ಲಂಡನ್(ನ.05): : ಅಮೆರಿಕ ಮೂಲದ ಮೆರ್ಕ್ ಮತ್ತು ರೆಡ್ಜ್‌ಬ್ಯಾಕ್ ಔಷಧ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಮೊಲ್ನುಪಿರಾವಿರ್’(molnupiravir) ಕೋವಿಡ್ ಮಾತ್ರೆಗೆ(Covid Pills) ಗುರುವಾರ ಬ್ರಿಟನ್(Britain) ಅನುಮೋದನೆ ನೀಡಿದೆ. ಈ ಮೂಲಕ ಜಗತ್ತಿನ ಮೊದಲ ಕೋವಿಡ್ ಗುಳಿಗೆಗೆ ಮಾನ್ಯತೆ ನೀಡಿದ ಮೊದಲ ರಾಷ್ಟ್ರ ಎಂಬ ಖ್ಯಾತಿ ಪಡೆದಿದೆ. ಬ್ರಿಟನ್ ಔಷಧ ಮತ್ತು ಆರೋಗ್ಯ ಉತ್ಪನ್ನ ನಿಯಂತ್ರಣ ಮಂಡಳಿ ಮೊಲ್ನುಪಿರಾವಿರ್ ಗುಳಿಗೆಯನ್ನು ಕೋವಿಡ್ ಸೋಂಕು ದೃಢಪಟ್ಟನಂತರ, ಲಕ್ಷಣಗಳು ಆರಂಭವಾಗುವ 5 ದಿನದ ಒಳಗಾಗಿ ಬಳಕೆ ಮಾಡಲು ಶಿಫಾರಸು ನೀಡಿದೆ.
ವಿದೇಶಗಳಲ್ಲಿ ಸೋಂಕು ಹೈ ಸ್ಪೀಡ್ : ಭಾರೀ ಏರಿ ಮತ್ತೆ ಆತಂಕ
undefined
ಬ್ರಿಟನ್‌ನಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದ್ದು(Coronavirus), ನಿತ್ಯ ಸರಾಸರಿ 40,000 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ವೈರಸ್ ನಿಗ್ರಹಕ್ಕೆ ಹರಸಾಹಸಕ್ಕೆ ಇಳಿದಿರುವ ಬ್ರಿಟನ್ ವೈರಸ್ ವಿರುದ್ಧ ಲಸಿಕೆ(Vaccine) ಜೊತೆಗೆ ಗುಳಿಗೆ(Tablets) ಬಳಕೆಗೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 4.80 ಲಕ್ಷ ಕೋರ್ಸ್ ಮೊಲ್ನುಪಿರಾವಿರ್ ಖರೀದಿಗೆ ಮೆರ್ಕ್ಸ್ ಕಂಪನಿ(Merck's) ಜೊತೆ ಬ್ರಿಟನ್ ಒಪ್ಪಂದ ಮಾಡಿಕೊಂಡಿದೆ.
ಅಮೆರಿಕವೇ ಗುಳಿಗೆಯನ್ನು ಅಭಿವೃದ್ಧಿಪಡಿಸಿದ್ದರೂ ಅದು ಇನ್ನೂ ಬಳಕೆಗೆ ಅನುಮೋದನೆ ನೀಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಅಮೆರಿಕದ ಸಲಹೆಗಾರರು ಇದೇ ತಿಂಗಳು ಸಭೆ ಸೇರಲಿದ್ದಾರೆ. ಈ ನಡುವೆ ಭಾರತದಲ್ಲಿಯೂ ಗುಳಿಗೆಯ ಪ್ರಾಯೋಗಿಕ ಪರೀಕ್ಷೆ ನಡೆಸಲು ಇತ್ತೀಚೆಗಷ್ಟೇ ಅನುಮತಿ ಕೋರಲಾಗಿತ್ತು.
ಕೋವ್ಯಾಕ್ಸಿನ್ ಎಕ್ಸ್‌ಪೈರಿ ಅವಧಿ 12 ತಿಂಗಳಿಗೆ ವಿಸ್ತರಣೆ
ಮೊಲ್ನುಪಿರಾವಿರ್ ಗುಳಿಗೆ ನುಂಗಿದರೆ ಸೋಂಕು ತಗುಲಿರುವ ರೋಗಿ ಸಾಯುವ ಅಪಾಯ ಕಡಿಮೆ ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವಾಗಲೇ ಗುಳಿಗೆ ಸ್ವೀಕರಿಸಿದರೆ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯವೂ ಇಲ್ಲ ಎಂದು ಮೆರ್ಕ್ಸ್ ಕಳೆದ ತಿಂಗಳು ವರದಿ ನೀಡಿತ್ತು.
ಅನುಮತಿ ಸಿಕ್ಕ ಬೆನ್ನಲ್ಲೇ ಮಾತ್ರೆ ಉತ್ಪಾದನೆ ಚುರುಕು:
ಮೂಲ್ನುಪಿರಾವಿರ್ ಕೊರೋನಾ ಮಾತ್ರೆ ಬಳಕೆಗೆ ತುರ್ತು ಅನುಮೋದನೆ ಸಿಕ್ಕಿದೆ. ಇದರ ಬೆನ್ನಲ್ಲೇ ಕೋವಿಡ್ ಮಾತ್ರೆ ಉತ್ಪಾದನೆ ವೇಗವೂ ಹೆಚ್ಚಾಗಿದೆ. ಈ ವರ್ಷದ ಅಂತ್ಯದಲ್ಲಿ 1 ಕೋಟಿ ಮೂಲ್ನುಪಿರಾವಿರ್ ಮಾತ್ರೆ ಉತ್ಪಾದಿಸುವ ವಿಶ್ವಾಸವನ್ನು ಬ್ರಿಟನ್ ವ್ಯಕ್ತಪಡಿಸಿದೆ. ಇನ್ನು 2022ರಲ್ಲಿ ಎರಡು ಕೋಟಿ ಮಾತ್ರಗಳನ್ನು ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ.
ಇನ್ನು 15 ದಿನ ಕೋವಿಡ್ ಪರೀಕ್ಷೆ ಹೆಚ್ಚಿಸಿ: ತಜ್ಞರು
ಮಾತ್ರೆ ತೆಗೆದುಕೊಳ್ಳುವು ವಿಧಾನ ಹೇಗೆ?
ಮೂಲ್ನುಪಿರಾವಿರ್ ಕೊರೋನಾ ಮಾತ್ರೆ ಬಳಕೆ ಹೇಗೆ? ಅನ್ನೋ ಚರ್ಚೆ ಶುರುವಾಗಿದೆ. ಕೊರೋನಾ ದೃಢಪಟ್ಟ ಅಥಲಾ ಕಾಣಿಸಿಕೊಂಡ 5 ದಿನದ ಒಳಗೆ ಈ ಮಾತ್ರೆ ಸೇವಿಸಬೇಕು. ಆದರೆ ಎಷ್ಟು ಪ್ರಮಾಣದಲ್ಲಿ ನೀಡಬೇಕು, ಹೇಗೆ ನೀಡಬೇಕು ಅನ್ನುವ ಕುರಿತು ಬ್ರಿಟನ್ ಆರೋಗ್ಯ ಇಲಾಖೆ ಹಾಗೂ ಸರ್ಕಾರ ನೂತನ ಮಾರ್ಗಸೂಚಿ ಪ್ರಕಟಿಸಿದೆ.
ಅಮೆರಿಕದಿಂದ ಮಾತ್ರೆ ಆಮದು:
ಅನುಮೋದನೆ ಸಿಕ್ಕ ಕಾರಣ ಬ್ರಿಟನ್ ಪಧಾನಿ ಬೊರಿಸ್ ಜಾನ್ಸನ್ ಅಮೆರಿಕದಿಂದ ಮೂಲ್ನುಪಿರಾವಿರ್ ಮಾತ್ರೆ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಲಕ್ಷಾಂತರ ಮಾತ್ರೆಗಳನ್ನು ಆಮದು ಮಾಡಿಕೊಂಡು, ಸದ್ಯ ಬ್ರಿಟನ್‌ನಲ್ಲಿ ತಲೆದೋರಿರುವ ಕೊರೋನಾ ನಿಯಂತ್ರಣಕ್ಕೆ ತರಲು ಜಾನ್ಸನ್ ನಿರ್ಧರಿಸಿದ್ದಾರೆ.
ಬ್ರಿಟನ್‌ನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದೆ. ಕಳೆದ 7 ದಿನಗಳ ಸರಾಸರಿ ಪ್ರಕಾರ, ಪ್ರತಿ ದಿನ 40,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿದೆ. ಇನ್ನು ಅಮೆರಿಕದಲ್ಲಿ ಪ್ರತಿ ದಿನ 74,000 ಕೋರೋನಾ ಕೇಸ್ ಪತ್ತೆಯಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ದಾಖಲಾದ ಅತೀ ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳೇ ಕಾಣಿಸಿಕೊಂಡಿದ್ದಾರೆ.
ಸದ್ಯ ಅಮೆರಿಕದಲ್ಲಿ ಗರಿಷ್ಠ ಪ್ರಮಾಣದ ಕೊರೋನಾ ಕೇಸ್ ಪತ್ತೆಯಾಗುತ್ತಿದೆ. ಬ್ರಿಟನ್ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೊಸ ತಳಿಗಳು ಪತ್ತೆಯಾಗಿರುವುದು ಇದೀಗ ವಿಶ್ವದ ನಿದ್ದೆಗೆಡಿಸಿದೆ.ಇತ್ತ ಭಾರತ ದೇಶಕ್ಕೂ ಆತಂಕ ಕಾಡುತ್ತಿದೆ.