ಈ ಜೈಲಿನಲ್ಲಿ ಆಗುತ್ತೆ ಹಣದ ಸುರಿಮಳೆ, 1 ವರ್ಷದಲ್ಲಿ 39 ಲಕ್ಷ ಸಂಪಾದಿಸಿದ ಕೈದಿ

By Mahmad Rafik  |  First Published Dec 1, 2024, 5:32 PM IST

ಜೈಲಿನಲ್ಲಿ ಕೈದಿಗಳು ಉದ್ಯೋಗದ ಮೂಲಕ ಉತ್ತಮ ಸಂಬಳ ಗಳಿಸುತ್ತಿದ್ದಾರೆ. ಕೆಲವು ಕೈದಿಗಳು ವರ್ಷಕ್ಕೆ ₹39 ಲಕ್ಷದವರೆಗೆ ಸಂಪಾದಿಸುತ್ತಿದ್ದಾರೆ, ಇದು ಅವರ ವೃತ್ತಿಪರ ಕೌಶಲ್ಯಗಳನ್ನು ಬಳಸಿಕೊಳ್ಳುವ ಮೂಲಕ ಸಾಧ್ಯವಾಗಿದೆ.


ನವದೆಹಲಿ: ಸಿನಿಮಾಗಳಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಪೊಲೀಸರು ಅಲ್ಲಿ ಕೆಲಸ ಮಾಡಿದ್ದಕ್ಕೆ ಹಣ ನೀಡುತ್ತಿರೋದನ್ನು ಗಮನಿಸಿರುತ್ತೇವೆ. ಇಂದಿಗೂ ಜೈಲಿನಲ್ಲಿರುವ ಕೈದಿಗಳಿಗೆ ಕೆಲಸ  ಮಾಡುವ ಅವಕಾಶ ನೀಡಲಾಗುತ್ತದೆ.  ಈ ಕೆಲಸಕ್ಕೆ ನಿಗಧಿತ ಸಂಬಳವೂ ಸಹ ಸಿಗುತ್ತದೆ.  ಜೈಲಿನಲ್ಲಿ ಶಿಕ್ಷೆಗೆ ಒಳಗಾಗಿರುವ ಕೈದಿಗಳೆಲ್ಲರೂ ಕೆಲಸ ಮಾಡಲೇಬೇಕು. ಯಾವ ಕೆಲಸ ಅನ್ನೋದು ಅವರ ಸಾಮರ್ಥ್ಯ, ದಕ್ಷತೆ ಮತ್ತು ಅರ್ಹತೆಯ ಮೇಲೆ ನಿರ್ಧರಿತವಾಗುತ್ತದೆ. ಈ ರೀತಿ ಕೆಲಸ ಮಾಡುವ ಮೂಲಕ ಜೈಲಿನಲ್ಲಿದ್ದುಕೊಂಡೇ ಸಾವಿರಾರು ರೂಪಾಯಿ ಹಣ ಸಂಪಾದಿಸುತ್ತಾರೆ. ಕೈದಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ  ತೆರೆದು, ಇವರ ಸಂಬಳವನ್ನು ಇದಕ್ಕೆ ಜಮೆ ಮಾಡಲಾಗುತ್ತದೆ.  

ಭಾರತದ ಜೈಲುಗಳಲ್ಲಿರುವ ಕೈದಿಗಳು ಸಾವಿರಾರು ಹಣ ಸಂಪಾದಿಸುತ್ತಾರೆ. ಕೆಲ ಕೈದಿಗಳು ತಿಂಗಳಿಗೆ 3 ಲಕ್ಷ ರೂ.ಗಳಿಗಿಂತ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಜೈಲಿನಲ್ಲಿರುವ ಕೆಲ ಕೈದಿಗಳ ವಾರ್ಷಿಕ ಆದಾಯ 39 ಲಕ್ಷ ರೂಪಾಯಿಗೂ ಅಧಿಕವಾಗಿದೆ. ಇಂದು ನಾವು ನಿಮಗೆ  ಬ್ರಿಟನ್ ಜೈಲಿನ ಬಗ್ಗೆ ಹೇಳುತ್ತಿದ್ದೇವೆ. ಈ ಜೈಲಿನಲ್ಲಿ ಹಣದ ಸುರಿಮಳೆಯೇ ಆಗುತ್ತದೆ.

Tap to resize

Latest Videos

ಬ್ರಿಟನ್ ನ ಜೈಲುಗಳಲ್ಲಿ ಕೈದಿಗಳು ಅತ್ಯಧಿಕ ಸಂಬಳ ಪಡೆಯುತ್ತಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಧ್ಯಮಿಕ ಶಿಕ್ಷಕರು, ತರಬೇತಿ ಪಡೆದ ಶುಶ್ರೂಷಕಿಯರು ಮತ್ತು ಜೀವರಸಾಯನಶಾಸ್ತ್ರಜ್ಞರು ಮತ್ತು ಮನೋವೈದ್ಯರು ಹೆಚ್ಚು ಸಂಬಳ ಪಡೆದುಕೊಳ್ಳುತ್ತಾರೆ. ಯಾವುದೋ ಅಪರಾಧದಲ್ಲಿ ಜೈಲು ಸೇರಿದ್ದರೂ ತಮ್ಮ ಸಾಮರ್ಥ್ಯದಿಂದ ಹಣ ಗಳಿಸುತ್ತಾರೆ. 

ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ಕೈದಿಯ ನಿವ್ವಳ ಸಂಬಳ 36,715 ಪೌಂಡ್‌ ಆಗಿತ್ತು. ಅಂದರೆ 38,84,491 ರೂಪಾಯಿ ಆಗಿತ್ತು.  ಈ ಕೈದಿಯ ಸರಿಸುಮಾರು ಆದಾಯ 46 ಸಾವಿರ ಪೌಂಡ್ (38,84,491 ರೂ.)  ಆಗಿದೆ. ಈ ಹಿಂದಿನ ವರದಿ ಪ್ರಕಾರ, 9 ಕೈದಿಗಳ ನಿವ್ವಳ ಆದಾಯ  22,900 ಪೌಂಡ್‌ಗಳಿಗಿಂತ (ರೂ. 24,22,814) ಅಧಿಕವಾಗಿತ್ತು. 

ಇದನ್ನೂ ಓದಿ: ರೈಲಿನಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇದರಿಂದ ಪ್ರಯಾಣಿಕರಿಗೆ ಏನು ಲಾಭ?

ಅಧಿಕ ಸಂಭಾವನೆ ಪಡೆದ ಕೈದಿಗಳು
ಅತಿ ಹೆಚ್ಚು ಸಂಭಾವನೆ ಪಡೆದ ಖೈದಿ – 38.85 ಲಕ್ಷ ರೂಪಾಯಿ
ಆರೋಗ್ಯ ವೃತ್ತಿಪರ ನರ್ಸ್ – 38.75 ಲಕ್ಷ ರೂಪಾಯಿ
ಬಯೋಕೆಮಿಸ್ಟ್ – 38.71 ಲಕ್ಷ ರೂಪಾಯಿ
ಮನೋವೈದ್ಯ – 38.73 ಲಕ್ಷ ರೂಪಾಯಿ
ಚಾರ್ಟರ್ಡ್ ಸರ್ವೇಯರ್ – 37.07 ಲಕ್ಷ ರೂಪಾಯಿ

ಬ್ರಿಟನ್ ಜೈಲಿನಲ್ಲಿರುವ ಕೈದಿಗಳು ಒಂದು ವರ್ಷದಲ್ಲಿ 238 ಕೋಟಿ ರೂಪಾಯಿ (22.5 ಮಿಲಿಯನ್ ಪೌಂಡ್) ವೇತನ ಪಡೆದುಕೊಂಡಿದ್ದಾರೆ.  ಬ್ರಿಟನ್ ಜೈಲುಗಳಲ್ಲಿ ಪ್ರತಿ ತಿಂಗಳು ಸರಾಸರಿ 1,183 ಕೈದಿಗಳಿಗೆ ಉದ್ಯೋಗ ನೀಡಲಾಗುತ್ತಿದೆ. 

ಇದನ್ನೂ ಓದಿ: 4 ಗಂಟೆ 15 ನಿಮಿಷದ ಸಿನಿಮಾ: 14 ಹೀರೋ, 10 ಹೀರೋಯಿನ್, ಆದರೂ ಫ್ಲಾಪ್?

click me!