
ವಾಷಿಂಗ್ಟನ್: ಖಮೇನಿ ಹತ್ಯೆಯ ಮೂಲಕ ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಟ್ರಂಪ್ ಮುಂದಾಗಿದ್ದಾರೆ ಎಂಬ ಊಹೆಯನ್ನು ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ್ದು, 'ನಮ್ಮ ಉದ್ದೇಶ బರೀ ಗೆಲುವು, ಸಂಘರ್ಷವನ್ನು ನಾವು ಆರಂಭಿಸಿಲ್ಲ. ಆದರೆ ಅದು ನಮ್ಮಿಂದಲೇ ಮುಕ್ತಾಯವಾಗುವುದು' ಎಂದಿದೆ.
ಸಮರ ಶುರುವಾದಾಗಿನಿಂದ ಇದೇ ಮೊದಲ ಬಾರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗೆತ್, 'ನಿರಂತರ ಯುದ್ಧ ಮಾಡುತ್ತಿರಲು ಇದು ಇರಾಕ್ (ಇರಾಕ್ ಜತೆ ಅಮೆರಿಕದ 9 ವರ್ಷದ ಯುದ್ಧದ ಉಲ್ಲೇಖ) ಅಲ್ಲ. ಇರಾನ್ ತನ್ನ ಅಣ್ವಸ್ತ್ರ ಅನ್ವೇಷಣೆಯನ್ನು ನಡೆಸುವ ಉದ್ದೇಶದಿಂದ ಬಲಿಷ್ಠ ಕ್ಷಿಪಣಿ ಮತ್ತು ಡ್ರೋನ್‌ಗಳ ಬಲಿಷ್ಠ ಕೋಟೆಯನ್ನು ಕಟ್ಟಿಕೊಂಡಿದೆ. ಈ ಮೂಲಕ ಉದ್ವಿಗ್ನತೆಗೆ ನಾಂದಿ ಹಾಡಿದೆ. ನಮ್ಮ ದಾಳಿಯ ಉದ್ದೇಶ ಇರಾನ್ ಕಿಪಣಿ ಬೆದರಿಕೆಯನ್ನು ಇಲ್ಲವಾಗಿಸುವುದು, ಅವರು ಅಣಸ್ತ ಹೊಂದದಂತೆ ಕಡೆಯಿಂದ ಮಾಡುವುದಷ್ಟೇ ಹೊರತು, ಆಡಳಿತ ಬದಲಾವಣೆ, ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಲ್ಲ. ಇದಕ್ಕೆಲ್ಲಾ ನಾವು ಸಮಯ, ಜೀವ ವ್ಯರ್ಥ ಮಾಡಲ್ಲ, ಗೆಲುವೊಂದೇ ನಮ್ಮ ಗುರಿ' ಎಂದಿದ್ದಾರೆ.
ಅಮೆರಿಕ ಜತೆ ಮಾತುಕತೆ ಇಲ್ಲ: ಇರಾನ್ ತಿರುಗೇಟು
ಟೆಹ್ರಾನ್: ಖಮೇನಿ ಹತ್ಯೆ ಬಳಿಕ ಇರಾನ್‌ನಲ್ಲಿ ಹೊಸ ನಾಯಕತ್ವ ಅಮೆರಿಕದ ಜೊತೆ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್‌ನ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಲಿ ಆಲಿ ಲಾರಿಜಾನಿ ತಳ್ಳಿಹಾಕಿದ್ದಾರೆ. 'ಅಮೆರಿಕದ ಜತೆ ಯಾವ ಮಾತುಕತೆ ಇಲ್ಲ ' ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಅವರು ಎಕ್ಸ್‌ನಲ್ಲಿ ಬರೆದಿರುವ ಅವರು ಜತೆಗೆ ' ಟ್ರಂಪ್ ನಡೆ ಅನಗತ್ಯ ಯುದ್ಧಕ್ಕೆ ದಾರಿ ಮಾಡಿದೆ. ನೇತನ್ಯಾಹು ಅವರನ್ನು ಸಮಾಧಾನ ಪಡಿಸಲು ಅವರು ಸೈನಿಕರನ್ನು ಅಪಾಯಕ್ಕೆ ಸಿಲುಕಿಸಿ ಅಮೆರಿಕನ್ನರಿಗೆ ದ್ರೋಹ ಮಾಡಿದ್ದಾರೆ ಎಂದಿದ್ದಾರೆ. ಮಾಡಿದೆ.
ಇದನ್ನೂ ಓದಿ: ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ