ಲಂಡನ್‌ನಲ್ಲಿ 10 ಕೋಟಿ ಕೊರೋನಾ ಲಸಿಕೆ ಉತ್ಪಾದನೆ; ಶೀಘ್ರದಲ್ಲೇ ಭಾರತಕ್ಕೆ ಪೂರೈಕೆ!

Suvarna News   | Asianet News
Published : Jun 07, 2020, 08:39 PM IST
ಲಂಡನ್‌ನಲ್ಲಿ 10 ಕೋಟಿ ಕೊರೋನಾ ಲಸಿಕೆ ಉತ್ಪಾದನೆ; ಶೀಘ್ರದಲ್ಲೇ ಭಾರತಕ್ಕೆ ಪೂರೈಕೆ!

ಸಾರಾಂಶ

ಕೊರೋನಾ ವೈರಸ್‌ಗೆ ಜಗತ್ತು ನರಳಾಡುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಲಾಕ್‌ಡೌನ್ ಮಾಡಿದರೂ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ ಎಲ್ಲಾ ದೇಶಗಳು ಲಸಿಕೆಗಾಗಿ ಕಾಯುತ್ತಿದೆ. ಇದೀಗ ಬ್ರಿಟೀಷ್ ಫಾರ್ಮಸಿಯ ಮಹತ್ವದ ಘೋಷಣೆ, ಜನರಲ್ಲಿ ನೆಮ್ಮದಿ ತಂದಿದೆ.

ನವದೆಹಲಿ(ಜೂ.07): ಕೊರೋನಾ ಅಟ್ಟಹಾಸಕ್ಕೆ ಗುರಿಯಾದ ರಾಷ್ಟ್ರಗಳಲ್ಲಿ ಬ್ರಿಟನ್ ಕೂಡ ಒಂದು. ಬ್ರಿಟನ್ ಸರ್ಕಾರ ಲಸಿಕೆಗಾಗಿ ಕೋಟಿ ಕೋಟಿ ರೂಪಾಯಿ ನೀಡಿದೆ. ಇದೀಗ ಬ್ರಿಟಿಷ್ ಫಾರ್ಮಸಿ ಕಂಪನಿ ಮಹತ್ವದ ಘೋಷಣೆ ಮಾಡಿದೆ. ಬ್ರಟಿಷ್ ಫಾರ್ಮಸಿ ಸಹಯೋಗದಲ್ಲಿ ಕೊರೋನಾ ಲಸಿಕೆ ಸಂಶೋಧನೆ ಮಾಡುತ್ತಿರುವ ಅಸ್ತ್ರಝೆಂಕಾ ಕೊರೋನಾ ಲಸಿಕೆ ಉತ್ಪಾದನೆಗೆ ತಯಾರಿ ಮಾಡಿದೆ. ಸೆಪ್ಟೆಂಬರ್ ವೇಳೆ 10 ಕೋಟಿ ಕೊರೋನಾ ಲಸಿಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಪೂರೈಕೆ ಮಾಡಲು ತಯಾರಿ ಆರಂಭಿಸಿದೆ.

ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!

ಕೊರೋನಾ ಲಸಿಕೆ ಸಂಶೋದನೆ ಮಾಡಲಾಗಿದೆ. ಇದೀಗ ಮಾನವರಿಗೆ ಪ್ರಯೋಗ ನಡೆಯುತ್ತಿದೆ. ಪ್ರಾಥಮಿಕ ಹಂತದ ಯಶಸ್ಸು ಕೂಡ ಸಿಕ್ಕಿದೆ. ಅಂತಿಮ ಹಂತದ ಪ್ರಯೋಗದಲ್ಲಿ ಅಸ್ತ್ರಝೆಂಕಾ ತೊಡಗಿದೆ. ಅಂತಿಮ ಹಂತದ ಪ್ರಯೋಗ ಯಶಸ್ವಿಯಾದರೆ, ಲಸಿಕೆ ಉತ್ಪದನಾ ಕಾರ್ಯ ಆರಂಭಿಸಲಾಗುವುದು ಎಂದು ಅಸ್ತ್ರಝೆಂಕಾ ಹೇಳಿದೆ. ಸೆಪ್ಟೆಂಬರ್ ವೇಳೆಗೆ 10 ಕೋಟಿ ಲಸಿಕೆ ಪೂರೈಕೆ ಮಾಡಲಾಗುವುದು ಎಂದಿದೆ.

ಬ್ರಿಟನ್ ಮಾತ್ರವಲ್ಲ, ಭಾರತ, ಸ್ವಿಟ್ಜರ್‌ಲೆಂಡ್, ನಾರ್ವೇ ಸೇರಿದಂತೆ ಹಲವು ದೇಶಗಳಿಗೆ ಕೊರೋನಾ ಲಸಿಕೆ ಪೂರೈಕೆ ಮಾಡಲು ಬ್ರಿಟನ್ ಫಾರ್ಮಸಿ ಸಜ್ಜಾಗಿದೆ. ವಿಶ್ವದ ಚಿತ್ತ ಇದೀಗ ಬ್ರಿಟನ್ ಫಾರ್ಮಸಿಯತ್ತ ನೆಟ್ಟಿದೆ. ಆದಷ್ಟು ಬೇಗ ಲಸಿಕೆ ತಯಾರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ