ಕಚೇರಿಗೆ ಒಂದೇ ಒಂದು ಬಾರಿ ತಡವಾಗಿ ತಲುಪಿದ್ದಕ್ಕೆ ನೌಕರನನ್ನು ಕಂಪನಿ ವಜಾಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಉದ್ಯೋಗಿಗಳು ಕಚೇರಿಗೆ ತಡವಾಗಿ ಬಂದಾಗಲೆಲ್ಲಾ ಬಾಸ್‌ನ ಬೈಯುವಿಕೆ ತಪ್ಪಿಸಿಕೊಳ್ಳಲು 'ಟ್ರಾಫಿಕ್ ಜಾಮ್' ಸೇರಿದಂತೆ ಹಲವು ಕಾರಣಗಳನ್ನು ನೀಡುವುದು ಸಹಜ. ಇನ್ನು ಹೆಚ್ಚೆಂದರೆ ಒಬ್ಬ ವ್ಯಕ್ತಿಯು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ತಡವಾಗಿ ಆಫೀಸಿಗೆ ಬರಬಹುದು. ಆದರೆ ಪ್ರತಿದಿನ ಯಾರಾದರೂ ತಡವಾಗಿ ಬರುತ್ತಿದ್ದರೆ ಬಾಸ್ ಅಥವಾ ಹಿರಿಯ ಅಧಿಕಾರಿಗಳು ಅಸಮಾಧಾನಗೊಳ್ಳುವುದು ಖಚಿತ. ಆದರೆ ಕಚೇರಿಗೆ ಒಂದೇ ಒಂದು ಬಾರಿ ತಡವಾಗಿ ತಲುಪಿದ್ದಕ್ಕೆ ನೌಕರನನ್ನು ಕಂಪನಿ ವಜಾಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ವಾಸ್ತವವಾಗಿ 7 ವರ್ಷಗಳಲ್ಲಿ ಮೊದಲ ಬಾರಿಗೆ, ವ್ಯಕ್ತಿಯೊಬ್ಬರು 20 ನಿಮಿಷ ತಡವಾಗಿ ಕಚೇರಿಗೆ ತಲುಪಿದ್ದರು ಮತ್ತು ಕಂಪನಿಯು ಅವರ ತಪ್ಪಿಗೆ ಅವರನ್ನು ವಜಾಗೊಳಿಸಿದೆ. ಈ ಬೆನ್ನಲ್ಲೇ ಈಗ ಇತರ ಉದ್ಯೋಗಿಗಳು ವ್ಯಕ್ತಿಯನ್ನು ಪುನಃ ಕೆಲಸಕ್ಕೆ ಸೇರಿಸುವಂತೆ ಆಗ್ರಹಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ವಜಾಗೊಂಡ ವ್ಯಕ್ತಿಗೆ ಕೆಲಸವನ್ನು ನೀಡುವಂತೆ ಇತರ ಉದ್ಯೋಗಿಗಳು ಆಗ್ರಹಿಸಿದ್ದಾರೆ.
ಕೆಲಸದಿಂದ ವಜಾ: ಬೋಲ್ಡೋಜರ್ ತರಿಸಿ ಬಾಸ್ ಮನೆ ಬೀಳಿಸಿದ ಮಾಜಿ ಉದ್ಯೋಗಿ
'ನೋ ಸ್ಟಾಪ್ ಇಟ್ ಸ್ಟೆಪ್ ಬ್ರೋ' ಹೆಸರಿನ ಬಳಕೆದಾರ ಸೋಮವಾರ ರೆಡ್ಡಿಟ್‌ನ (Reddit) 'ಆಂಟಿವರ್ಕ್ ಫೋರಂ' (Antiwork forum) ನಲ್ಲಿ ಸುದೀರ್ಘ ಪೋಸ್ಟನ್ನು ಬರೆದಿದ್ದಾರೆ. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದುವರೆಗೆ 78 ಸಾವಿರಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಮತ್ತು 4 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ.
'ನಮ್ಮ ಸಹೋದ್ಯೋಗಿಯೊಬ್ಬರು 7 ವರ್ಷಗಳಿಂದ ತಡವಾಗಿ ಬಂದಿಲ್ಲ. ಮೊದಲ ಬಾರಿಗೆ ತಡವಾಗಿ ಬಂದಿದ್ದಕ್ಕಾಗಿ ಅವರನ್ನು ವಜಾ ಮಾಡಲಾಗಿದೆ. ಇದು ಕಳೆದ ವಾರ ನಡೆದಿತ್ತು. ಇಂದು ಸೋಮವಾರ 20 ನಿಮಿಷ ತಡವಾಗಿ ಬಂದಿದ್ದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಳೆ ನಾನು ಮತ್ತು ನನ್ನ ಉಳಿದ ಒಡನಾಡಿಗಳು ತಡವಾಗಿ ಬರುತ್ತೇವೆ ಮತ್ತು ಅವನು ಮತ್ತೆ ನೇಮಕಗೊಳ್ಳುವವರೆಗೆ ನಾವು ತಡವಾಗಿ ಬರುತ್ತೇವೆ" ಎಂದು ಅವರು ಬರೆದಿದ್ದಾರೆ.
ಕೆಲಸದಿಂದ ವಜಾ ಮಾಡಿದ್ದು ಸರಿಯಾದ ನಿರ್ಧಾರವಲ್ಲ: ನೂರಾರು ಬಳಕೆದಾರರು ಈ ಬಗ್ಗೆ ತಮ್ಮ ಅಭಿಪ್ರಾನ್ನು ಬರೆದಿದ್ದಾರೆ. ಕೆಲವು ಬಳಕೆದಾರರು ಕೇವಲ 20 ನಿಮಿಷಗಳ ವಿಳಂಬದ ಕಾರಣದಿಂದ ವಜಾ ಮಾಡುವುದು ಸರಿಯಲ್ಲ ಎಂದು ಹೇಳಿದರು. ಅದೂ ತನ್ನ ವೃತ್ತಿಜೀವನದಲ್ಲಿ ಯಾರಾದರೂ ಮೊದಲ ಬಾರಿಗೆ ತಡವಾಗಿ ಬಂದಾಗ.
15ಕ್ಕಿಂತ ಅಧಿಕ ಕಾರ್ಮಿಕರನ್ನು ದಿಢೀರ್ ಕೆಲಸದಿಂದ ತೆಗೆದು ಹಾಕಿದ ಫ್ಲಿಪ್ಕಾರ್ಟ್ ಕಂಪನಿ
ಇನ್ನು ಕೆಲವು ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಾವು ತಡವಾಗಿ ಬಂದಾಗ ಎಚ್ಚರಿಕೆಗಳನ್ನು ಪಡೆಯುತ್ತೇವೆ. ಹೆಚ್ಚಾದರೆ ಸಂಬಳ ಕಡಿತವಾಗುತ್ತಿತ್ತು. ಆದರೆ ಕೆಲಸದಿಂದ ವಜಾ ಮಾಡುವುದು ಸರಿಯಲ್ಲ ಎಂದ ಬಳಕೆದಾರರೊಬ್ಬರು ಬರೆದಿದ್ದಾರೆ. ನ್ಯೂಸ್‌ವೀಕ್‌ನ ವರದಿ ಪ್ರಕಾರ, ಈ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.