
ನವದೆಹಲಿ (ನ.03) ನಿರೀಕ್ಷೆ ಮಾಡಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ತಾಂತ್ರಿಕ ಸಲಹಾ ಮಂಡಳಿ ಕೋವ್ಯಾಕ್ಸಿನ್ (Covaxin) ತುರ್ತು ಬಳಕೆಗೆ ಅನುಮತಿ ನೀಡಿದೆ. ಭಾರತ್ ಬಯೋಟೆಕ್‌ನ ಲಸಿಕೆ COVAXIN ಗೆ ತುರ್ತು ಬಳಕೆ ಅನುಮತಿ ಸಿಕ್ಕಿದೆ.
ಕೋವಿಡ್-19 ಲಕ್ಷಣಗಳ (Coronavirus) ವಿರುದ್ಧ ಕೋವಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ವೈರಸ್‌ನ ಹೊಸ ಡೆಲ್ಟಾ ರೂಪದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಜೂನ್‌ನಲ್ಲಿ ತಿಳಿಸಿತ್ತು.
ಭಾರತ್ ಬಯೋಟೆಕ್(Bharat Biotech)ನ ಕರೋನಾ ಲಸಿಕೆ ಇನ್ನೂ WHO ನಿಂದ ಸಂಪೂರ್ಣ ಅನುಮೋದನೆಗಾಗಿ ಸಂಪೂರ್ಣ ಕಾಯುತ್ತಿದೆ. WHO ಯ ತಾಂತ್ರಿಕ ಸಲಹಾ ಮಂಡಳಿಯ ಸಭೆಯು ಈ ಬಗ್ಗೆ ಹಲವಾರು ಬಾರಿ ನಡೆಯಿತು, ಕಂಪನಿಯು ಲಸಿಕೆ ಪರಿಣಾಮಕಾರಿಯಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಳಳ ಮಾಡುತ್ತಿರುವ ದಾಖಲೆಗಳನ್ನು ನೀಡಲಾಗಿತ್ತು.
ದೀಪಾವಳಿ ಬಳಿಕ ಕೊರೋನಾ ಮತ್ತೆ ಏಎಇಕೆ, ತಜ್ಞರು ಕೊಟ್ಟ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ್ದು ಎರಡು ಡೋಸ್ ಗಳನ್ನುತೆಗೆದುಕೊಳ್ಳಬೇಕು. 18 ವರ್ಷ ಮೇಲ್ಪಟ್ಟವರಿಗೆ ನೀಡಬೇಕು. ನಾಲ್ಕು ವಾರಗಳ ಅಂತರ ಎಡು ಡೋಸ್ ನಡುವೆ ಕನಿಷ್ಠ ಇರಬೇಕು ಎಂದು ತಿಳಿಸಿದೆ.
ಮೋದಿ ಪ್ರಯತ್ನ; ಜಿ 20 ನಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಗ್ರ ನಾಯಕರೊಂದಿದೆ ಮಾತನಾಡಿದ್ದರು. ಜಿ 20 ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲರೂ ಒಂದಾಗಬೇಕು. ಸಂಶೋಧನೆ ಮತ್ತು ಸಾಧನೆ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದರು.
ಅತಿದೊಡ್ಡ ಲಸಿಕಾ ಅಭಿಯಾನ; ಯಾರೂ ಊಹಿಸಿರದ ರೀತಿ ಭಾರತ ನೂರು ಕೋಟಿ ಲಸಿಕೆ ನೀಡಿಕೆ ಸಾಧನೆ ಮಾಡಿತ್ತು. ಪ್ರಧಾನಿ ಮೋದಿ ದೇಶದ ಜನರನ್ನು, ಕೊರೋನಾ ವೀರರನ್ನು ಅಭಿನಂದಿಸಿದ್ದರು. ಭಾರತದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಆತಂಕ ಮೂಡಿಸಿದ್ದ ಕೇಳಸ ಸಹ ಸಹಜ ಸ್ಥಿತಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ