Breaking ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ!

By Suvarna News  |  First Published Jul 7, 2022, 5:22 PM IST

ತೀವ್ರ ಒತ್ತಡದ ಬಳಿಕ ರಾಜೀನಾಮೆ ನೀಡಿದ ಬೊರೀಸ್
ಹೊಸ ಪ್ರಧಾನಿ ನೇಮಕಕ್ಕೆ ತಯಾರಿ, ರಿಶಿ ಮೇಲೆ ಎಲ್ಲರ ಚಿತ್ತ


ಲಂಡನ್(ಜು.07): ತೀವ್ರ ಒತ್ತಡದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದಾರೆ. ಹಗರಣಗಳು, ಸ್ವಪಕ್ಷದ ನಾಯಕರ ಭಾರಿ ವಿರೋಧದಿಂದ ಬೊರೀಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಮುಂದಿನ ಪ್ರಧಾನಿ ಆಯ್ಕೆಯಾಗುವ ವರೆಗೆ ಬೊರಿಸ್ ಜಾನ್ಸನ್ ಹಂಗಾಮಿ ಪ್ರದಾನಿಯಾಗಿ ಮುಂದುವರಿಯಲಿದ್ದಾರೆ. ಅಕ್ಟೋಬರ್ 2022ರಲ್ಲಿ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಅಲ್ಲೀವರೆಗೆ ಬೋರಿಸ್ ಪ್ರದಾನಿಯಾಗಿ ಮುಂದುವರಿಯಲಿದ್ದಾರೆ. 

ಕನ್ಸರ್ವೇಟೀವ್ ಪಕ್ಷದ ನಾಯಕ ಸ್ಥಾನದಿಂದ ಬೊರಿಸ್ ಜಾನ್ಸನ್ ಕೆಳಗಿಳಿದಿದ್ದಾರೆ. ಮುಂದಿನ ಪ್ರಧಾನಿ ಆಯ್ಕೆವರೆಗೂ ಸ್ಥಾನದಲ್ಲಿ ಮುಂದುವರಿಯುವುದಾಗಿ ಬೊರಿಸ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಬೊರೀಸ್ ಹೇಳಿದ್ದಾರೆ.

Tap to resize

Latest Videos

ಬ್ರಿಟನ್ ಪ್ರಧಾನಿ ಬೋರಿಸ್‌ ರಾಜಕೀಯ ಜೀವನ ಸರ್ವನಾಶಗೊಳಿಸಿದ ಐದು ವಿವಾದಗಳು!

ಪ್ರಧಾನಿಯಾಗಿ ನಾನು ಮಾಡಿದ ಕಾರ್ಯಗಳು ನನಗೆ ತೃಪ್ತಿ ತಂದಿದೆ. ಸರ್ಕಾರದ ಸಾಧನೆಗಳಿಗೆ ಹೆಮ್ಮೆಯಾಗುತ್ತಿದೆ. ನನ್ನ ರಾಜೀನಾಮೆಯಿಂದ  ಕೆಲವರು ನಿರಾಶೆಗೊಳ್ಳುತ್ತಾರೆ. ಹಲವರು ನಿರಾಶೆಗೊಂಡಿದ್ದಾರೆ ಎಂದು ತಿಳಿದಿದೆ. ವಿಶ್ವದ ಅತ್ಯುತ್ತಮ ಸ್ಥಾನವನ್ನು ತ್ಯಜಿಸುವುದು ನನಗೂ ಕಷ್ಟದ ಕೆಲಸ. ಇದರಿಂದ ದುಃಖಿತನಾಗಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ. 

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಮಾಡಿದ ಭಾಷಣದಲ್ಲಿ ಬೊರಿಸ್ ಜಾನ್ಸನ್ ಭಾವುಕರಾಗಿದ್ದಾರೆ. 2019 ರಿಂದ 2022ರ ವರೆಗೆ ಬ್ರಿಟನ್ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ವಿವಾದ ಹಗರಣಗಳಲ್ಲೇ ಹೆಚ್ಚಿನ ಸಮಯ ಕಳೆದು ಹೋಗಿತ್ತು. ಕೋವಿಡ್ ಆರಂಭವಾಗುತ್ತಿದ್ದಂತೆ ಜಾನ್ಸನ್ ಮೇಲೆ ವಿವಾದಗಳು,  ಹಗರಣಗಳು ಅಂಟಿಕೊಂಡಿತ್ತು.

ಕೋವಿಡ್ ಕಠಿಣ ನಿರ್ಬಂಧದ ವೇಳೆ ಹುಟ್ಟು ಹಬ್ಬದ ಪಾರ್ಟಿ ಮಾಡಿ ಭಾರಿ ವಿವಾದಕ್ಕೆ ಕಾರಣವಾಗಿದ್ದರು. ಕೋವಿಡ್ ನಿಯಮ ಉಲ್ಲಂಘಿಸಿ ಈ ಪಾರ್ಟಿ ಮಾಡಲಾಗಿತ್ತು. ಹೀಗಾಗಿ ಪೊಲೀಸರು ಜಾನ್ಸನ್‌ಗೆ ದಂಡ ವಿಧಿಸಿದ್ದರು. ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳು ಜಾನ್ಸನ್ ಪ್ರಧಾನಿ ಪಟ್ಟಕ್ಕೆ ಮುಳ್ಳಾಯಿತು. 

ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ಮುಂದಿನ ಪ್ರಧಾನಿ?

ಜಾನ್ಸನ್‌ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿ ಬೆಂಗಳೂರಿನ ಇಸ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ಹಾಗೂ ಬ್ರಿಟನ್‌ ವಿತ್ತ ಸಚಿವ ರಿಷಿ ಸುನಾಕ್‌ ಮತ್ತು ಆರೋಗ್ಯ ಸಚಿವ ಸಾಜಿದ್‌ ಜಾವಿದ್‌ ಮಂಗಳವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಇಲ್ಲಿಂದ ಬೊರಿಸ್ ಜಾನ್ಸನ್ ಮೇಲೆ ರಾಜೀನಾಮೆ ಒತ್ತಡ ಹೆಚ್ಚಾಯಿತು. ಇತ್ತ ಕನ್ಸರ್ವೇಟೀವ್ ಪಾರ್ಟಿಯ ಹಲವು ನಾಯಕರು ಬಂಡಾಯ ಎದ್ದು ರಾಜೀನಾಮೆ ನೀಡಿದ್ದರು. ಇದು ಬೊರಿಸ್ ಜಾನ್ಸನ್‌ಗೆ ತೀವ್ರ ಹಿನ್ನಡೆ ತಂದಿತ್ತು. 

‘ಜನರು ಉತ್ತಮ ಹಾಗೂ ಗಂಭೀರ ಸರ್ಕಾರ ಬಯಸಿದ್ದರು. ಆದರೆ ಈ ನಿರೀಕ್ಷೆಯನ್ನು ಸರ್ಕಾರ ತಲುಪಿಲ್ಲ ಎಂಬುದು ನನ್ನ ಭಾವನೆ. ಇನ್ನು ಮುಂದುವರಿಯಲು ಆಗಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸುನಾಕ್‌ ಹೇಳಿದ್ದರು. 

ಬೊರಿಸ್‌ಗೆ ಸುತ್ತಿಕೊಂಡ ಬ್ರೆಕ್ಸಿಟ್‌ ಸಂಕಷ್ಟ. 
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಹೋಗುವ ಪ್ರಕ್ರಿಯೆಯೇ ‘ಬ್ರೆಕ್ಸಿಟ್‌’. 2017ರ ಮಾಚ್‌ರ್‍ನಲ್ಲೇ ಬ್ರೆಕ್ಸಿಟ್‌ ಪ್ರಕ್ರಿಯೆಯನ್ನು ಬ್ರಿಟನ್‌ ಆರಂಭಿಸಿತ್ತು. ಇದಕ್ಕೆ ಮಾಚ್‌ರ್‍ 2019ರ ಗಡುವನ್ನೂ ಇಟ್ಟುಕೊಂಡಿತ್ತು. ಆದರೆ ಬ್ರಿಟನ್‌ ಸಂಸತ್ತಿನಲ್ಲಿ ಬ್ರೆಕ್ಸಿಟ್‌ ನಿಲುವಳಿಗೆ ಸೋಲಾಗುವ ಮೂಲಕ ಈವರೆಗೂ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರಲು ಆಗಿಲ್ಲ. 2021ರ ಜನವರಿ 31ರ ಗಡುವನ್ನು ಈಗ ಇಟ್ಟುಕೊಳ್ಳಲಾಗಿತ್ತು, ಅಷ್ಟರೊಳಗೆ ಒಕ್ಕೂಟದಿಂದ ಹೊರಬರುವ ಉದ್ದೇಶ ಬ್ರಿಟನ್‌ನದ್ದಾಗಿತ್ತು. ಆದರೆ ಬೊರಿಸ್ ಜಾನ್ಸನ್ ಘೋಷಣೆ ಮಾಡಿದ ರೀತಿಯ ಆಗಿಲ್ಲ. ಇವೆಲ್ಲಾ ಜಾನ್ಸರ್ ರಾಜಕೀಯ ದಾರಿಗೆ ಅಡ್ಡಿಯಾಯಿತು.

click me!