ರೇಸ್‌ ವೇಳೆ ಟಾಸ್‌ ಹಾಕಿದಂತೆ ಸೈಕ್ಲಿಸ್ಟ್‌ನನ್ನು ಎತ್ತಿ ಬಿಸಾಕಿದ ಗೂಳಿ... ವಿಡಿಯೋ ವೈರಲ್‌

Published : Feb 22, 2022, 10:45 AM ISTUpdated : Feb 22, 2022, 11:41 AM IST
ರೇಸ್‌ ವೇಳೆ ಟಾಸ್‌ ಹಾಕಿದಂತೆ ಸೈಕ್ಲಿಸ್ಟ್‌ನನ್ನು ಎತ್ತಿ ಬಿಸಾಕಿದ ಗೂಳಿ... ವಿಡಿಯೋ ವೈರಲ್‌

ಸಾರಾಂಶ

ಸೈಕ್ಲಿಸ್ಟ್‌ನನ್ನು ಎತ್ತಿ ಬಿಸಾಕಿದ ಗೂಳಿ ಸಿಟ್ಟುಗೊಂಡಿದ್ದ ಗೂಳಿಯನ್ನು ಸಾಧು ಎಂದು ತಪ್ಪಾಗಿ ಭಾವಿಸಿದ್ದ ಸೈಕ್ಲಿಸ್ಟ್‌ ಸೆಂಟ್ರಲ್‌ ಕ್ಯಾಲಿಫೋರ್ನಿಯಾದಲ್ಲಿ ಗುಡ್ಡಗಾಡು ಸೈಕ್ಲಿಂಗ್‌ ವೇಳೆ ಘಟನೆ

ಕ್ಯಾಲಿಫೋರ್ನಿಯಾ: ಸೈಕ್ಲಿಂಗ್‌ ರೇಸ್‌ ವೇಳೆ ಧುತ್ತನೇ ಎದುರಾದ ಗೂಳಿಯೊಂದು ಓರ್ವ ಸೈಕ್ಲಿಸ್ಟ್‌ನ ಮೇಲೆ ಗೂಳಿಯೊಂದು ಎರಗಿದ್ದು, ಆತನನ್ನು ಗಾಳಿಯಲ್ಲಿ ಟಾಸ್‌ ಹಾಕಿದಂತೆ ಮೇಲೆಸೆದಿದೆ. ಸೆಂಟ್ರಲ್‌ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಗೂಳಿ ದಾಳಿಗೊಳಗಾದ ಸೈಕ್ಲಿಸ್ಟ್‌ ಟೋನಿ ಇಂಡರ್‌ಬಿಟ್ಜೆನ್ (Tony Inderbitzen) ಅವರು ಈ ಸಿಟ್ಟುಗೊಂಡಿದ್ದ ಗೂಳಿಯನ್ನು ಸಾಧು ಗೂಳಿಯೆಂದು ತಪ್ಪಾಗಿ ಭಾವಿಸಿದ್ದರಂತೆ. ಅಲ್ಲದೇ ಗೂಳಿ ತಮ್ಮನ್ನು ತಲುಪುವ ಮೊದಲು ಅಲ್ಲಿಂದ ಮುಂದೆ ಸಾಗಬಹುದು ಎಂದು ಅವರು ಅಂದುಕೊಂಡಿದ್ದರಂತೆ ಅಷ್ಟರಲ್ಲೇ ಒಮ್ಮೆಗೆ ನುಗ್ಗಿದ ಗೂಳಿ ಇವರ ಎಣಿಕೆಯನ್ನು ತಲೆಕೆಳಗೆ ಮಾಡಿದೆ. 

ಸೆಂಟ್ರಲ್ ಕ್ಯಾಲಿಫೋರ್ನಿಯಾದಾದ್ಯಂತ  ಮಣ್ಣಿನ ರಸ್ತೆ ಅಥವಾ ಗುಡ್ಡಗಾಡು ಸೈಕ್ಲಿಂಗ್‌ನಲ್ಲಿ ಭಾಗವಹಿಸುವ ಸೈಕ್ಲಿಸ್ಟ್‌ಗಳಿಗೆ, ಈ ಘಟನೆಯ ನಂತರ ಸೈಕ್ಲಿಂಗ್‌ ಸ್ಪರ್ಧೆಯು ಭಯಾನಕ ಅನುಭವವಾಗಿ ಮಾರ್ಪಟ್ಟಿದೆ. ಈ ಆಘಾತಕಾರಿ ಕ್ಷಣವು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೇ ಪ್ರಾಣಿಗಳ ನಡವಳಿಕೆ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. 

ಈ ರೇಸ್‌ ನಡೆಸುವ ಬಿಯಾಂಚಿ ರಾಕ್ ಕಾಬ್ಲರ್‌ನ (Bianchi Rock Cobbler) ವೆಬ್‌ಸೈಟ್‌ನಲ್ಲಿ ಈ ರೇಸ್‌ಗೆ ಸ್ಟುಪಿಡ್ಲಿ ಹಾರ್ಡ್ ರೈಡ್ ಎಂದು ಮೊದಲೇ ಪ್ರಚಾರ ನೀಡಲಾಗಿತ್ತು. ಈ ನಡುವೆ ಈ ರೇಸ್‌ ಮಧ್ಯೆ ಗೂಳಿಯೊಂದು ಪ್ರವೇಶಿಸಿದ ಪರಿಣಾಮ ಸೈಕ್ಲಿಸ್ಟ್‌ಗಳಿಗೆ ಈ ರೇಸ್ ಮತ್ತಷ್ಟು ಸವಾಲಾಗಿ ಪರಿಣಮಿಸಿತ್ತು. ಈ ಗೂಳಿಯು ಒಟ್ಟು ನಾಲ್ವರು ಸೈಕ್ಲಿಸ್ಟ್‌ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.ಆದರೆ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ. ಬೇಕರ್ಸ್‌ಫೀಲ್ಡ್ (Bakersfield) ಬಳಿ ಖಾಸಗಿಯಾಗಿ ನಡೆಯುತ್ತಿರುವ ಗೋಶಾಲೆಯೊಂದರ ಬಳಿ ಹೋಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.

ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ... ನೋಡಿ ವೈರಲ್‌ ವಿಡಿಯೋ

ವಿಡಿಯೋದಲ್ಲಿ ಕಾಣಿಸುವಂತೆ ಓರ್ವ ವ್ಯಕ್ತಿ ಗೂಳಿಯ ಮುಂದೆಯೇ ವೇಗವಾಗಿ ಸಾಗಿ ಹೋಗುತ್ತಾನೆ. ಆದರೆ ಅವನ ಹಿಂದೆಯೇ ಬಂದಿದ್ದ ಮತ್ತೊರ್ವನ ಅದೃಷ್ಟ ಕೆಟ್ಟಿತ್ತು. ಆತ ಗೂಳಿ ಮುಂದೆಯೇ ಮುಂದೆ ಸಾಗಲು ಯತ್ನಿಸಿದಾಗ ಸಿಟ್ಟಿಗೆದ್ದ ಗೂಳಿ ಆತನ ಮೇಲೆ ದಾಳಿ ಮಾಡಿ ಗಾಳಿಯಲ್ಲಿ ಟಾಸ್ ಎಸೆದಂತೆ ಆತನನ್ನು ಮೇಲಕ್ಕೆಸೆಯುತ್ತದೆ. ಗೂಳಿ ದಾಳಿಗೊಳಗಾದ ಸೈಕ್ಲಿಸ್ಟ್‌ ಟೋನಿ ಇಂಡರ್‌ಬಿಟ್ಜೆನ್ ಅವರು ಈ ಗೂಳಿಯನ್ನು ಸಾಧು ಎಂದು ಭಾವಿಸಿದ್ದರಂತೆ ಅಲ್ಲದೇ ಅದು ತನ್ನನ್ನು ಸಮೀಪಿಸುವ ಮೊದಲು ತಾನು ಮುಂದೆ ಸಾಗಬಹುದು ಎಂದು ಅಂದುಕೊಂಡಿದ್ದೆ ಎಂದು ಅವರು ಘಟನೆಯ ಬಳಿಕ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ಅದೃಷ್ಟ ತಲೆಕೆಳಗಾಗಿದೆ. 

ನಡುರಸ್ತೆಯಲ್ಲಿ ಗೂಳಿಗಳ ಗುದ್ದಾಟ... ವಿಡಿಯೋ ವೈರಲ್

ಗೂಳಿಯ ದಾಳಿಯಿಂದ ಇಂಡರ್ಬಿಟ್ಜೆನ್ ಅವರ ಕುತ್ತಿಗೆ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಅವು ಗಂಭೀರವಾದ ಗಾಯಗಳಲ್ಲ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಮಣ್ಣಿನ ರಸ್ತೆಯ ಮೇಲೆ ಭಯಾನಕವಾಗಿ ಕಾದಾಡುತ್ತಿದ್ದ ಎರಡು ಎತ್ತುಗಳ ಕಾದಾಟವನ್ನು ಹೋರಿಯೊಂದು ಮಧ್ಯೆ ಬಂದು ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಚಾರ್ಮಿಂಗ್‌ ಎನಿಮಲ್ಸ್‌ ಡೈಲಿ(charminganimalsdaily) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಶಾಂತಿಪಾಲಕ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ನೀಡಲಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ವೀಡಿಯೋದಲ್ಲಿ ಎರಡು ಬಿಳಿ ಬಣ್ಣದ ಎತ್ತುಗಳು ಮಣ್ಣಿನ ರಸ್ತೆಯಲ್ಲಿ ತೀವ್ರವಾಗಿ ಕಾದಾಡುವುದನ್ನು ಕಾಣಬಹುದು. ಎರಡು ಕೋಪಗೊಂಡ ಎತ್ತುಗಳು ತಮ್ಮ ಕೊಂಬುಗಳಿಗೆ ಗುದ್ದಿಕೊಳ್ಳುತ್ತಾ ಪರಸ್ಪರ ತಳ್ಳುವುದನ್ನು ಕಾಣಬಹುದು. ಇದೇ ವೇಳೆ ಅಲ್ಲಿಗೆ ಬಂದ ಕಡುಗಪ್ಪು ಬಣ್ಣದ ಗೂಳಿಯೊಂದು ಇವುಗಳ ನಡುವೆ ಬಂದು ಎರಡು ಗೂಳಿಗಳನ್ನು ಬೇರೆ ಬೇರೆ ಮಾಡಿ ಕಾಳಗವನ್ನು ನಿಲ್ಲಿಸುತ್ತದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ