ್ರಾಫರ್ ಕಂಡ ಪ್ರೊಡಕ್ಷನ್ಸ್ (Kanda Productions) ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
 

click me!