* ರಕ್ತ ಸಂಬಂಧಿಯನ್ನೇ ಮದುವೆಯಾದ ಮಹಿಳೆ
* ಅಣ್ಣನ ಜೊತೆಗೆ ಮದುವೆಯಾದ ತಂಗಿಯಿಂದ ವಿಚಿತ್ರ ಮಗುವಿಗೆ ಜನನ
* ಮಗುವನ್ನು ನೋಡಿ ಬೆಚ್ಚಿ ಬಿದ್ದ ವೈದ್ಯರು
ಉಜ್ಬೇಕಿಸ್ತಾನ್(ಜು.07): ಹಿಂದೂ ಮಾತ್ರವಲ್ಲ ಎಲ್ಲ ಧರ್ಮಗಳಲ್ಲೂ ಕುಟುಂಬದಲ್ಲಿ ಮದುವೆ ಮಾಡಬಾರದು ಎಂಬ ನಂಬಿಕೆ ಇದೆ. ಇದಕ್ಕೆ ಧಾರ್ಮಿಕ ಕಾರಣವಷ್ಟೇ ಅಲ್ಲ, ವೈಜ್ಞಾನಿಕ ಕಾರಣವೂ ಇದೆ. ಮುಸ್ಲಿಂ ಧರ್ಮದಲ್ಲಿ, ನಿಕಟ ಸಂಬಂಧಗಳ ಮದುವೆಯಾದರೂ, ಅವರು ರಕ್ತ ಸಂಬಂಧದಲ್ಲಿ (ಸಹೋದರ ಮತ್ತು ಸಹೋದರಿ) ಮದುವೆ ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿ ಒಂದೇ ಗೋತ್ರದಲ್ಲಿ ಕೂಡಾ ಮದುವೆ ನಡೆಯುವುದಿಲ್ಲ. ಅಂತಹ ಮದುವೆಯು ಹಾನಿಕಾರಕವೆಂದು ಎಂದು ಹೇಳಲಾಗುತ್ತದೆ.
ಆದಾಗ್ಯೂ, ಆಧುನಿಕ ಯುಗದಲ್ಲಿ, ಅನೇಕ ಜನರು ಈ ವಿಷಯಗಳನ್ನು ಮತ್ತು ನಂಬಿಕೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಆದರೆ ಅದರ ಅಡ್ಡಪರಿಣಾಮಗಳು ಸಹ ಕಂಡುಬರುತ್ತವೆ. ಉಜ್ಬೇಕಿಸ್ತಾನ್‌ನ ಸಹೋದರ ಮತ್ತು ಸಹೋದರಿಯ ಮದುವೆ ಇದಕ್ಕೆ ತಕ್ಕ ಉದಾಹರಣೆಯಾಗಿದೆ. ಇಲ್ಲಿ ಸಹೋದರನು ತನ್ನ ಸಹೋದರಿಯನ್ನು ಮದುವೆಯಾಗಿದ್ದು. ಈ ದಂಪತಿಗೆ ಮಗು ಜನಿಸಿದೆ. ಆದರೆ ಈ ಮಗುವನ್ನು ಕಂಡು ಜನರೇ ನಡುಗಿದ್ದಾರೆ. ಮಗು ಅನೇಕ ಅಸ್ವಸ್ಥತೆಗಳೊಂದಿಗೆ ಜನಿಸಿದ್ದು, ಜನಿಸಿದ ಕೇವಲ ಎರಡು ತಾಸಿನಲ್ಲೇ ಮೃತಪಟ್ಟಿದೆ. ಈ ಮಗುವನ್ನು ರಕ್ಷಿಸಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಈ ವಿಷಯ ಜೂನ್ 4 ರಂದು, ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಗುವನ್ನು ಮೊದಲ ಬಾರಿಗೆ ನೋಡಿದವರಿಗೂ ಭಯ, ದೇಹದ ಮೇಲೆ ಹಾವಿನಂತಹ ಪಟ್ಟೆ
ಬ್ರಿಟಿಷ್ ವೆಬ್‌ಸೈಟ್ 'ಮಿರರ್' ವರದಿಯ ಪ್ರಕಾರ, ಉಜ್ಬೇಕಿಸ್ತಾನ್‌ನ ಡಸ್ಟಿಕ್ ಪ್ರಾಂತ್ಯದಲ್ಲಿ ಅಣ್ಣನೊಬ್ಬ ತನ್ನ ತಂಗಿಯನ್ಏ ಮದುವೆಯಾಗಿದ್ದಾನೆ. ಬಳಿಕ ಯುವತಿ ಆಸ್ಪತ್ರೆಯಲ್ಲಿ ಮಗನಿಗೆ ಜನ್ಮ ನೀಡಿದ್ದಾಳೆ. ಈ ಮಗು ಎಷ್ಟು ವಿಚಿತ್ರವಾಗಿತ್ತೆಂದರೆ ಆಪರೇಷನ್ ಥಿಯೇಟರ್ ನಲ್ಲಿ ನೋಡಿದವರೆಲ್ಲ ಮೊದಮೊದಲು ಹೆದರುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ಕೂಡ ಮಗುವನ್ನು ಮುಟ್ಟಲು ಹೆದರುತ್ತಿದ್ದರು. ಈ ಮಗುವಿಗೆ ಅನೇಕ ರೋಗಗಳು ಇದ್ದವು. ಅದರ ಮೈಮೇಲೆ ಹಾವಿನಂತಿರುವ ಪಟ್ಟೆಗಳ ಗುರುತುಗಳಿದ್ದವು. ಜೊತೆಗೆ, ಅದರ ಚರ್ಮವು ಒರಟಾಗಿತ್ತು ಮತ್ತು ಮೀನಿನ ಚರ್ಮದ ಮೇಲಿನ ಕಲೆಗಳಂತೆ ಕಾಣಿಸುತ್ತಿತ್ತು ಎನ್ನಲಾಗಿದೆ.
ಈ ಯೋಗಾಸನ ಮಾಡಿದರೆ ಮಕ್ಕಳು ಆರೋಗ್ಯವಾಗಿರುತ್ತಾರೆ
ಮಗುವಿನ ಚರ್ಮದ ಮೇಲೆ ವಿಚಿತ್ರವಾದ ಗುರುತು: ಅಣ್ಣನ ಜಪತೆ ತಂಗಿಗೆ ಇದು ಎರಡನೇ ಮದುವೆ
ವೈದ್ಯರ ಪ್ರಕಾರ, ಮಗುವಿಗೆ ಇಚ್ಥಿಯೋಸಿಸ್ ಕಾಂಜೆನಿಟಾ ಎಂಬ ಕಾಯಿಲೆ ಇತ್ತು, ಇದು ಬಹಳ ಅಪರೂಪ. ಇದರಲ್ಲಿ, ಚರ್ಮವು ಒರಟಾಗಿರುತ್ತದೆ ಮತ್ತು ದೇಹದ ಮೇಲೆ ವಿಚಿತ್ರವಾದ ಕಲೆಗಳು ರೂಪುಗೊಳ್ಳುತ್ತವೆ, ಇದು ದದ್ದುಗಳಿಂದ ಉಂಟಾಗುತ್ತದೆ. ಈ ದದ್ದುಗಳು ಹೊರಬರುತ್ತಲೇ ಇರುತ್ತವೆ. ಇಷ್ಟೇ ಅಲ್ಲದೇ ಇನ್ನೂ ಹಲವು ದೈಹಿಕ ಸಮಸ್ಯೆಗಳಿದ್ದಿದರಿಂದ ಮಗು ಹೆಚ್ಚು ಕಾಲ ಬದುಕಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಇನ್ನು ಮದುವೆಯಾದ ಯುವತಿಗೆ ಈ ಮೊದಲೂ ಒಂದು ಮಗು ಹುಟ್ಟಿದೆ. ಅದು ಇನ್ನೂ ಜೀವಂತವಾಗಿದೆ ಮತ್ತು ಆರೋಗ್ಯವಾಗಿದೆ ಎನ್ನಲಾಗಿದೆ. ಇನ್ನು ಈಗ ಸಾವನ್ನಪ್ಪಿದ ಮಗು ತನ್ನ ಅಣ್ಣನಿಂದ ಹುಟ್ಟಿಲ್ಲ, ಮೊದಲ ಪತಿಯಿಂದ ಹುಟ್ಟಿದೆ ಎಂದು ಯುವತಿ ಹೇಳಿದ್ದಾಳೆ. ಮೊದಲ ಪತಿ ತನ್ನಿಂದ ದೂರ ಹೋದ ಕಾರಣಆಆಕೆ ಅಣ್ಣನನ್ನೇ ಮದುವೆಯಾದಳು. ಆದರೆ ಈ ಬಾರಿ ಹುಟ್ಟಿದ ಮಗು ಅನಾರೋಗ್ಯಪೀಡಿತವಾಗಿ ಹುಟ್ಟಿದೆ.
ಚಿಕ್ಕ ಮಕ್ಕಳ ಹೃದ್ರೋಗದ ಬಗ್ಗೆ ಇರಲಿ ಎಚ್ಚರ
ಸರ್ಕಾರದಿಂದ ಎಚ್ಚರಿಕೆ
ಮಾಧ್ಯಮ ವರದಿಗಳ ಪ್ರಕಾರ, ಅಲ್ಲಿನ ಸರ್ಕಾರವು ಈ ವಿಷಯವನ್ನು ಅರಿತು ಹೇಳಿಕೆಯನ್ನು ನೀಡಿದ್ದು, ಅದೆಷ್ಟೇ ಒತ್ತಡ, ಕೆಟ್ಟ ಪರಿಸ್ಥಿತಿ ಇದ್ದರೂ ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ಮದುವೆಯಾಗಬಾರದೆಂದು ತಿಳಿಸಿದೆ. ಹಾಗೆ ಮಾಡಲು ಬಯಸಿದರೆ, ನಂತರ ವೈದ್ಯರನ್ನು ಸಂಪರ್ಕಿಸಿ ಮತ್ತು ವೈದ್ಯಕೀಯ ಸಲಹೆಯನ್ನು ಪಡೆದುಕೊಂಡು ಬಳಿಕವೇ ಮುಂದುವರೆಯಬೇಕು ಎಂದೂ ತಿಳಿಸಿದೆ.