ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ದೈತ್ಯ ಕಂಟೇನರ್ ಹಡಗು ಬ್ರಿಜ್‌ಗೆ ಢಿಕ್ಕಿಯಾದ ಕಾರಣದಿಂದ ಇಡೀ ಸೇತುವೆ ಕುಸಿದು ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ (ಮಾ.26): ಅಮರಿಕದ ಬಾಲ್ಟಿಮೋರ್‌ನ ಮೇರಿಲ್ಯಾಂಡ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್ ಮಂಗಳವಾರ ಮುಂಜಾನೆ ಕುಸಿದು ಬಿದ್ದಿದೆ. ದೈತ್ಯ ಕಂಟೇನರ್ ಹಡಗು, ಬ್ರಿಜ್‌ಗೆ ಢಿಕ್ಕಿ ಹೊಡೆದ ಕಾರಣಕ್ಕೆ ಇಡೀ ಸೇತುವೆ ನೋಡ ನೋಡುತ್ತಿದ್ದಂತೆಯೇ ಕುಸಿದು ಬಂದಿದೆ. ಇನ್ನು ಸೇತುವೆಯ ಮೇಲೆ ಚಲಿಸುತ್ತಿದ್ದ ವಾಹನಗಳು ಆಟಿಕೆಯಂತೆ ನೀರಿನೊಳಗೆ ಬೀಳುತ್ತಿರುವುದು ವಿಡಿಯೋಲ್ಲಿ ದಾಖಲಾಗಿದೆ. ಮಂಗಳರಾ ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಇದರಿಂದಾಗಿ ಇಡೀ ನಗರದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ಬ್ರಿಜ್ ನಾಟಕೀಯವಾಗಿ ಕುಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಅನಾಹುತದ ಬಗ್ಗೆ ಜನರ ಅರಿವಿಗೆ ಬಂದಿದೆ. ಈ ವಿಡಿಯೋದಲ್ಲಿ ಹಡಗು ಬ್ರಿಜ್‌ಗೆ ತಾಕಿದ ಕ್ಷಣ ಕೂಡ ದಾಲಾಗಿದೆ. ಇದರ ಬೆನ್ನಲ್ಲಿಯೇ ಬೃಹತ್ ಬೆಂಕಿ ಉಂಡೆ ಕಾಣಿಸಿಕೊಂಡಿದ್ದು, ಸೇತುವೆಯ ಮೇಲೆ ಚಲಿಸುತ್ತಿದ್ದ ವಾಹನಗಳನ್ನು ಕ್ಷಣ ಮಾತ್ರದಲ್ಲಿ ನೀರಿಗೆ ಬಿದ್ದಿದ್ದವು. ಸೇತುವೆಯ ಒಂದು ಭಾಗ ಕುಸಿದು ನೀರಿನಲ್ಲಿ ಬಿದ್ದಿದ್ದರೆ, ವಾಹನಗಳ ಅವಶೇಷಗಳು ಕೂಡ ಅವುಗಳಲ್ಲಿ ಕಾಣಿಸಿಕೊಂಡವು.
ಘಟನೆಯ ನಂತರ ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್‌ನಲ್ಲಿ ಸಂಚಾರವನ್ನು ಬಂದ್ ಮಾಡಿ ಆದೇಶ ಹೊರಡಿಸಿತ್ತು. "ಐ-695 ಕೀ ಬ್ರಿಡ್ಜ್‌ನಲ್ಲಿನ ಘಟನೆಗಾಗಿ ಎಲ್ಲಾ ಲೇನ್‌ಗಳು ಎರಡೂ ದಿಕ್ಕುಗಳಲ್ಲಿ ಸಂಪೂರ್ಣವಾಗಿ ಬಂದ್ ಆಗಿವೆ' ಎಂದು ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬ್ರಿಜ್‌ಗೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಹಾಗೂ ನೀರಿನಲ್ಲಿ ಬಿದ್ದವರ ರಕ್ಷಣೆಗಾಗಿ ತುರ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇಡೀ ನಗರದ ಟ್ರಾಫಿಕ್‌ಅನ್ನು ಬೇರೆಡೆಗೆ ತಿರುಗಿಸಲಾಗಿದೆ.
ನಗರದ ಸಾರಿಗೆ ವ್ಯವಸ್ಥೆಗೆ ಈ ಬ್ರಿಜ್ ಪ್ರಮುಖ ಕೊಂಡಿಯಾಗಿತ್ತು. ಆದರೆ, ಇದು ಬಂದ್ ಆಗಿರುವ ಕಾರಣ ದೈನಂದಿನ ಪ್ರಯಾಣಿಕರು ಹಾಗೂ ವಾಣಿಜ್ಯ ವ್ಯವಹಾರಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಟ್ರಾಫಿಕ್ ಅನ್ನು ಮರುನಿರ್ದೇಶಿಸಲು ಬಳಸುದಾರಿಗಳನ್ನು ಹಾಕಲಾಗಿದೆ, ಆದರೆ ಪ್ರಯಾಣದ ಸಮಯ ಮತ್ತು ಲಾಜಿಸ್ಟಿಕ್ಸ್ ಮೇಲೆ ಇವು ದೊಡ್ಡಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ.
ನಿರ್ಮಾಣ ಹಂತದ ಭಾರತದ ಅತಿದೊಡ್ಡ ಸೇತುವೆ ಕುಸಿದು 1 ಸಾವು , 9 ಮಂದಿ ಗಂಭೀರ
ಈ ನಡುವೆ ಬ್ರಿಜ್ ಕುಸಿದು ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾ ಯೂಸರ್‌ಗಳಿಗೆ ಅಚ್ಚರಿ ನೀಡಿದೆ. ಜಲಸಾರಿಗೆಯಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಹೆಚ್ಚಿನವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇಂಥ ದೊಡ್ಡ ಘಟನೆಯ ಬಳಿಕ ತುರ್ತು ಸ್ಪಂದನೆ ವ್ಯಕ್ತವಾಗಿರುವುದಕ್ಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವು ಮಂದಿ ಕಾಣೆಯಾಗಿದ್ದು, ಸಾವು ನೋವುಗಳ ಬಗ್ಗೆ ಇನ್ನಷ್ಟೇ ವಿವರ ಬರಬೇಕಿದೆ.
ಮಿಜೋರಾಂನಲ್ಲಿ ರೈಲ್ವೆ ಸೇತುವೆ ಕುಸಿದು ಕನಿಷ್ಠ 17 ಕಾರ್ಮಿಕರು ಬಲಿ, ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
BREAKING: Ship collides with Francis Scott Key Bridge in Baltimore, causing it to collapse pic.twitter.com/OcOrSjOCRn
— BNO News (@BNONews)🚨⚡ Francis Scott Key Bridge in Baltimore collapsed in river after a Large Container Ship Collides with Key Bridge. 💥 pic.twitter.com/U7z8cQv3aO
— CLOCK (@CLOCKru)