
ಕೀನ್ಯಾ(ಜೂ.07): ಕೊರೋನಾ ವೈರಸ್ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ಸರ್ಕಾರಗಳು ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಹಲವರು ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಇದೀಗ ಪಶ್ಚಿಮ ಕೀನ್ಯಾದಲ್ಲಿನ 9 ವರ್ಷದ ಬಾಲಕ ಸ್ಟೀಫನ್ ವಾಮುಕೊಟಾ ನೂತನ ಮಶೀನ್ ತಯಾರಿಸಿದ್ದಾನೆ. ಸೆಮಿ ಆಟೋಮ್ಯಾಟಿಕ್ ಸ್ಯಾನಿಟೈಸರ್ ಕೈ ತೊಳೆಯುವ ಮಶೀನ್ ತಯಾರಿಸಿರುವ ಬಾಲಕನಿಗೆ ಕೀನಾ ಅಧ್ಯಕ್ಷೀಯರ ಪುರಸ್ಕಾರ ಲಭಿಸಿದೆ.
ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!.
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ದೇಶಕ್ಕೆ ಮಹತ್ವದ ಸಂದೇಶ ಸಾರಿರುವ ಹಾಗೂ 9ರ ವಯಸ್ಸಿನಲ್ಲಿ ಸ್ವಯಂ ಶುಚಿತ್ವಕ್ಕೆ ಮಹತ್ವ ನೀಡಿದ ಕಾರಣಕ್ಕೆ ಕೀನಾ ಅಧ್ಯಕ್ಷೀಯರ ಪುರಸ್ಕಾರ ಲಭಿಸಿದೆ. ಇದೀಗ ಸ್ಟೀಫನ್ ಕಾರ್ಯವನ್ನು ದೇಶವೆ ಕೊಂಡಾಡುತ್ತಿದೆ.
‘ಎ’ ರಕ್ತ ಗುಂಪಿನವರಿಗೆ ಕೊರೋನಾ ಸಾಧ್ಯತೆ ಅಧಿಕ!, ಯಾರಿಗೆ ಕಡಿಮೆ? .
ಕೈತೊಳೆಯಲು ಹಾಗೂ ಕೊರೋನಾ ವೈರಸ್‌ನಿಂದ ದಿಂದ ಮಕ್ತವಾಗಲು ಮರದಿಂದ ಕೈತೊಳೆಯುವ, ಶುಚಿತ್ವ ಕಾಪಾಡಿಕೊಳ್ಳುವ ಮಶೀನ್ ತಯಾರಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ಟೀಫನ್ ತಂದೆ, ಸಂತಸ ವ್ಯಕ್ತಪಡಿಸಿದ್ದಾರೆ. ಸ್ಥಲೀಯ ಚಾನೆಲ್ ನೋಡುತ್ತಿದ್ದ ಪುತ್ರ, ಈ ರೀತಿ ಮರದಿಂದ ಕೈ ಶುಚಿತ್ವ ಕಾಪಾಡಿಕೊಳ್ಳುವ ಮಶೀನ್ ತಯಾರಿಸಲು ಮುಂದಾಗಿದ್ದಾನೆ. ಇದಕ್ಕೆ ನಾವು ಕೂಡ ಸಹಕರಿಸಿದ್ದೇವೆ ಎಂದಿದ್ದಾರೆ.
ಮನೆಯಲ್ಲಿದ್ದ ಮರದ ತುಂಡುಗಳು ಹಾಗೂ ಇತರ ವಸ್ತುಗಳಿಂದ ಪುತ್ರ ಕೈತೊಳೆಯುವ ಸೆಮಿ ಆಟೋಮ್ಯಾಟಿಕ್ ಯಂತ್ರ ತಯಾರಿಸಿದ್ದಾನೆ. ಪೆಡಲ್ ಮೂಲಕ ಒತ್ತಿದ್ದರೆ ಸ್ಯಾನಿಟೈಸರ್ ಬರುವ ಸೆಮಿ ಆಟೋಮ್ಯಾಟಿಕ್ ಯಂತ್ರ ತಯಾರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ