ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮನಿರ್ದೇಶನ!

By Suvarna News  |  First Published Feb 21, 2024, 6:15 PM IST

ಹೊಸ ಪ್ರಯೋಗಗಳ ಮೂಲಕವೇ ಭಾರಿ ಸದ್ದು ಮಾಡುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹೆಸರು ಇದೀಗ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. 
 


ಸ್ವೀಡನ್(ಫೆ.21) ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಹೆಸರು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ಬೆನ್ನಲ್ಲೇ ಉಕ್ರೇನ್‌ಗೆ ಸ್ಟಾರ್ ಲಿಂಕ್ ಮೂಲಕ ಇಂಟರ್ನೆಟ್ ಸೇವೆ, ಸಂವಹನ ಸೇವೆ ಒದಗಿಸಿದ ಎಲಾನ್ ಮಸ್ಕ್ ಸ್ವಾತಂತ್ರ್ಯದ ಸಮರ್ಥ ಪ್ರತಿಪಾದಕರಾಗಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾರ್ವೆಯ ಸಂಸದ   ಮಾರಿಷಸ್ ನಿಲ್ಸೆನ್ ನಾಮನಿರ್ದೇಶನ ಮಾಡಿದ್ದಾರೆ.

ರಷ್ಯಾ ಆಕ್ರಮದ ವೇಳೆ ಉಕ್ರೇನ್‌ನಲ್ಲಿ ಸಂವಹನ ಸುಲಭಗೊಳಿಸಲು ಎಲಾನ್ ಮಸ್ಕ್ ತಮ್ಮ ಸ್ಟಾರ್‌ಲಿಂಕ್ ಮೂಲಕ ಸೇವೆ ಒದಗಿಸಿದ್ದರು. ರಷ್ಯಾದ ನಿರಂತರ ಆಕ್ರಮಣದ ನಡುವೆ ಉಕ್ರೇನ್ ಯೋಧರು, ಉಕ್ರೇನ್ ನಾಗರೀಕರು ಸಂವಹನ ಮಾಡಲು, ದಾಳಿ ವಿರೋಧಿಸಲು ಸ್ಟಾರ್‌ಲಿಂಗ್ ಉಪಗ್ರಹದ ಇಂಟರ್ನೆಟ್ ಸೇವೆ ಬಳಸಿಕೊಳ್ಳುವ ಅವಕಾಶವನ್ನು ಎಲಾನ್ ಮಸ್ಕ್ ನೀಡಿದ್ದಾರೆ. ಸಂಕಷ್ಟದಲ್ಲಿದ್ದ ದೇಶಕ್ಕೆ ನೆರವಾಗುವ ಮೂಲಕ ತನ್ನ ಬದ್ಧತೆಯನ್ನು ಮೆರೆದಿದಿದ್ದಾರೆ ಎಂದು ಮಾರಿಷಸ್ ನಿಲ್ಸೆನ್ ಹೇಳಿದ್ದಾರೆ.

Tap to resize

Latest Videos

ಮನುಷ್ಯನ ಮೆದುಳಿಗೆ ಚಿಪ್ ಅಳವಡಿಕೆ, ಮೊದಲ ರೋಗಿಯ ಅಪ್‌ಡೇಟ್ ನೀಡಿದ ಎಲಾನ್ ಮಸ್ಕ್!

ಎಲಾನ್ ಮಸ್ಕ್ ಆರಂಭಿಸಿರುವ ಸ್ಟಾರ್‌ಲಿಂಗ್ ಕಂಪನಿ ಸೇವೆಯಿಂದ ಜಗತ್ತಿನ ಸಂವಹನ ಮತ್ತಷ್ಟು ಸುಲಭವಾಗಿದೆ. ಜಾಗತಿಕವಾಗಿ ಸಂವಹನ ಹಾಗೂ ಸಂಪರ್ಕ ಸುಲಭಗೊಳಿಸಲು, ಬಾಹ್ಯಾಕಾಶ ಜ್ಞಾನ ಹೆಚ್ಚಿಸುವಲ್ಲಿ ಹಾಗೂ ವಿಶ್ವವನ್ನು ಹೆಚ್ಚು ಸಂಪರ್ಕಿತ ಹಾಗೂ ಸುರಕ್ಷಿತ ಸ್ಥಳವಾಗಿಸುವಲ್ಲಿ ಎಲಾನ್ ಮಸ್ಕ್ ಸ್ಟಾರ್ ಲಿಂಗ್ ಕಾರ್ಯನಿರ್ವಹಿಸುತ್ತಿದೆ.  ಈ ಮೂಲಕ ಎಸ್ಕ್ ಎಲ್ಲಾ ರಾಷ್ಟ್ರಗಳನ್ನು ಒಂದುಗೂಡಿಸುವ, ಸಮೃದ್ಧಿಯತ್ತ ಸಾಗಲು ನೆರವಾಗಲು ಕೈಜೋಡಿಸಿದ್ದಾರೆ ಎಂದು ಮಾರಿಷಸ್ ಹೇಳಿದ್ದಾರೆ.

ಎಲಾನ್ ಮಸ್ಕ್ ಹುಟ್ಟುಹಾಕಿರುವ ಸಂಸ್ಥೆಗಳು ನೀಡುತ್ತಿರುವ ಸೇವೆಗಳ ಪೈಕಿ ಮುಕ್ತ ವಾಕ್ ಸ್ವಾತಂತ್ರ್ಯ, ಜಾಗತಿಕ ಸಂಪರ್ಕ ಪ್ರಮುಖವಾಗಿದೆ. ಪ್ರಪಂಚದ ಎಲ್ಲಾ ರಾಷ್ಟ್ರಗಳು ಮುಕ್ತ ಸಂವಹನಕ್ಕೆ ಎಲಾನ್ ಮಸ್ಕ್ ಕಂಪನಿಗಳು ಸೇವೆ ನೀಡುತ್ತಿದೆ. ಇದರಿಂದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಕಲಿಯಲು, ದೇಶದ ಯುವ ಸಮುದಾಯಕ್ಕೆ ತಿಳುವಳಿಕೆ ಬೆಳೆಸಲು ಇದು ಅನುವು ಮಾಡಿಕೊಡುತ್ತದೆ. ಇದು ಜಾಗತಿಕ ಸಮೃದ್ಧಿ ಹಾಗೂ ಶಾಂತಿಗೆ ಅತ್ಯವಶ್ಯಕವಾಗಿದೆ ಎಂದು ನಾರ್ವೆ ಸಂಸದ ಹೇಳಿದ್ದಾರೆ.  

 

ಎಲ್ಲರಂಥಲ್ಲ ಎಲಾನ್ ಮಸ್ಕ್; ಒಂದು ಮಿಲಿಯನ್ ಜನರನ್ನು ಮಂಗಳಗ್ರಹಕ್ಕೆ ಕರೆದೊಯ್ಯುವ ಯೋಜನೆಗೆ ಕೈ ಹಾಕಿರೋ ಭೂಪ!

ಎಲಾನ್ ಮಸ್ಕ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಇದೀಗ ಮಾರ್ಚ್ ತಿಂಗಳಲ್ಲಿ ಹೀಗೆ ನಾಮನಿರ್ದೇಶನಗೊಂಡವವರ ಹೆಸರುಗಳನ್ನು ಪಟ್ಟಿ ಮಾಡಿ ಆಯ್ಕೆಗಳು ನಡೆಯಲಿದೆ. ಹಲವು ಸುತ್ತಿನ ಆಯ್ಕೆ ಪ್ರಕ್ರಿಯೆಗಳು ನಡೆಯಲಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಬಳಿಕ ಅಕ್ಟೋಬರ್ ತಿಂಗಳಲ್ಲಿ ಪ್ರಶಶ್ತಿ ವಿಜೇತರ ಅಂತಿಮ ಪಟ್ಟಿ ಘೋಷಣೆ ಮಾಡಲಾಗುತ್ತದೆ. 

click me!